ಬಾಲಿವುಡ್ ಹ್ಯಾಂಡ್ ಸಮ್ ಹೀರೋ ರಣಬೀರ್ ಕಪೂರ್ ತಮ್ಮ ಲುಕ್ ಹಾಗೂ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಈತನ ಬ್ಯೂಟಿಗೆ ಮನಸೋತ ಸ್ವೀಟ್ ಸುಂದರಿ ಆಲಿಯಾ ಭಟ್ ಆತನ ಕೈಹಿಡಿದಿದ್ದು ಈ ಜೋಡಿಗೆ ಮುದ್ದಾದ ಮಗುವಿದೆ. ಆದರೆ ಈ ಮಧ್ಯೆ ರಣಬೀರ್ ಗೆ ಆಳಿಯಾ ಎರಡನೇ ಹೆಂಡತಿ ಎಂಬ ಶಾಂಕಿಂಗ್ ಹೇಳಿಕೆಯನ್ನು ಸ್ವತಃ ರಣಬೀರ್ ನೀಡಿದ್ದರು.
ರಣಬೀರ್ ತನ್ನ ಜೀವನದಲ್ಲಿ ಅನೇಕರೊಂದಿಗೆ ಡೇಟಿಂಗ್ ಮಾಡಿದ್ದಾನೆ. ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಅವರಂತಹ ದೊಡ್ಡ ಹೆಸರುಗಳೂ ರಣಬೀರ್ ಡೇಟಿಂಗ್ ಲೀಸ್ಟ್ ನಲ್ಲಿದೆ.
ಆಲಿಯಾಗೂ ಮೊದಲು, ರಣಬೀರ್ ಕಪೂರ್ ಈ ಹಿಂದೆ ಒಮ್ಮೆ ಮದುವೆಯಾಗಿದ್ದರು ಎಂದು ನಟ ಸ್ವತಃ ಒಪ್ಪಿಕೊಂಡಿದ್ದಾರೆ.ಸಂದರ್ಶನವೊಂದರಲ್ಲಿ, ರಣಬೀರ್ ಕಪೂರ್ ಸ್ವತಃ ಆಸಕ್ತಿದಾಯಕ ಗೂಗಲ್ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ಪ್ರಶ್ನೆಗಳಲ್ಲಿ ಒಂದು ಅವರ ಮಾಜಿ ಪತ್ನಿಗೆ ಸಂಬಂಧಿಸಿದೆ. ಈ ಬಗ್ಗೆ ನಟ ವಿವರಣೆಯನ್ನು ನೀಡಿದ್ದರು..
“ಇದು ಹುಚ್ಚು ಅಭಿಮಾನಕ್ಕೆ ಸಂಬಂಧಿಸಿದ ಘಟನೆ.. ನನ್ನ ಮೇಲಿನ ಪ್ರೀತಿ ಅಭಿಮಾನದಿಂದ ಹುಡುಗಿಯೊಬ್ಬಳು ನನ್ನನ್ನು ಮದುವೆಯಾದಂತೆ ಭಾವಿಸಿ.. ನನ್ನ ಮನೆಯ ಗೇಟಿನೊಂದಿಗೆ ಮದುವೆಯಾಗಿದ್ದಾಳೆ.. ಆ ದಿನ ಗೇಟಿಗೆ ಹೂವಿನ ಮಾಲೆ ಹಾಕಿ ಕುಂಕುಮ ಹಚ್ಚಲಾಗಿತ್ತು.. ಅದನ್ನು ನೋಡಿ ನಾನೇ ಶಾಕ್ ಆಗಿದ್ದೆ.. ಆದರೆ ಆಕೆ ಯಾರು.. ಎಲ್ಲಿದ್ದಾಳೆ ಎಂದು ನನಗೆ ಇಲ್ಲಿಯವರೆಗೂ ತಿಳಿದಿಲ್ಲ.. ಅವಳೇ ನನ್ನ ಮೊದಲ ಪತ್ನಿ.. ನಾನು ಇನ್ನೂ ನನ್ನ ಮಾಜಿ ಪತ್ನಿಯನ್ನು ಭೇಟಿ ಮಾಡಿಲ್ಲ ಆದರೆ ನಾನು ಖಂಡಿತವಾಗಿಯೂ ಅವಳನ್ನು ಭೇಟಿಯಾಗಲು ಬಯಸುತ್ತೇನೆ” ಎಂದು ನಡೆದ ಘಟನೆಯ ಬಗ್ಗೆ ಹೇಳಿಕೊಂಡಿದ್ದರು..
ರಣಬೀರ್ ಹೇಳಿದ್ದು ಕೇಳಿ ಸಾಕಷ್ಟು ಮಂದಿ ಶಾಕ್ ಆಗಿದ್ದಾರೆ. ರಣಬೀರ್ ಕಪೂರ್ ಗೆ ಸಾಕಷ್ಟು ಫ್ಯಾನ್ ಫಾಲೋಯಿಂಗ್ನಲ್ಲಿ ಇರುವುದು ಹುಡುಗಿಯರೇ. ಅಭಿಮಾನಿಗಳು ಈ ರೀತಿಯಲ್ಲೂ ಮಾಡುತ್ತಾರಾ ಎಂದು ಸಾಕಷ್ಟು ಮಂದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.