ಸಾಮಾನ್ಯವಾಗಿ ಎಲ್ಲ ಆಹಾರಕ್ಕೂ ವಿರುದ್ಧ ಆಹಾರಗಳು ಇರುತ್ತವೆ. ಹಾಗೆಯೇ ಮಾವಿನ ಹಣ್ಣಿಗೆ ಕೂಡ ವಿರುದ್ಧ ಆಹಾರವಿದೆ. ಮಾವಿನ ಹಣ್ಣಿನ ಜೊತೆ ಅಂತಹ ಆಹಾರವನ್ನು ಸೇವಿಸಿದಾಗ ಕೆಲವರಿಗೆ ಹೊಟ್ಟೆಯ ತೊಂದರೆ, ವಾಂತಿ, ಅಲರ್ಜಿ, ಚರ್ಮ ದ ತೊಂದರೆ ಅಥವಾ ಹೊಟ್ಟೆನೋವು ಇತ್ಯಾದಿ ಕಾಣಿಸಿಕೊಳ್ಳುತ್ತದೆ.
ಅಂತಹ ಆಹಾರಗಳ ಸಂಯೋಜನೆ ಶರೀರಕ್ಕೆ ವಿಷಕಾರಿಯಾಗುತ್ತದೆ. ಆದ್ದರಿಂದ ಮಾವಿನ ಹಣ್ಣಿನ ಜೊತೆ ಅವುಗಳನ್ನು ಸೇವಿಸದೇ ಇರುವುದು ಆರೋಗ್ಯಕ್ಕೆ ಒಳ್ಳೆಯದು. ಮಾವಿನಹಣ್ಣಿಗೆ ವಿರುದ್ಧವಾದ ಅಂತಹ ಆಹಾರಗಳು ಯಾವುದೆನ್ನುವುದನ್ನು ನಾವು ತಿಳಿದುಕೊಳ್ಳಬೇಕು.
ಮೊಸರು :ಅನೇಕ ಜನರು ಮಾವಿನ ಹಣ್ಣಿನ ಶ್ರೀಖಂಡ ಇಷ್ಟಪಡುತ್ತಾರೆ. ಇನ್ಕೆಲವರು ಮಾವಿನ ಹಣ್ಣಿನ ಲಸ್ಸಿ ಕುಡಿಯುತ್ತಾರೆ. ಈ ಕಾಂಬಿನೇಶನ್ ಎಲ್ಲರ ಆರೋಗ್ಯಕ್ಕೂ ಹೊಂದುವುದಿಲ್ಲ. ಇದರಿಂದ ದೇಹದಲ್ಲಿ ಶಾಖ ಮತ್ತು ಶೀತ ಹೆಚ್ಚುತ್ತದೆ. ಕೆಲವರಿಗೆ ಮಾವಿನಹಣ್ಣು ಮತ್ತು ಮೊಸರಿನ ಮಿಶ್ರಣದಿಂದ ಹೊಟ್ಟೆಯ ಸೆಳೆತ ಆರಂಭವಾಗುತ್ತದೆ.
ನೀರು :ಮಾವಿನ ಹಣ್ಣನ್ನು ತಿಂದ ತಕ್ಷಣ ನೀರು ಕೂಡ ಕುಡಿಯಬಾರದು. ಇದು ಶರೀರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಹೊಟ್ಟೆನೋವು, ಆಮ್ಲೀಯತೆ ಮತ್ತು ಉಬ್ಬುವಿಕೆ ಉಂಟಾಗುತ್ತದೆ. ಹಾಗಾಗಿ ಮಾವಿನಹಣ್ಣನ್ನು ತಿಂದು ಅರ್ಧಗಂಟೆಯ ನಂತರ ನೀರು ಕುಡಿಯುವುದು ಒಳ್ಳೆಯದು.
ಮಾಂಸಹಾರ : ನಾನ್ ವೆಜ್ ಊಟ ಮಾಡುವವರು ಮಾವಿನ ಹಣ್ಣನ್ನು ಅವೈಡ್ ಮಾಡುವುದು ಉತ್ತಮ. ಏಕೆಂದರೆ ಮಾವಿನಹಣ್ಣು ಮತ್ತು ಮಾಂಸವನ್ನು ಒಟ್ಟಿಗೆ ಜೀರ್ಣಿಸಿಕೊಳ್ಳುವುದು ಸುಲಭವಲ್ಲ. ಇದರಿಂದ ನಿಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.
