ಬೆಂಗಳೂರು: ಬೆಳ್ಳಂಬೆಳಿಗ್ಗೆ ರಾಜ್ಯ ರಾಜಕಾರಣದಲ್ಲೊಂದು ಶಾಕಿಂಗ್ ಸುದ್ದಿ ಗೃಹಸಚಿವರನ್ನೇ ಅಲರ್ಟ್ ಆಗುವಂತೆ ಮಾಡ್ತು. ಸದಾಶಿವನಗರ ಠಾಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಫೋಕ್ಸೋ ಕೇಸ್ ದಾಖಲಾಗಿದ್ದು ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ವಿಚಾರ ಇದೀಗ CID ಹಂತಕ್ಕೆ ಹೋಗಿದ್ದು ಮಾಜಿ ಸಿಎಂಗೆ ಆತಂಕ ತಂದೊಡ್ಡಿದೆ..
ಮಾಜಿ ಸಿಎಂ ಯಡಿಯೂರಪ್ಪ ಮೇಲೆ ಇಷ್ಟು ದಿನ ಅಕ್ರಮ ಹಣದ ಆರೋಪಗಳು ಕೇಳಿಬರ್ತಿದ್ದೊ, ಇದೀಗ ಬೆಚ್ಚಿಬೀಳಿಸುವ ಆರೋಪವೊಂದು ಕೇಳಿಬಂದಿದ್ದು ರಾಜ್ಯದ ಜನಕ್ಕೆ ಶಾಕ್ ಕೊಟ್ಟಿದೆ. ಯಡಿಯೂರಪ್ಪ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಪೋಕ್ಸೋ ಕೇಸ್ ನಡಿ FIR ದಾಖಲಾಗಿದೆ ಅಷ್ಟಕ್ಕೂ ಏನಿದು ಪ್ರಕರಣ ಅಂತ ನೋಡೋದಾದ್ರೆ. ಕಳೆದ ಫೆಬ್ರವರಿಯಲ್ಲಿ ತಾಯಿ ಮತ್ತು ಅಪ್ರಾಪ್ತ ಮಗಳು ಇಬ್ಬರು ಮಾಜಿ ಸಿಎಂ ಯಡಿಯೂರಪ್ಪ ಮನೆಗೆ ಅಪ್ರಾಪ್ತೆಯ ಮೇಲೆ ಈ ಹಿಂದೆ ಅಗಿದ್ದ ಅತ್ಯಾಚಾರದ ಬಗ್ಗೆ ಸಹಾಯಯಾಚಿಸಲು ಬಂದಿದ್ದಾಗ 9 ನಿಮಿಷಗಳ ಕಾಲ ಮೊದಲು ಮಾತನಾಡಿದ್ದ ಮಾಜಿ ಸಿಎಂ ಯಡಿಯೂರಪ್ಪ.
ಅನಂತರ ಅಪ್ರಾಪ್ತೆಯನ್ನ ರೂಂ ಒಳಗೆ ಕರೆದು ಹೋಗಿ ಲೈಂಗಿಕ ದೌರ್ಜನ್ಯ ಎಸಗಿ, ಅಪ್ರಾಪ್ತೆಯ ಖಾಸಗಿ ಅಂಗಗಳನ್ನ ಮುಟ್ಟಿದ್ದು. ರೂಂ ನಿಂದ ಹೊರ ಬಂದು ಯಡಿಯೂರಪ್ಪ ಅವರು ಕ್ಷಮೆಯಾಚಿಸಿದ್ದಾರೆ, ಈ ವಿಚಾರವನ್ನ ಯಾರಿಗೂ ಹೇಳಬಾರದೆಂದು ಹೆದರಿಸಿ ನಮ್ಮನ್ನ ತಡೆದಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಂತ್ರಸ್ಥೆ ದೂರಿನ ಹಿನ್ನಲೆ ಪೋಕ್ಸೋ ಹಾಗೂ 354(A) ಅಡಿಯಲ್ಲಿ ದೂರು ದಾಖಲಾಗಿದೆ.
ಇನ್ನು ಪ್ರಕರಣ ದಾಖಲಾಗ್ತಿದ್ದಂತೆ ಸದಾಶಿವ ನಗರ ಠಾಣೆಯ ಪೋಲೀಸರು ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಯಡಿಯೂರಪ್ಪ ನವರ ಧವಳಗಿರಿ ನಿವಾಸಕ್ಕೆ ತೆರಳಿ ಪ್ರಕರಣದ ಬಗ್ಗೆ ತಿಳಿಸಿ ವಿಚಾರಣೆ ನಡೆಸಿದ್ರು. ವಿಚಾರಣೆ ನಂತರ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ನನ್ನ ಮೇಲೆ ಯಾರೋ ಹೆಣ್ಣು ಮಗಳು ದೂರು ಕೊಟ್ಟಿದಾಳೆ. ತಾಯಿ, ಮಗಳು ಅನೇಕ ಬಾರಿ ಬಂದು ಹೋಗ್ತಿದ್ರು, ಕಣ್ಣೀರ ಹಾಕ್ತಿದ್ರು.
ಅವರನ್ನ ಮನೆ ಒಳಗೆ ಕರೆದು ಮಾತಾಡಿದೆ ಪೊಲೀಸ್ ಆಯುಕ್ತರಿಗೆ ಅವರ ಸಮಸ್ಯೆ ಬಗೆಹರಿಸಲು ಹೇಳಿದ್ದೆ. ಆ ಮಹಿಳೆ ಮಾನಸಿಕ ಸ್ಥಿಮಿತ ಕಳೆದುಕೊಂಡಿರಬೇಕು ಅಂತ ಅನ್ಕಂಡೆ, ಸ್ವಲ್ಪ ದುಡ್ಡು ಕೂಡಾ ಕೊಟ್ಟು ಕಳಿಸಿದೆ. ಇದನ್ನ ನಾನು ನಿರೀಕ್ಷೆ ಮಾಡಿರಲಿಲ್ಲ ಇದನ್ನ ಯಾವ ರೀತಿ ಎದುರಿಸಬೇಕೋ ಎದುರಿಸ್ತೇನೆ ನಾನು ಯಾವುದೇ ತಪ್ಪು ಮಾಡಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ ಮಾಜಿ ಸಿಎಂ ಯಡಿಯೂರಪ್ಪ..