ಗರ್ಭಿಣಿಯರಿಗೆ ಕೂದಲು, ತ್ವಚೆಯ ಕಾಳಜಿಯ ವಿಚಾರದಲ್ಲಿನ ಅಂತಹ ಕೆಲವು ಸಂಗತಿಗಳ ಬಗ್ಗೆ ಮಾಹಿತಿ ಇಲ್ಲಿದೆ.
ಗರ್ಭಿಣಿಯರು ತಮ್ಮ ದೇಹದ ಯಾವ ಭಾಗದಿಂದ ಬೇಕಾದರೂ ಕೂದಲನ್ನು ತೆಗೆದು ಸ್ವಚ್ಛವಾಗಿಟ್ಟುಕೊಳ್ಳಬಹುದು. ತಲೆ ಕೂದಲನ್ನು ತಮಗೆ ಬೇಕಾದಂತೆ ಕತ್ತರಿಸಿಕೊಳ್ಳಬಹುದು.
ಗರ್ಭಿಣಿಯರು ತಮ್ಮ ದೇಹ ಮತ್ತು ಮುಖದ ಕೂದಲನ್ನು ವ್ಯಾಕ್ಸ್ ಮಾಡಬಹುದು ಅಥವಾ ಥ್ರೆಡ್ ಮಾಡಬಹುದು.
ಗರ್ಭಿಣಿಯರು ಕೂದಲಿನ ಬಣ್ಣವನ್ನು ಹಾಕಿಸಿಕೊಳ್ಳುವುದು ಅಥವಾ ಕಲರಿಂಗ್ ಮಾಡಿಸಿಕೊಳ್ಳುವುದು ಉತ್ತಮ. ವಿಶೇಷವಾಗಿ ಮೊದಲ ತ್ರೈಮಾಸಿಕದಲ್ಲಿ ಕಲರಿಂಗ್ ಮಾಡಿಸಿಕೊಳ್ಳುವುದರಿಂದ ಅವರು ಅದನ್ನು ಎಂಜಾಯ್ ಮಾಡುತ್ತಾರೆ, ಖುಷಿಯಿಂದ ಇರುತ್ತಾರೆ. ಆದರೆ, ಮೊದಲು 3 ತಿಂಗಳಲ್ಲಿ ಮಗುವಿನ ಅಂಗಗಳು ಅಭಿವೃದ್ಧಿ ಹೊಂದುತ್ತಿರುವಾಗ (ಆರ್ಗನೋಜೆನೆಸಿಸ್) ಕೆಲವು ಅತಿಯಾದ ರಾಸಾಯನಿಕವಿರುವ ಕೂದಲು ಬಣ್ಣದಿಂದ ದೂರವಿರಲು ಸಲಹೆ ನೀಡಲಾಗುತ್ತದೆ. ಕಲರಿಂಗ್ ಮಾಡುವುದಾದರೆ ನೆತ್ತಿಯ ಹತ್ತಿರದಲ್ಲಿ ಬಣ್ಣವನ್ನು ಹಚ್ಚಬಾರದು, ಕೇವಲ ಕೂದಲಿನ ತುದಿಗೆ ಮಾತ್ರ ಕಲರಿಂಗ್ ಮಾಡಿಸಬೇಕು. ಗರ್ಭಾವಸ್ಥೆಯಲ್ಲಿ ಕೆರಾಟಿನ್ ಮತ್ತು ರಿಬಾಂಡಿಂಗ್ನಂತಹ ಚಿಕಿತ್ಸೆಗಳನ್ನು ತಪ್ಪಿಸಬೇಕು. ಏಕೆಂದರೆ ಅವುಗಳು ಸಾಮಾನ್ಯವಾಗಿ ಫಾರ್ಮಾಲ್ಡಿಹೈಡ್ ಅನ್ನು ಹೊಂದಿರುತ್ತವೆ. ಇದು ಮಗುವಿನ ಬೆಳವಣಿಗೆಗೆ ಹಾನಿಕಾರಕವಾಗಿದೆ.
ಹುಬ್ಬುಗಳನ್ನು ಥ್ರೆಡ್ ಮಾಡಬಾರದು.
ಶುದ್ಧ ಮತ್ತು ನೈರ್ಮಲ್ಯದ ರೀತಿಯಲ್ಲಿ ಐಬ್ರೋ ಮಾಡಿಸಿಕೊಳ್ಳುವುದರಿಂದ ತೊಂದರೆಯೇನಿಲ್ಲ. ಗರ್ಭಿಣಿಯರು ತಮ್ಮ ಹುಬ್ಬುಗಳನ್ನು ಥ್ರೆಡ್ ಮಾಡಬಹುದು.
ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ ಪಡೆಯಲು ಚರ್ಮಕ್ಕೆ ಸನ್ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳುವುದು ಉತ್ತಮ. ಈ ಸನ್ಸ್ಕ್ರೀನ್ಗಳು ಸಾಮಾನ್ಯವಾಗಿ ಮೈಕ್ರೊನೈಸಿಂಗ್ ಆಕ್ಸೈಡ್ ಅಥವಾ ಐರನ್ ಆಕ್ಸೈಡ್ ಅನ್ನು ಹೊಂದಿರುತ್ತವೆ. ಗರ್ಭಿಣಿಯರು ರಾಸಾಯನಿಕ ಅಂಶ ಹೆಚ್ಚಿರುವ ಸನ್ಸ್ಕ್ರೀನ್ಗಳನ್ನು ಬಳಸದಿರುವುದು ಉತ್ತಮ