ಮುಸ್ಲಿಂಮರ ಪವಿತ್ರ ರಂಜಾನ್ ತಿಂಗಳಿನಲ್ಲಿ ಕರ್ತವ್ಯದಲ್ಲಿರುವ ಪೈಲಟ್ ಗಳು ಉಪವಾಸ ಮಾಡದಂತೆ ಪಾಕ್ ಏರ್ ಲೈನ್ ಸಂಸ್ಥೆಯ ಪೈಲಟ್ಗಳಿಗೆ ಹಾಗೂ ವಿಮಾನದ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.
ಉಪವಾಸವಿದ್ದ ವೇಳೆ ವ್ಯಕ್ತಿಗಳಲ್ಲಿ ನಿರ್ಜಲೀಕರಣ, ಆಲಸ್ಯ ಮತ್ತು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಪೈಲಟ್ ಹಾಗೂ ಸಿಬ್ಬಂದಿ ಉಪವಾಸ ಮಾಡುವುದು ಬೇಡ ಎಂಬ ವೈದ್ಯಕೀಯ ಸಲಹೆಯನ್ನು ಆಧರಿಸಿ ಈ ಸೂಚನೆ ನೀಡಲಾಗಿದೆ.
ಕಾರ್ಪೋರೇಟ್ ಸುರಕ್ಷತಾ ನಿರ್ವಹಣೆ ಮತ್ತು ವಿಮಾನ ಸಿಬಂದಿ ವೈದ್ಯಕೀಯ ಕೇಂದ್ರವು ಈ ಶಿಫಾರಸನ್ನು ಅನುಮೋದಿಸಿದ್ದು ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್ ಲೈನ್ (ಪಿಐಎ)ನ ಪೈಲಟ್ಗಳು ಹಾಗೂ ಕ್ಯಾಬಿನ್ ಸಿಬಂದಿಗಳು ಕರ್ತವ್ಯದಲ್ಲಿರುವಾಗ ಉಪವಾಸ ನಡೆಸದಂತೆ ಸಲಹೆ ನೀಡಿದೆ. ಈ ಸಲಹೆಯನ್ನು ಆಧರಿಸಿ ಪಿಐಎ ತಕ್ಷಣ ಜಾರಿಯಾಗುವಂತೆ ಆದೇಶ ಜಾರಿಗೊಳಿಸಲಾಗಿದೆ.