ಬೆಂಗಳೂರು: ಲೋಕ ಸಮರದ ಅಖಾಡ ರಂಗೇರಿದೆ. 28 ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಡಾಕ್ಟರ್ ಮಂಜುನಾಥ್ ಸಮರ್ಥ ಅಭ್ಯರ್ಥಿ ಆಗಿದ್ರೆ,ಜೆಡಿಎಸ್ ಪಕ್ಷದಿಂದ ನಿಲ್ಲಬೇಕಿತ್ತು ಎಂದು ಡಿ.ಕೆ.ಸುರೇಶ್ ವ್ಯಂಗ್ಯ ಮಾಡಿದ್ರೆ,ನಿಮಗೆ ಹೃದಯ ಬೇಕಾ..? ಬಂಡೆ ಬೇಕಾ ಎಂದು ಜೆಡಿಎಸ್ ಕ್ಯಾಂಪೇನ್ ಶುರು ಮಾಡಿದೆ. ಯೆಸ್,ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಎಲ್ಲರ ಗಮನ ಸೆಳೆದಿತ್ತು.ಇದೀಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಎಲ್ಲರ ಗಮನ ಸೆಳೆಯುತ್ತಿದೆ.
ಡಿ.ಕೆ.ಸುರೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ರೆ,ಡಾ.ಸಿ.ಎನ್.ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ,ಇಬ್ಬರ ನಡುವೆ ಕುರುಕ್ಷೇತ್ರ ವಾರ್ ಪ್ರಾರಂಭವಾಗಿದೆ.ಬೆಂಗಳೂರು ಗ್ರಾಮಾಂತರದಲ್ಲಿ ಈ ಬಾರಿ ವ್ಯಕ್ತಿ ಆಧಾರಿತ ಚುನಾವಣೆ ನಡೆಯೋದು ಖಚಿತವಾಗಿದೆ. ಡಿ.ಕೆ.ಬ್ರದರ್ಸ್ ಸೋಲಿನ ರುಚಿ ತೋರಿಸಲು ಎನ್ ಡಿ ಎ ಪಾರ್ಟರ್ಸ್ ರಣತಂತ್ರ ನಡೆಸಿದ್ದಾರೆ.ಬಿಜೆಪಿ-ಜೆಡಿಎಸ್ ತಂತ್ರಕ್ಕೆ ಕೌಂಟರ್ ಕೊಡಲು ಡಿಕೆ ಬ್ರದರ್ಸ್ ಕೂಡ ತಮ್ದೇ ಆದಾ ಸ್ಟಾಟ್ರಜಿ ಮಾಡುತ್ತಿದ್ದಾರೆ.ಈ ಹಿನ್ನಲೆಯಲ್ಲಿ ಬೆಂಗಳೂರು ಲೋಕಸಭಾ ಕ್ಷೇತ್ರದ ಕೈ ನಾಯಕರ ಜೊತೆ ಡಿ.ಕೆ.ಬ್ರದರ್ಸ್ ಬ್ರೇಕ್ ಪಾಸ್ಟ್ ಮೀಟಿಂಗ್ ನಡೆಸಿದ್ದಾರೆ.
ಇನ್ನು ಲಕ್ಷಾಂತರ ಜೀವ ಉಳಿಸಿರುವ ಡಾ.ಸಿ.ಎನ್.ಮಂಜುನಾಥ್ ವಿರುದ್ಧ ಲಘುವಾಗಿ ಯಾರು ಬಹಿರಂಗವಾಗಿ ಮಾತನಾಡೋದು ಬೇಡ.ಒಂದು ವೇಳೆ ಬಿಜೆಪಿ-ಜೆಡಿಎಸ್ ನಾಯಕರ ಪ್ರಚೋದನೆಗೆ ಮಾತನಾಡಿದ್ರೆ,ಅದು ಅವರಿಗೆ ಲಾಭವಾಗುತ್ತೆ.ಹೀಗಾಗಿ,ಯಾವುದೇ ಕಾರಣಕ್ಕೂ ಮಂಜುನಾಥ್ ವಿರುದ್ಧ ಯಾರು ಬಹಿರಂಗವಾಗಿ ಹೇಳಿಕೆಗಳನ್ನ ಕೊಡೋದು ಬೇಡ.ಅಲ್ದೇ ಬೆಂಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರನ್ನ ಸೆಳೆಯಲು ಇಂದು ನಡೆದ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಚರ್ಚೆಯಾಗಿದೆ.ಸಭೆ ಬಳಿಕ ಮಾತನಾಡಿದ ಡಿಕೆಸು,ಮಂಜುನಾಥ್ ಪ್ರಬಲ ಅಭ್ಯರ್ಥಿಯಾಗಿದ್ರೆ,
ಜೆಡಿಎಸ್ ಪಕ್ಷದಿಂದಲೇ ನಿಲ್ಲಬಹುದಿತ್ತು.ನಾನು ಇನ್ಮುಂದೆ ವ್ಯಕ್ತಿಗಳ ಬಗ್ಗೆ ಮಾತನಾಡಲ್ಲ ಎಂದಿದ್ದಾರೆ. ಇನ್ನು ಬೆಂಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ವ್ಯಕ್ತಿಗತವಾಗಿ ನಡೆಯುತ್ತಿರೋದ್ರಿಂದ, ಜೆಡಿಎಸ್ ವಿಭಿನ್ನವಾಗಿ ಕ್ಯಾಂಪೇನ್ ಶುರು ಮಾಡಿದ್ದಾರೆ.ನಿಮಗೆ ಹೃದಯ ಬೇಕಾ..?ಬಂಡೆ ಬೇಕಾ ಎಂದು ಕೈ ಅಭ್ಯರ್ಥಿ ಡಿ.ಕೆ.ಸುರೇಶ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಶುರು ಮಾಡಿದ್ದಾರೆ. ಒಟ್ಟಾರೆ,ಬೆಂಗಳೂರು ಗ್ರಾಮಾಂತರ ಕಣ ರಂಗೇರಿದ್ದು,ರಾಜ್ಯದ ಜನರ ಗಮನ ಸೆಳೆಯೋದು ಖಚಿತವಾಗಿದೆ.