ಟಾಲಿವುಡ್ ಬ್ಯೂಟಿ ಸಮಂತಾ ಅನಾರೋಗ್ಯದ ಸಮಸ್ಯೆಯಿಂದಾಗಿ ಸಿನಿಮಾ ರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಆದರೂ ಈಕೆ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ಗಳಿಂದ ಕೈ ತುಂಬಾ ಹಣ ಸಂಪಾದಿಸುತ್ತಿರುವ ನಟಿ ಅದೇ ಜಾಲತಾಣದಲ್ಲಿ ತಪ್ಪು ಮಾಹಿತಿ ಕೊಟ್ಟು ಪೇಚಿಗೆ ಸಮಂತಾ ಸಿಲುಕಿದ್ದಾರೆ. ಸ್ಯಾಮ್ಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಸಮಂತಾ ಅಲ್ಲಿಂದಲೇ ಜನರ ಜೊತೆ ಸಂಪರ್ಕದಲ್ಲಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಮಾಡದಿದ್ದರೂ ಇನ್ಸ್ಟಾಗ್ರಾಂನಲ್ಲಿ ಮಿಲಿಯನ್ಗಟ್ಟಲೇ ಫಾಲೋವರ್ಸ್ ಕೃಪೆಯಿಂದ ಹಣ ದುಡಿಯುತ್ತಿದ್ದಾರೆ. ಫೋಟೋಶೂಟ್, ಜಾಹೀರಾತಿನಿಂದಾಗಿ ಹಣ ಗಳಿಸುತ್ತಾರೆ. ಇತ್ತೀಚೆಗೆ ತಮ್ಮದೇ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಹೊಸದೊಂದು ವೀಡಿಯೋ ಹಾಕಿರುವ ಸಮಂತಾ ಅದರಲ್ಲಿ ಲಿವರ್ ಡೀಟಾಕ್ಸಿಂಗ್ ಬಗ್ಗೆ ಮಾತನಾಡಿದ್ದಾರೆ.
ಲಿವರ್ ಡಿಟಾಕ್ಸಿಂಗ್ಗೆ ಏನೇನ್ ಮಾಡಬೇಕು ಎಂಬುದರ ಬಗ್ಗೆ ಜನರಿಗೆ ಕೊಂಚ ಸಲಹೆ ಕೊಟ್ಟಿದ್ದಾರೆ. ಅವರ ಜೊತೆ ವೈದ್ಯರು ಕೂಡ ಸಂಭಾಷಣೆಯಲ್ಲಿ ತೊಡಗುತ್ತಾರೆ. ಇವರಿಬ್ಬರ ಸಂಭಾಷಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ವೈದ್ಯರೊಬ್ಬರು ಎಕ್ಸ್ನಲ್ಲಿ ಸಮಂತಾ ವಿರುದ್ಧ ಹರಿಹಾಯ್ದಿದ್ದಾರೆ. ಸಮಂತಾ ಜನರಿಗೆ ಕೊಡ್ತಿರುವ ಮಾಹಿತಿ ತಪ್ಪಾಗಿದೆ. ಗೊತ್ತಿಲ್ಲ ಅಂದ್ರೆ ಸುಮ್ಮನೆ ಇರಬೇಕು. ಆರೋಗ್ಯದ ವಿಚಾರವಾಗಿ ತಪ್ಪು ಸಂದೇಶ ಕೊಡಬಾರದು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಮಂತಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ವಿವಾದ, ಅನಾರೋಗ್ಯ, ಯಶಸ್ಸು ಎಲ್ಲವೂ ಅನುಭವಿಸಿರುವ ಜೀವ ಸಮಂತಾ. ನಾಗಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಮಂತಾ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಎಲ್ಲಾ ವಿಚಾರಕ್ಕೂ ಸಮಂತಾ ಕಡೆಯೇ ಬೆಟ್ಟು ಮಾಡಿ ತೋರಿಸುತ್ತಿದ್ದರು. ಇವುಗಳಿಂದ ಹೊರ ಬಂದ ನಟಿ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡು ನೋವು ಮರೆಯುತ್ತಿದ್ದಾರೆ.