ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಗಾಝಾದ 13,000 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಹೇಳಿದೆ.
ಇಲ್ಲಿನ ಅನೇಕ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು ಅವರಲ್ಲಿ “ಅಳಲು ಸಹ ಶಕ್ತಿಯಿಲ್ಲ” ಎಂದು ಕಳವಳ ವ್ಯಕ್ತಪಡಿಸಿದೆ.
ದಾಳಿಯಲ್ಲಿ ಸಾವಿರಾರು ಜನರು ಗಾಯಗೊಂಡಿದ್ದಾರೆ ಅಥವಾ ಅವರು ಎಲ್ಲಿದ್ದಾರೆಂದು ನಾವು ನಿರ್ಧರಿಸಲು ಸಾಧ್ಯವಿಲ್ಲ. ಅವರು ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು … ವಿಶ್ವದ ಬೇರೆ ಯಾವುದೇ ಸಂಘರ್ಷದಲ್ಲಿ ಮಕ್ಕಳಲ್ಲಿ ಸಾವಿನ ಪ್ರಮಾಣವನ್ನು ನಾವು ನೋಡಿಲ್ಲ” ಎಂದು ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕ ಕ್ಯಾಥರೀನ್ ರಸ್ಸೆಲ್ ತಿಳಿಸಿದ್ದಾರೆ.
“ನಾನು ತೀವ್ರ ರಕ್ತಹೀನತೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ವಾರ್ಡ್ ಗಳಲ್ಲಿದ್ದೆ. ಇಡೀ ವಾರ್ಡ್ ಸಂಪೂರ್ಣವಾಗಿ ಶಾಂತವಾಗಿದೆ. ಏಕೆಂದರೆ ಮಕ್ಕಳು ಹಾಗೂ ಶಿಶುಗಳಲ್ಲಿ ಅಳಲು ಸಹ ಶಕ್ತಿಯೂ ಇಲ್ಲ.”ಎಂದಿದ್ದಾರೆ.
ಈ ತಿಂಗಳ ಆರಂಭದಲ್ಲಿ ವಿಶ್ವಸಂಸ್ಥೆಯ ತಜ್ಞರು ಇಸ್ರೇಲ್ ಗಾಝಾದ ಆಹಾರ ವ್ಯವಸ್ಥೆಯನ್ನು ವ್ಯಾಪಕ “ಹಸಿವಿನ ಅಭಿಯಾನದ” ಭಾಗವಾಗಿ ನಾಶಪಡಿಸುತ್ತಿದೆ ಎಂದು ಹೇಳಿದ್ದರು. ಇಸ್ರೇಲ್ ಇದನ್ನು ತಿರಸ್ಕರಿಸಿತು. ಯುದ್ಧದಲ್ಲಿ ಸಾವನ್ನಪ್ಪಿದವರ ಸಂಖ್ಯೆ, ಗಾಝಾದಲ್ಲಿನ ಹಸಿವಿನ ಬಿಕ್ಕಟ್ಟು ಮತ್ತು ಎನ್ಕ್ಲೇವ್ಗೆ ಸಹಾಯ ವಿತರಣೆಯನ್ನು ತಡೆಯುವ ಆರೋಪಗಳಿಂದಾಗಿ ಇಸ್ರೇಲ್ ಮೇಲೆ ಅಂತರರಾಷ್ಟ್ರೀಯ ಟೀಕೆಗಳು ಹೆಚ್ಚಿವೆ.