ಬೆಂಗಳೂರು: ಅಲ್ಲಿ ಒಬ್ಬನ ಕಿಡ್ನ್ಯಾಪ್ ಆಗಿತ್ತು.ತಾಯಿಗೆ ಕರೆ ಮಾಡಿದ್ದ ಆಗಂತುಕರು 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ರು..ಪೊಲೀಸ್ ಠಾಣೆಗೆ ಓಡೋಡಿ ಬಂದ ಹೆತ್ತ ಕರಳು ನನ್ನ ಮಗನನ್ನ ಉಳಿಸಿಕೊಡಿ ಎಂದು ಕಣ್ಣೀರು ಹಾಕಿದ್ಳು.ತನಿಖೆಗೆ ಇಳಿದ ಪೊಲೀಸರು ಕೇವಲ ನಾಲ್ಕುವರೆ ಗಂಟೆಯಲ್ಲಿ ಪ್ರಕರಣ ಬೇಧಿಸಿದ್ರು..ವಿಚಾರಣೆ ವೇಳೆ ಗೊತ್ತಾದ ಅಸಲಿ ಸಂಗತಿ ಕಂಡು ಎಲ್ರೂ ಬೆಚ್ಚಿಬಿದ್ದಿದ್ರು..ಹಾಗಾದ್ರೆ ಏನದು ಕಿಡ್ನ್ಯಾಪ್ ಕೇಸ್ ನ ಅಸಲಿ ಸಂಗತಿ? ಅದನ್ನೇ ತೋರಿಸ್ತೀವಿ ನೋಡಿ…
ಈ ಫೋಟೊದಲ್ಲಿ ಕಾಣ್ತಿರೊ ಯುವಕರ ಹೆಸರು ಜೀವನ್..ವಿನಯ್ ,ರಾಜು,ಪೂರ್ಣೇಶ್,ಮಾಡೊ ಕೆಲಸ ಸರಿಯಾಗಿ ಮಾಡ್ಕೊಂಡು ಹೋಗಿದ್ದಿದ್ದರೆ ಇವತ್ತು ಪೊಲೀಸ್ ಠಾಣೆಯಲ್ಲಿ ಹೀಗೆ ನಿಲ್ಲೊ ಪರಿಸ್ಥಿತಿ ಬರ್ತಾ ಇರ್ಲಿಲ್ಲ..ಆದ್ರೆ ಜೂಜಾಟದ ಚಟಕ್ಕೆ ಬಿದ್ದು ಕಂಬಿ ಹಿಂದೆ ಸೇರಿದ್ದಾರೆ…ಅಷ್ಟಕ್ಕೂ ಆಗಿದ್ದೇನಂದ್ರೆ ಮಾರ್ಚ್ 11 ನೇ ತಾರೀಖು.. ರಾತ್ರಿ 8.40 ರ ಸಮಯ ಇದೇ ಜೀವನ್ ಚಿಕ್ಕಮ್ಮ ಸುನಂದ ಎಂಬಾಕೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ಆಗಮಿಸಿ ತನ್ನ ಅಕ್ಕನ ಮಗನನ್ನ ಯಾರೊ ಕಿಡ್ನಾಪ್ ಮಾಡಿದ್ದಾರೆ..ಅಷ್ಟೇ ಅಲ್ಲ ಒಂದು ಲಕ್ಷ ಕೊಡದಿದ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕ್ತಿದ್ದಾರೆ ಎಂದು ದೂರು ನೀಡಿದ್ದೇ ತಡ ತಕ್ಷಣ ಅಲರ್ಟ್ ಆದ ಪೊಲೀಸರು ಕೇವಲ ನಾಲ್ಕೂವರೆ ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ..
