ನವದೆಹಲಿ:- ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸಿ ಪಾಠ ಕೇಳುವುದನ್ನು ನೀವು ಎಂದಾದರೂ ಕೇಳಿದ್ದೀರಾ. ಇದು ತಮಾಷೆ ಅಲ್ಲ. ಇದು ಇಲ್ಲಿನ ರೂಲ್ಸ್.
ವಾಹನ ಸವಾರರ ಕಾಳಜಿಗಾಗಿ ಸಂಚಾರಿ ಪೊಲೀಸರು ಹಲವು ನಿಯಮ ಜಾರಿಗೆ ತಂದರೂ ಕೂಡ ಸವಾರರು ನಿಯಮ ಉಲ್ಲಂಘಿಸೋದು ಕಾಮನ್. ಆದರೆ ನಾವು ಹೇಳಲು ಹೊರಟಿರುವ ಈ ವಿದ್ಯಾರ್ಥಿಗಳು ನಿಯಮ ಎಷ್ಟು ಪಾಲಿಸ್ತಾರೆ ಎಂಬುವುದನ್ನು ನೀವೆ ಒಮ್ಮೆ ಓದಿ.
ಹೌದು, ಜೆಮ್ಶೆದ್ಪುರದ ವರ್ಕರ್ಸ್ ಕಾಲೇಜ್ ಆಫ್ ಮ್ಯಾಂಗೋ ಕಾಲೇಜಿನ ವಿದ್ಯಾರ್ಥಿಗಳು ತರಗತಿಯಲ್ಲಿ ಹೆಲ್ಮೆಟ್ ಧರಿಸಿ ಓದುತ್ತಿರುವ ವೀಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಲ್ಲಿಂದಲೇ ವೈರಲ್ ಆಗಿದೆ.
ಈ ವಿದ್ಯಾರ್ಥಿಗಳು ತರಗತಿಯಲ್ಲಿ ಹೆಲ್ಮೆಟ್ ಧರಿಸಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಕಾಲೇಜಿನ ಕಟ್ಟಡವು ಸಾಕಷ್ಟು ಹಳೆಯದಾಗಿದೆ. ಛಾವಣಿ ಯಾವಾಗ ಬೇಕಾದರೂ ಕುಸಿಯುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಸುರಕ್ಷತೆಗಾಗಿ ತರಗತಿಯೊಳಗೆ ಹೆಲ್ಮೆಟ್ ಧರಿಸಿ ಕುಳಿತುಕೊಳ್ಳುತ್ತಾರೆ.
ಪ್ರಾಂಶುಪಾಲರು ಎಸ್ಪಿ ಮಹಾಲಿಕ್ ಮಾತನಾಡಿ, ಕಟ್ಟಡ ನಿರ್ಮಾಣವಾಗಿ ಎಪ್ಪತ್ತು ವರ್ಷಗಳೇ ಕಳೆದಿವೆ. ಇದರ ದುಸ್ಥಿತಿ ಕುರಿತು ಹಲವು ಬಾರಿ ಉನ್ನತ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.
ಉನ್ನತ ಶಿಕ್ಷಣದ ಬಗ್ಗೆ ಸರ್ಕಾರದ ಅಸಡ್ಡೆ ಧೋರಣೆಯಿಂದ ಹತಾಶರಾಗಿರುವ ಎಜೆಎಸ್ಯು ವಿದ್ಯಾರ್ಥಿ ಸಂಘವು ಸ್ಥಳೀಯ ಶಾಸಕ ಮತ್ತು ಸಚಿವರನ್ನು ಭೇಟಿಯಾಗಿ ಪರಿಸ್ಥಿತಿಯ ಅರಿವು ಮೂಡಿಸಲು ಯೋಜಿಸಿದೆ. ಸಮಸ್ಯೆ ಬಗೆಹರಿಯದೆ ಉಳಿದರೆ, ರಾಜ್ಯಪಾಲರನ್ನು ಸಂಪರ್ಕಿಸುವ ಮೂಲಕ ಮಧ್ಯಸ್ಥಿಕೆ ವಹಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಒಕ್ಕೂಟವು ಸಿದ್ಧವಾಗಿದೆ.