ಇಂದಿಗೂ ಹೆಣ್ಣು ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಕಿವಿ ಚುಚ್ಚಿ ವಿವಿಧ ರೀತಿಯ ಕಿವಿ ಓಲೆಗಳನ್ನು ಹಾಕಲಾಗುತ್ತದೆ. ಕಿವಿ ಚುಚ್ಚಿಕೊಳ್ಳದಿದ್ದಲ್ಲಿ ಅಥವಾ ಹೆಣ್ಣು ಮಕ್ಕಳು ಓಲೆಗಳನ್ನು ಹಾಕಿಕೊಳ್ಳದಿದ್ದಲ್ಲಿ ಅವರ ಅಂದ ಅಪೂರ್ಣವೆನಿಸುತ್ತದೆ. ಇದನ್ನು ಹಾಕಿಕೊಳ್ಳುವುದರಿಂದ ಮಹಿಳೆಯರ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತದೆ, ಆದರೆ ಕಿವಿ ಚುಚ್ಚುವ ಸಂಪ್ರದಾಯದ ಹಿಂದೆ ಅನೇಕ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ ಎಂದು ನಿಮಗೆ ತಿಳಿದಿದೆಯೇ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಿಂದೂ ಧರ್ಮದಲ್ಲಿ, ಒಬ್ಬ ವ್ಯಕ್ತಿಯ ಜನನದಿಂದ ಸಾವಿನ ವರೆಗೆ 16 ಆಚರಣೆಗಳನ್ನು ನಡೆಸಲಾಗುತ್ತದೆ. ಈ 16 ಸಂಸ್ಕಾರಗಳಲ್ಲಿ ಕರ್ಣವೇದ ಸಂಸ್ಕಾರವೂ ಒಂದು. ಬಾಲಕ ಮತ್ತು ಬಾಲಕಿಯರಿಬ್ಬರಿಗೂ ಕರ್ಣವೇದ ಸಂಸ್ಕಾರವನ್ನು ನಡೆಸಲಾಗುತ್ತದೆ. ಕರ್ಣವೇದ/ ಕಿವಿ ಚುಚ್ಚುವುದು 9ನೇ ಸಂಸ್ಕಾರದಲ್ಲಿರುವ ವಿಧಿಯಾಗಿದೆ. ಇದನ್ನು ಮಗುವಿಗೆ ಅನ್ನ ಪ್ರಾಶನ ಮಾಡಿದ ನಂತರ ಮಾಡಬೇಕು. ಪ್ರಾಚೀನ ಕಾಲದಲ್ಲಿ, ಶುಭ ಸಮಯದಲ್ಲಿ ಮಕ್ಕಳ ಕಿವಿಗಳಲ್ಲಿ ಮಂತ್ರಗಳನ್ನು ಪಠಿಸುವ ಮೂಲಕ ಕರ್ಣವೇದ ಸಂಸ್ಕಾರವನ್ನು ನಡೆಸಲಾಗುತ್ತಿತ್ತು. ಬಳಿಕ ಮೊದಲು ಹುಡುಗರ ಬಲ ಕಿವಿಯನ್ನು ಮತ್ತು ನಂತರ ಎಡ ಕಿವಿಯನ್ನು ಚುಚ್ಚಲಾಗುತ್ತದೆ . ಹುಡುಗಿಯರಿಗೆ ಇದಕ್ಕೆ ವಿರುದ್ಧವಾಗಿ ಮಾಡಲಾಗುತ್ತದೆ. ಅಂದರೆ ಹುಡುಗಿಯರ ಎಡ ಕಿವಿಯನ್ನು ಮೊದಲು ಮತ್ತು ನಂತರ ಬಲ ಕಿವಿಯನ್ನು ಚುಚ್ಚಲಾಗುತ್ತದೆ. ಬಳಿಕ ಇದಕ್ಕೆ ಚಿನ್ನದ ಆಭರಣಗಳನ್ನು ಹಾಕಲಾಗುತ್ತದೆ.
ಜ್ಯೋತಿಷ್ಯದ ಪ್ರಕಾರ, ಕಿವಿ ಚುಚ್ಚುವುದು ರಾಹು ಮತ್ತು ಕೇತು ಗ್ರಹಗಳಿಗೆ ಸಂಬಂಧಿಸಿದ ದೋಷಗಳನ್ನು ನಿವಾರಿಸುತ್ತದೆ. ಹೀಗೆ ಮಾಡುವುದರಿಂದ ಮಗು ಆರೋಗ್ಯವಾಗಿ ಮತ್ತು ಸದೃಢವಾಗಿರುತ್ತದೆ ಎಂದು ನಂಬಲಾಗಿದೆ.
ಕಿವಿ ಮತ್ತು ಮೆದುಳಿನ ಮೂಲಕ ಹಾದುಹೋಗುವ ನರಗಳ ನಡುವೆ ಸರಿಯಾದ ರಕ್ತ ಪರಿಚಲನೆ ಇರುತ್ತದೆ. ಇದು ಆಧುನಿಕ ಆಕ್ಯುಪ್ರಶರ್ ವಿಧಾನಕ್ಕೆ ಅನುಗುಣವಾಗಿ ಪ್ರಬಲವಾದ ಚಿಕಿತ್ಸೆ ಎಂದೂ ಕರೆಯಲಾಗುತ್ತದೆ. ಕಿವಿಗಳ ಮೇಲಿನ ಒತ್ತಡದಿಂದಾಗಿ ರಕ್ತ ಪರಿಚಲನೆ ಮತ್ತು ಕೇಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ರೀತಿ ಮಾಡುವುದರಿಂದ ಅನೇಕ ರೀತಿಯ ಮಾನಸಿಕ ಕಾಯಿಲೆಗಳು ಸಹ ಗುಣವಾಗುತ್ತವೆ ಎಂದು ಹೇಳಲಾಗುತ್ತದೆ. ಕಿವಿಗಳನ್ನು ಚುಚ್ಚುವುದರಿಂದ ನಮ್ಮ ಕಣ್ಣುಗಳ ಆರೋಗ್ಯ ಸುಧಾರಿಸುತ್ತದೆ ಎಂದು ನಂಬಲಾಗಿದೆ,