ಬಂಗಾರಪ್ಪ ಅವರ ಕುಟುಂಬ ಒಡೆದುಹೋಗಿದ್ದು ಅವರ ಮನೆ ಒಂದು ಮಾಡಲು ಪ್ರಯತ್ನ ಮಾಡುತ್ತೀರಾ ಎಂಬ ಪ್ರಶ್ನೆಗೆ ನಟ ಹಾಗೂ ಬಂಗಾರಪ್ಪ ಅವರ ಅಳಿಯ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬಂಗಾರಪ್ಪ ಅವರ ಮಗಳು, ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಚುನಾವಣಾ ಕೆಲಸಗಳಿಗಗಿ ಈಗಾಗಲೇ ಶಿವಮೊಗ್ಗದಲ್ಲಿ ಬಾಡಿಗೆ ಮನೆ ಪಡೆದಿರುವ ಗೀತಾ ಶಿವರಾಜ್ ಕುಮಾರ್ ಈಗಾಗಲೇ ಕೆಲಸ ಆರಂಭಿಸಿದ್ದಾರೆ.
ಬಂಗಾರಪ್ಪ ಪುತ್ರರಾದ ಸಚಿವ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ ನಡುವೆ ವೈಮನಸ್ಯವಿದೆ. ಹೀಗಾಗಿ ಬಂಗಾರಪ್ಪ ಮನೆ ಒಡೆದ ಮನೆಯಂತಾಗಿದೆ. ಈ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಅವರಿಗೆ ಬಂಗಾರಪ್ಪ ಮನೆ ಒಂದು ಮಾಡುತ್ತೀರಾ ಎಂಬ ಪ್ರಶ್ನೆ ಎದುರಾಗಿದೆ.
ಬಂಗಾರಪ್ಪ ಅವರ ಮನೆ ಒಂದು ಮಾಡುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವರಾಜ್ ಕುಮಾರ್ ‘ಬಂಗಾರಪ್ಪ ಅವರ ಮನೆ ಒಂದು ಮಾಡಲು ನಾನು ಅವರ ಮನೆ ಅಳಿಯ, ಮಗನಲ್ಲ’ ಎಂದಿದ್ದಾರೆ. ಆ ಮೂಲಕ ಬಂಗಾರಪ್ಪ ಮನೆ ವಿಚಾರದಲ್ಲಿ ತಲೆ ಹಾಕುವುದಿಲ್ಲ ಎಂದಿದ್ದಾರೆ.
ಆದರೆ ಪತ್ನಿ ಗೀತಾರನ್ನು ಸಂಸದೆಯಾಗಿ ನೋಡುವ ಆಸೆಯಿದೆ. ಅವರನ್ನು ಗೆಲ್ಲಿಸಲು ಏನು ಮಾಡಬೇಕೋ ಎಲ್ಲಾ ಮಾಡುತ್ತೇವೆ. ಗೀತಾ ಪರವಾಗಿ ಪ್ರಚಾರ ಮಾಡಲೂ ಸಿದ್ಧ ಎಂದಿದ್ದಾರೆ. ಕರಟಕ ದಮನಕ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಶಿವರಾಜ್ ಕುಮಾರ್ ಇಂದು ಬೆಳಗಾವಿಯಲ್ಲಿ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ.