ಬೆಂಗಳೂರು: ಎಲೆಕ್ಷನ್ ಬಾಂಡ್ ಅಕ್ರಮದ ವಿಚಾರವಾಗಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಾ ಕಾವೂಂಗಾ ನಾ ಕಾನೇದೂಂಗಾ ಅಂತ ಹೇಳೊ ಮೋದಿ ತಾವೇ ಅಕ್ರಮದಲ್ಲಿ ತೊಡಗಿದ್ದಾರೆ. ಸುಪ್ರೀಂ ಕೋರ್ಟ್ ಬಿಜೆಪಿ ಚುನಾವಣೆ ಬಾಂಡ್ ಹೆಸರಿನಲ್ಲಿ ಹೇಗೆ ಹಣ ಮಾಡುತ್ತಿದೆ ಎಂಬುದನ್ನು ಬಹಿರಂಗಪಡಿಸಿದೆ. SBI ನೀಡಿರುವ ಅಂಕಿ ಅಂಶಗಳ ಪ್ರಕಾರ ಶೇ.50ರಷ್ಟು ದೇಣಿಗೆಯನ್ನು ಬಿಜೆಪಿ ಪಡೆದರೆ, ಕಾಂಗ್ರೆಸ್ ಪಕ್ಷ ಕೇವಲ ಶೇ.11ರಷ್ಟು ದೇಣಿಗೆ ಪಡೆದಿದೆ.
ಬಿಜೆಪಿಯವರು ಇಷ್ಟು ದೊಡ್ಡ ಪ್ರಮಾಣದಲ್ಲಿ ದೇಣಿಗೆ ಪಡೆಯಲು ಹೇಗೆ ಸಾಧ್ಯ. ಇದರಲ್ಲಿ ಅನೇಕ ನಕಲಿ ದೇಣಿಗೆದಾರರಿದ್ದಾರೆ ಇವರಲ್ಲಿ ಬಹುತೇಕರು ಇಡಿ, ಆದಾಯ ತೆರಿಗೆ ಹಾಗೂ ಇತರೆ ತನಿಖಾ ಸಂಸ್ಥೆಗಳ ಪ್ರಕರಣ ಎದುರಿಸುತ್ತಿರುವವರು. ಮೊದಲು ಇಡಿ ದಾಳಿ ನಡೆಸಿ ನಂತರ ಮೋದಿ ಹಾಗೂ ಅವರ ಪಕ್ಷ ಹೆಚ್ಚಿನ ದೇಣಿಗೆ ನೀಡಲು ಬೆದರಿಕೆ ಹಾಕುತ್ತಾರೆ. ಕಾಂಗ್ರೆಸ್ ಪಕ್ಷದ ಖಾತೆಯಲ್ಲಿರುವ 300 ಕೋಟಿ ಹಣವನ್ನು ಸೀಜ್ ಮಾಡಿದ್ದಾರೆ ಆದ್ರೆ ಬಿಜೆಪಿಯ 22ಸಾವಿರ ಕೋಟಿ ಎಲೆಕ್ಟ್ರೋರಲ್ ಬಾಂಡ್ ಯಾಕೆ ಸೀಜ್ ಮಾಡಿಲ್ಲ. ಇದರ ಬಗ್ಗೆ ಉನ್ನತಮಟ್ಟದ ತನಿಖೆಗೆಯಾಗಬೇಕು ಬಿಜೆಪಿಯವರ ಅಕೌಂಟ್ ಅನ್ನು ಸೀಜ್ ಮಾಡಬೇಕೆಂದು ಆಗ್ರಹಿಸಿದ್ದಾರೆ...