ಅಮೆರಿಕದ ಇಂಡಿಯಾನಾ ಮತ್ತು ಓಹಿಯೊ ರಾಜ್ಯದ ಗ್ರಾಮೀಣ ಭಾಗದಲ್ಲಿ ಅಪ್ಪಳಿಸಿದ ಚಂಡಮಾರುತದಿಂದ ಕನಿಷ್ಠ 3 ಮಂದಿ ಮೃತಪಟ್ಟಿದ್ದು 38ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಓಹಿಯೋದ ಲೊಗಾನ್ ಕೌಂಟಿಯಲ್ಲಿ ಮೂರು ಸಾವಿನ ಪ್ರಕರಣ ವರದಿಯಾಗಿದೆ.
ಚಂಡಮಾರುತದಿಂದ ವಿದ್ಯುತ್ ಪೂರೈಕೆ ಜಾಲಕ್ಕೆ ಹಾನಿಯಾಗಿರುವುದರಿಂದ ಹಲವೆಡೆ ವಿದ್ಯುತ್ ಸಮಸ್ಯೆ ಕಾಣಿಸಿಕೊಂಡಿದೆ. ಜೊತೆಗೆ ಪರಿಹಾರ ಕಾರ್ಯಾಚರಣೆಗೆ ತೊಡಕಾಗಿದೆ. ಹಲವು ಮನೆಗಳು ಕುಸಿದಿದ್ದು ಇದರಿಂದ ಜನ ಜೀವನ ಅಸ್ತ ವ್ಯಸ್ಥವಾಗಿದೆ.
ಭಾರೀ ಗಾತ್ರದ ಮರಗಳು ರಸ್ತೆಗೆ ಉರುಳಿಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಓಹಿಯೋದ ಮುಖ್ಯಾಧಿಕಾರಿ ರ್ಯಾಂಡಲ್ ಡಾಡ್ಸ್ ಹೇಳಿದ್ದಾರೆ. ಪೂರ್ವ ಇಂಡಿಯಾನಾದಲ್ಲಿ ಮೂವರು ನಿಧನರಾಗಿದ್ದು, 38 ಮಂದಿ ಗಾಯಗೊಂಡಿದ್ದು, 22 ಮನೆಗಳು ನಾಶವಾಗಿದ್ದು 100ಕ್ಕೂ ಅಧಿಕ ಮನೆಗಳು ತೀವ್ರವಾಗಿ ಹಾನಿಗೊಳಗಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.