ಇತ್ತೀಚೆಗೆ ಸೆಲೆಬ್ರಿಟಿಗಳಿಗೆ ಡೀಪ್ ಫೇಕ್ ವಿಡಿಯೋ ಸಖತ್ ಸದ್ದು ಮಾಡುತ್ತಿವೆ. ಯಾರದ್ದೋ ದೇಹಕ್ಕೆ ನಟಿಯರ ಮುಖವನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗುತ್ತಿದೆ. ಈ ರೀತಿಯ ಕೆಲಸ ಮಾಡುವವರಿಗೆ ತಕ್ಕ ಶಿಕ್ಷೆ ನೀಡಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದ್ದರು ಮತ್ತೆ ಮತ್ತೆ ಅದೇ ಕೆಲಸ ಆಗುತ್ತಿದೆ. ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸದ್ದು ಮಾಡಿತ್ತು. ಇದೀಗ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್ ಆಗಿದೆ.
ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ದಿಂದ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಯುವತಿಯೊಬ್ಬರು ಸಣ್ಣ ಬಟ್ಟೆ ಧರಿಸಿ ಲಿಫ್ಟ್ ಏರುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ರಶ್ಮಿಕಾ ಮಂದಣ್ಣ ಮುಖವನ್ನು ಅಂಟಿಸಲಾಯಿತು. ಅನೇಕರು ಇದು ರಶ್ಮಿಕಾ ಎಂದೇ ಭಾವಿಸಿದ್ದರು. ಜೊತೆಗೆ ಬಟ್ಟೆ ಬಗ್ಗೆ ಅವರಿಗೆ ಪಾಠ ಮಾಡಿದ್ದರು. ಆ ಬಳಿಕ ಇದು ದೊಡ್ಡ ಸುದ್ದಿಯಾಗಿ ಡೀಪ್ ಫೇಕ್ ವಿಡಿಯೋ ವಿರುದ್ಧ ಸಾಕಷ್ಟು ಮಂದಿ ಹರಿಹಾಯ್ದಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳಿತ್ತು. ಆ ಬೆನ್ನಲ್ಲೆ ರಶ್ಮಿಕಾ ಅವರ ಮತ್ತೊಂದು ಡೀಪ್ ಫೇಕ್ ವಿಡಿಯೋ ಸದ್ದು ಮಾಡುತ್ತಿದೆ.
ರಶ್ಮಿಕಾ ಅವರ ಹೊಸ ಡೀಪ್ಫೇಕ್ ವಿಡಿಯೋದಲ್ಲಿ ಯುವತಿಯೊಬ್ಬರು ಡ್ಯಾನ್ಸ್ ಮಾಡುತ್ತಿದ್ದಾರೆ. ಇದಕ್ಕೆ ರಶ್ಮಿಕಾ ಮುಖ ಹಾಕಲಾಗಿದೆ. ಈ ವಿಡಿಯೋಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ‘ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವಿಡಿಯೋ ಮಾಡಬೇಡಿ’ ಎಂದು ಅವರ ಫ್ಯಾನ್ಸ್ ಮನವಿ ಮಾಡಿದ್ದಾರೆ. ಕೆಲವರು ಪೊಲೀಸರ ಬಳಿ ಕ್ರಮಕ್ಕೆ ಆಗ್ರಹಿಸಿದ್ದಾರೆ.