ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
ಮದುವೆ ಇದು ಬ್ರಹ್ಮನ ಸೃಷ್ಟಿಯ ನಿಯಮ ಏಕೆಂದರೆ ವಿವಾಹದ ನಂತರ ಕೆಲವರು ಜೀವನದಲ್ಲಿ ಸಿರಿ, ಸುಖ, ಸಂಪತ್ತು ಪಡೆದಿದ್ದಾರೆ.
ಜನ್ಮ ಕುಂಡಲಿಯಲ್ಲಿ 7ನೇ ಮನೆಯ ವಿವಾಹದ ಸ್ಥಾನ.
2ನೇ ಮನೆಯ ಕುಟುಂಬ ಸ್ಥಾನ
4ನೇ ಮನೆ ಸುಖದ ಸ್ಥಾನ,
9ನೇ ಮನೆ ಭಾಗ್ಯದ ಸ್ಥಾನ,
11ನೇಮನೆಲಾಭಸ್ಥಾನವಾಗಿರುತ್ತದೆ.
ಹೀಗಾಗಿ 7ರ ಜತೆ ಈ ಎಲ್ಲ ಮನೆಗಳಲ್ಲಿರುವ ಗ್ರಹ, ಅದರ ಅಧಿಪತಿಗಳು, ಅವರ ಮೇಲಿರುವ ಇತರೆ ಗ್ರಹಗಳ ದೃಷ್ಟಿ, ಸಂಬಂಧ, ಉಂಟಾಗುವ ಯೋಗಗಳು ಇತ್ಯಾದಿಗಳನ್ನೆಲ್ಲ ಪರಿಶೀಲಿಸಬೇಕಾಗುತ್ತದೆ.
ಜನ್ಮ ಕುಂಡಲಿಯಲ್ಲಿ ಸಪ್ತಮ ಸ್ಥಾನದಲ್ಲಿ ರವ್ಯಾದಿಗ್ರಹಗಳಿದ್ದರೆ,
ರವಿ : ಬಲಿಷ್ಠನಾಗಿದ್ದರೆ ಸರಕಾರಿ ನೌಕರಿ,ರಾಜಕೀಯ ಕ್ಷೇತ್ರದಲ್ಲಿ ಪದವಿ ಲಭಿಸಲಿದೆ. ಸರಕಾರಿ ಕೆಲಸದಲ್ಲಿರುವ ಸಂಗಾತಿ ಪ್ರಾಪ್ತಿ. ಕೋಪಿಷ್ಠ-ದರ್ಪ-ದುರಹಂಕಾರದ ಪತ್ನಿ ಸಿಗುವರು. ಸಂಬಂಧದಲ್ಲಿ ವಿವಾಹ. ವಿವಾಹಕ್ಕೆ ಅನೇಕ ಆತಂಕಗಳು ಎದುರಿಸುವ ಪ್ರಸಂಗ.