ಯಾವಾಗ ಬೊಮ್ಮನಹಳ್ಳಿ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ರೋ..ಇಡೀ ಪ್ರಕರಣ ಬೇರೊಂದು ಸ್ವರೂಪವನ್ನೇ ಪಡೆದುಕೊಂಡಿತ್ತು..ಕಿಡ್ನಾಪ್ ಆಗಿದ್ದವನೇ ಇಲ್ಲಿ ಆರೋಪಿಯಾಗಿದ್ದ..ಹೌದು ಜೀವನ್ ಖಾಸಗಿ ಕಾಲೇಜು ಒಂದರಲ್ಲಿ ಕೆಲಸ ಮಾಡ್ತಿದ್ದ..ಆತನಿಗೆ ಆನ್ ಲೈನ್ ಜೂಜಾಟದ ಹುಚ್ಚು..ಇದ್ದ ದುಡ್ಡೆಲ್ಲ ಆನ್ ಲೈನ್ ಜೂಜಾಟದಲ್ಲಿ ಕಳೆದುಕೊಂಡಿದ್ದ ಆಸಾಮಿಗೆ ಮತ್ತೆ ಜೂಜಾಟ ಆಡಲು ಹಣ ಇರ್ಲಿಲ್ಲ..ಹಾಗಾಗಿ ವಿನಯ್,ರಾಜು,ಪೂರ್ಣೇಶ್ ಜೊತೆಗೆ ಸೇರಿಕೊಂಡು ಕಿಡ್ನಾಪ್ ನ ಸಂಚು ರೂಪಿಸಿದ್ದ..ಅದ್ರಂತೆ ಬೊಮ್ಮನಹಳ್ಳಿ ಸಮೀಪದ ಆಕ್ಸ್ ಫರ್ಡ್ ಕಾಲೇಜು ಬಳಿಯಿಂದ ಕಿಡ್ನಾಪ್ ಮಾಡಿರೋದಾಗಿ ತನ್ನ ತಾಯಿಗೆ ಸ್ನೇಹಿತನ ನಂಬರ್ ನಿಂದ ಕರೆ ಮಾಡಿಸಿದ್ದ..ಅಲ್ಲದೇ ಹಲ್ಲೆ ಮಾಡ್ತಿದ್ದಾರೆಂದು ನಂಬಿಸಲು ತಲೆಗೆ ಟೊಮ್ಯಾಟೊ ಸಾಸ್ ಹಾಕಿಕೊಂಡು ಫೋಟೊ ಕಳ್ಸಿದ್ದ..ಒಂದು ಲಕ್ಷ ಹಣ ಕೊಡದಿದ್ರೆ ಕೊಲೆ ಮಾಡೋದಾಗಿ ಬೆದರಿಕೆ ಕೂಡ ಹಾಕಿಸಿದ್ದ.. ಹೆದರಿದ್ದ ಪೋಷಕರು 20 ಸಾವಿರ ಹಣ ಗೂಗಲ್ ಪೇ ಮಾಡಿದ್ರು…ನಂತರ ವಶಕ್ಕೆ ಪಡೆದು ಪೊಲೀಸರು ತಮ್ಮದೇ ಸ್ಟೈಲ್ ನಲ್ಲಿ ವಿಚಾರಸಿದಾಗ ಎಲ್ಲಾ ಸಂಗತಿಯನ್ನು ಬಾಯ್ಬಿಟ್ಟಿದ್ದಾರೆ.ಸದ್ಯ ಜೀವನ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಬೊಮ್ಮನಹಳ್ಳಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ..
ಅದೇನೆ ಹೇಳಿ ಮಕ್ಕಳೆಂದರೆ ತಂದೆ ತಾಯಿ ಯಾವ ತ್ಯಾಗಕ್ಕೂ ಸಿದ್ಧರಿರ್ತಾರೆ..ಅದನ್ನೇ ಬಂಡವಾಳ ಮಾಡಿಕೊಂಡ ಪಾಪಿ ಮಗ ತನ್ನ ಕೆಟ್ಟ ಚಟಕ್ಕೆ ಅಸ್ತ್ರ ಮಾಡಿಕೊಂಡಿರೋದಂತು ನಿಜಕ್ಕೂ ವಿಪರ್ಯಾಸ