ಉನ್ನತ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾಗಿ ತೆರಳಿದ್ದ ವಿದ್ಯಾರ್ಥಿನಿ ದುರಂತ ಸಾವಿಗೀಡಾಗಿರುವ ಘಟನೆ ವರದಿಯಾಗಿದೆ.
ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗನ್ನವರಂ ಯುವ ವೈದ್ಯೆ ಆಸ್ಟ್ರೇಲಿಯಾದಲ್ಲಿ ದುರಂತ ಸಾವಿಗೀಡಾಗಿದ್ದು ಮೃತಳನ್ನು ಉಜ್ವಲಾ ಎಂದು ಗುರುತಿಸಲಾಗಿದೆ.
ಉಜ್ವಲಾ ಸಾವಿಗೀಡಾಗಿರುವುದಾಗಿ ಆಕೆಯ ಫ್ರೆಂಡ್ಸ್ ಕುಟುಂಬಕ್ಕೆ ಮಾಹಿತಿ ನೀಡಿದ್ದು, ವೈದ್ಯೆಯಾಗಿ ಉನ್ನತ ಸ್ಥಾನಕ್ಕೇರಬೇಕು ಅಂದುಕೊಂಡಿದ್ದ ಮಗಳ ಸಾವು ಹೆತ್ತವರನ್ನು ಬೆಚ್ಚಿ ಬೀಳಿಸಿದೆ. ಉಜ್ವಲಾ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ನ ಬಾಂಡ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಮುಗಿಸಿ, ರಾಯಲ್ ಬ್ರಿಸ್ಬೇನ್ನ ಮಹಿಳಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕೆಲ ದಿನಗಳ ಹಿಂದೆ ಸ್ನೇಹಿತರ ಜೊತೆ ಟ್ರೆಕ್ಕಿಂಗ್ ಹೋಗಿದ್ದ ಏಕಾೇಏಕಿ ನಿಧನರಾಗಿದ್ದಾರೆ. ಮೃತ ಉಜ್ವಲಾ ಅವರ ಪಾರ್ಥಿವ ಶರೀರವನ್ನು ಕೃಷ್ಣಾ ಜಿಲ್ಲೆಯ ಅವರ ಸ್ವಗ್ರಾಮಕ್ಕೆ ಸ್ಥಳಾಂತರಿಸಲಾಗಿದ್ದು, ಉಂಗುತ್ತೂರು ಮಂಡಲದ ಎರ್ಟಕಪಾಡು ಎಂಬಲ್ಲಿ ಆಕೆಯ ಅಂತಿಮ ಸಂಸ್ಕಾರ ನೆರವೇರಿದೆ. ವೈದ್ಯೆಯಾಗಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕಿದ್ದ ಮಗಳ ಹಠಾತ್ ಸಾವಿನಿಂದ ಪೋಷಕರು ಕಂಗಾಲಾಗಿದ್ದಾರೆ.