ಬೆಂಗಳೂರು:- ನಗರದಲ್ಲಿ ರಕ್ತದಾನ ಮಾಡುವವರ ಸಂಖ್ಯೆ ಇಳಿಕೆಯಾಗಿದೆ. ಕಳೆದ ಎರಡು ತಿಂಗಳಿನಿಂದ ರಕ್ತ ಕೊಡುವವರ ಸಂಖ್ಯೆ 40 ಪರ್ಸೆಂಟ್ ಕುಸಿತ ಕಂಡಿರುವುದಾಗಿ ತಿಳಿದು ಬಂದಿದೆ.
ರಕ್ತಕ್ಕಾಗಿ ಬ್ಲಾಂಡ್ ಬ್ಯಾಂಕಿನಿಂದ ಬ್ಲಾಂಡ್ ಬ್ಯಾಂಕ್ ಗೆ ರೋಗಿಗಳು ಅಲೆದಾಟ ನಡೆಸುತ್ತಿದ್ದಾರೆ.
ಒಂದೆಡೆ ನಗರದಲ್ಲಿ ನೀರಿಗಾಗಿ ಬರ ಬಂದ್ರೆ ಮತ್ತೊಂದೆಡೆ ಬೆಂಗಳೂರಿನಲ್ಲಿ ರಕ್ತಕ್ಕೂ ಬರವಾಗಿದೆ. ಬೆಂಗಳೂರಿನಲ್ಲಿ ನಿತ್ಯ 2,500 ಯುನಿಟ್ಗಳಷ್ಟು ರಕ್ತಕ್ಕೆ ಬೇಡಿಕೆ ಇದೆ. ಸದ್ಯಕ್ಕೆ ಬೆಂಗಳೂರಿನಲ್ಲಿ 1000 ರಿಂದ 1300 ಯುನಿಟ್ ಮಾತ್ರ ರಕ್ತ ಸಂಗ್ರಹವಿದೆ
ಕೆಂಪು ರಕ್ತಕಣಕ್ಕೆ ಬೇಡಿಕೆ ಇದೆ. ಅಲ್ಲದೆ, ನೆಗಟಿವ್ ಗ್ರೂಪ್ ರಕ್ತವೇ ಇಲ್ಲದಂತಾಗಿದೆಯಂತೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರಕ್ತದ ಸಮಸ್ಯೆ ಹೆಚ್ಚಾಗುವ ಆತಂಕ ಇದೆ.
ಬಿಸಿಲಿನ ಪ್ರಮಾಣ ಜಾಸ್ತಿಯಾಗಿದೆ. ಹೀಗಾಗಿ ಒಂದಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸ್ತಿವೆ. ಕೆಲ ಐಟಿ – ಬಿಟಿ ಕಂಪನಿಗಳು ಇಂದಿಗೂ ವರ್ಕ್ ಫ್ರಮ್ ಹೋಮ್ ಅನ್ನೆ ಮುಂದುವರಿಸಿವೆ. ಶಾಲಾ – ಕಾಲೇಜುಗಳಲ್ಲಿ ಮಕ್ಕಳಿಗೆ ಪರೀಕ್ಷೆಗಳು ನಡೆಯುತ್ತಿವೆ. ಈ ಕಾರಣದಿಂದಾಗಿ ಎಲ್ಲಿ ರಕ್ತ ಶಿಬಿರ ಹಾಕುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಹಿಂದೆ ಪ್ರತಿದಿನ ಪ್ರತಿ ಬ್ಲಾಂಡ್ ಬ್ಯಾಂಕ್ ಗೆ ಬಂದು ನೂರಾರು ಸಂಖ್ಯೆಯಲ್ಲಿ ಜನ ರಕ್ತದಾನ ಮಾಡುತ್ತಿದ್ದರು
ಈಗ 50 ಜನ ರಕ್ತದಾನ ಮಾಡುವುದೂ ಕಷ್ಟವಾಗಿ, ಜನರಿಗೆ ಸಮಸ್ಯೆ ಆಗುತ್ತಿದೆ. ಸದ್ಯದಲ್ಲಿ ಚುನಾವಣಾ ಸಂಹಿತೆ ಜಾರಿಯಾಗಲಿದ್ದು, ರಕ್ತ ಶಿಬಿರ ಹಾಕುವುದಕ್ಕೆ ಸಾಧ್ಯವಾಗಲ್ಲ. ಆ ವೇಳೆಗೆ ಸಾಧ್ಯವಾದಷ್ಟು ರಕ್ತವನ್ನ ಸಂಗ್ರಹಿಸಿ ಇಟ್ಟುಕೊಳ್ಳಬೇಕಾಗುತ್ತೆ. ಕಳೆದ ಎರಡು ತಿಂಗಳಿಂದ ಕಡಿಮೆ ರಕ್ತ ಸಂಗ್ರಹವಾಗಿರುವ ಕಾರಣ ರಕ್ತದ ಕೊರತೆ ಆಗುವ ಆತಂಕ ಎದುರಾಗಿದೆ, ರೆಡ್ ಕ್ರಾಸ್ ರಕ್ತನಿಧಿ, ರಾಷ್ಟ್ರೋತ್ಥಾನ ರಕ್ತನಿಧಿ, ರೋಟರ್ ರಕ್ತ ನಿಧಿ ಸೇರಿದಂತೆ ವಿವಿಧೆಡೆ ರಕ್ತದ ಕೊರತೆ ಇದೆ.
ಇನ್ನು ಒಂದೊಂದು ಬ್ಲಡ್ ಕ್ಯಾಂಪ್ ಗಳಲ್ಲಿ ಪ್ರತಿ ತಿಂಗಳ 3 ಸಾವಿರ ದಷ್ಟು ಬ್ಲಡ್ ಪ್ಯಾಕ್ ಗಳ ಸಂಗ್ರಹವಾಗುತ್ತಿತ್ತು. ಈಗ ಕೇವಲ 2 ಸಾವಿರದಷ್ಟು ಬ್ಲಾಡ್ ಪ್ಯಾಕ್ ಗಳು ಸಂಗ್ರಹವಾಗಿವೆ ಆದಷ್ಟು ಜನರು ರಕ್ತ ಕೊಡುವುದಕ್ಕೆ ಮುಂದೆ ಬನ್ನಿ ಅಂತ ಬ್ಲಡ್ ಬ್ಯಾಂಕ್ ಗಳ ಮನವಿ ಮಾಡಿದ್ದಾರೆ.