ಸಿಎಎ (CAA) ಕಾಯ್ದೆ ವಿರೋಧ ಮಾಡುತ್ತಿರುವುದು ಕಾಂಗ್ರೆಸ್ನ (Congress) ಮತ ರಾಜಕಾರಣ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ (BJP) ಕಚೇರಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದ ಸಿಎಎ ಕಾಯ್ದೆಯನ್ನ ಸ್ವಾಗತ ಮಾಡ್ತೀವಿ. ಕಾಂಗ್ರೆಸ್ನವರು ಈ ವಿಷಯ ಇಟ್ಟುಕೊಂಡು ಕೋಮು ಭಾವನೆ ಸೃಷ್ಟಿ ಮಾಡೋಕೆ ಪ್ರಯತ್ನ ಮಾಡ್ತಿದೆ. ಈಗಾಗಲೇ ಕಾಯ್ದೆಯಲ್ಲಿ ಸ್ಪಷ್ಟವಾಗಿ ಇದೆ. ನಮ್ಮ ದೇಶದ ಅಲ್ಪಸಂಖ್ಯಾತರಿಗೆ ಇದು ಅನ್ವಯ ಆಗುವುದಿಲ್ಲ. ಬೇರೆ ದೇಶದ ಅಲ್ಪಸಂಖ್ಯಾತರಿಗೆ ಇದು ಅನ್ವಯ ಆಗುತ್ತದೆ. ಹೀಗಿದ್ರು ಕಾಂಗ್ರೆಸ್ ವಿರೋಧ ಮಾಡ್ತಿದೆ. ಕಾಂಗ್ರೆಸ್ಗೆ ಮಾನವೀಯತೆಯ ಕೊರತೆ ಇದೆ. ಕಾಂಗ್ರೆಸ್ಗೆ ಕಾಮಾಲೆ ಕಣ್ಣು. ಅಲ್ಪಸಂಖ್ಯಾತ ಮತ ಒಲೈಕೆಗಾಗಿ ಸಿಎಎ ವಿರೋಧ ಮಾಡ್ತಿದೆ. ಈ ಕಾಯ್ದೆಯನ್ನು ನಾವು ಸ್ವಾಗತ ಮಾಡುತ್ತೇವೆ ಎಂದಿದ್ದಾರೆ.
ಇದು ಕೇಂದ್ರದ ಕಾಯ್ದೆ, ಯಾರು ಒಪ್ಪಲಿ ಬಿಡಲಿ ದೇಶದಲ್ಲಿ ಈ ಕಾಯ್ದೆ ಜಾರಿ ಮಾಡಲಿದೆ. ಪೌರತ್ವ ಕೊಡೋದು ಕೇಂದ್ರ ಸರ್ಕಾರ. ಇದನ್ನ ವಿರೋಧ ಮಾಡಿದರು ಜಾರಿ ಆಗುತ್ತೆ. ಸಿದ್ದರಾಮಯ್ಯ ಇದನ್ನ ಅರ್ಥ ಮಾಡಿಕೊಳ್ಳಲಿ ಎಂದಿದ್ದಾರೆ.