ತಂಪು ಪಾನೀಯ : ಮಾವಿನ ಹಣ್ಣನ್ನು ಸೇವಿಸಿದ ನಂತರ ಕೋಲ್ಡ್ ಡ್ರಿಂಕ್ಸ್ ಅನ್ನು ಕುಡಿಯಲೇಬಾರದು. ಇದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಒಮ್ಮೆಲೇ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮಧುಮೇಹಿಗಳಿಗಂತೂ ಇವುಗಳನ್ನು ಒಟ್ಟಿಗೇ ಸೇವಿಸಲೇಬಾರದು.
ಹಾಗಲಕಾಯಿ : ಅದರಕ್ಕೆ ಕಹಿ ಉದರಕ್ಕೆ ಸಿಹಿಯಾದ ಹಾಗಲಕಾಯಿ ಸಾಮಾನ್ಯ ದಿನಗಳಲ್ಲಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಮಾವಿನ ಹಣ್ಣಿಗೆ ಹಾಗಲಕಾಯಿ ವಿರುದ್ಧ ಆಹಾರವಾಗಿದೆ. ನಿಮ್ಮ ಊಟದಲ್ಲಿ ಹಾಗಲಕಾಯಿ ಇದ್ದು ಊಟದ ಜೊತೆ ನೀವು ಮಾವಿನ ಹಣ್ಣನ್ನು ತಿಂದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ. ಮಾವು ಮತ್ತು ಹಾಗಲಕಾಯಿಯಿಂದ ಶರೀರದಲ್ಲಿ ರಿಯಾಕ್ಷನ್ ಆಗುತ್ತದೆ. ಇದರಿಂದಾಗಿ ನೀವು ವಾಂತಿ, ಅತಿಸಾರ ಅಥವಾ ಉಸಿರಾಟದ ತೊಂದರೆಗಳನ್ನು ಎದುರಿಸಬೇಕಾಗಬಹುದು.
ಮಸಾಲೆ ಪದಾರ್ಥ :ಹೆಚ್ಚು ಮಸಾಲೆಬೆರೆತ ಆಹಾರಗಳು ಕೂಡ ಮಾವಿಗೆ ಒಳ್ಳೆಯದಲ್ಲ. ಇವೆರಡರ ಕಾಂಬಿನೇಶನ್ ನಿಂದ ದೇಹದಲ್ಲಿ ಹುಣ್ಣು, ಮೊಡವೆ ಚರ್ಮದ ಖಾಯಿಲೆಗಳು ಹುಟ್ಟಬಹುದು. ಹಾಗಾಗಿ ಮಾವಿನ ಹಣ್ಣಿನೊಂದಿಗೆ ಮಸಾಲೆಯುಕ್ತ ಪದಾರ್ಥ ಅಥವಾ ಶೀತಲ ಆಹಾರವನ್ನು ಸೇವಿಸದೇ ಇರುವುದು ಒಳಿತು.
ಹಸಿಮೆಣಸು :ಹೆಚ್ಚು ಖಾರವನ್ನು ಇಷ್ಟಪಡುವವರು ಹಸಿಮೆಣಸನ್ನು ಅಡಿಗೆಯಲ್ಲಿ ಬಳಸಿಯೇ ಬಳಸುತ್ತಾರೆ. ಅದು ನೀಡುವ ಪರಿಮಳವೇ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ನೀವು ಅಡುಗೆಯಲ್ಲಿ ಹಸಿಮೆಣಸನ್ನು ಬಳಸಿದ್ದೀರಿ ಎಂದಾದರೆ ಅದರ ಜೊತೆ ಮಾವಿನಹಣ್ಣನ್ನು ಸೇವಿಸಬಾರದು. ಹಾಗೆಯೇ ಮಾವಿನಹಣ್ಣನ್ನು ಸೇವಿಸಿದ ನಂತರವೂ ಹಸಿಮೆಣಸಿನಿಂದ ದೂರವಿರಬೇಕು.
ಈ ಎರಡು ಆಹಾರಗಳಿಂದ ಈಗಾಗಲೇ ಹೊಟ್ಟೆಯ ಸಮಸ್ಯೆಯನ್ನು ಹೊಂದಿರುವವರು ಈ ಎರಡು ಆಹಾರವನ್ನು ಸೇವಿಸಿದರೆ ಹೊಟ್ಟೆಯ ಸಂಬಂಧಿ ಸಮಸ್ಯೆಗಳು ಉಲ್ಬಣವಾಗುತ್ತದೆ. ಮಾವಿನ ಹಣ್ಣು ಮತ್ತು ಹಸಿಮೆಣಸನ್ನು ಒಂದಾದ ನಂತರ ಒಂದು ತಿನ್ನಬೇಕೆಂದರೆ ಕನಿಷ್ಠ 3ರಿಂದ ನಾಲ್ಕು ಗಂಟೆಗಳ ಅಂತರವಿರಬೇಕು.