ಬೆಂಗಳೂರು : ಕಾಂಗ್ರೆಸ್ ಎರಡನೇ ಪಟ್ಟಿ ಯಾವಾಗ ರಿಲೀಸ್ ಆಗುತ್ತೆ ಎಂಬ ಪ್ರಶ್ನೆಗೆ, ನಾಳೆ ನಾನು ದೆಹಲಿಗೆ ಹೋಗ್ತೀನಿ. ದೆಹಲಿಯಲ್ಲಿ ಸಿಇಸಿ ಸಭೆ ಇದೆ. ಅಲ್ಲಿ ಎರಡನೇ ಪಟ್ಟಿ ಬಗ್ಗೆ ಚರ್ಚೆ ಮಾಡ್ತೀವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ರಾಜರು ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಯಾರು ರಾಜ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಅಭ್ಯರ್ಥಿ ಇಲ್ಲ ಅಂತಾನೇ ಯದುವೀರ್ ಒಡೆಯರ್ ಅವರನ್ನ ಕಣಕ್ಕಿಳಿಸಿದ್ದಾರೆ ಎಂದು ಕುಟುಕಿದರು.
ಮೈಸೂರಿನಲ್ಲಿ ಇರುವ ಅಭ್ಯರ್ಥಿಯನ್ನು ಬದಲಾವಣೆ ಮಾಡಿದ್ದಾರೆ. ಯದುವೀರ್ ಅವರನ್ನ ಈಗ ಸ್ಪರ್ಧೆ ಮಾಡಿಸಿದ್ದಾರೆ. ಅವರ ಹಳೆಯ ಅಭ್ಯರ್ಥಿಯನ್ನೇ ಇಳಿಸಿದ್ದಾರೆ. ಅವರಿಗೆ ಅಭ್ಯರ್ಥಿ ಇಲ್ಲ ಅಂತಾನೇ ಅವರು ಯದುವೀರ್ ಅವರನ್ನ ಕಣಕ್ಕಿಳಿಸದ್ದಾರೆ. ನನಗೆ ಮೈಸೂರು ಮಾತ್ರ ಅಲ್ಲ, ಇಡೀ ರಾಜ್ಯವೇ ಸ್ವಕ್ಷೇತ್ರ. ನಾನು ಓದಿದ್ದು ಮೈಸೂರಿಲ್ಲಿ ಮಾತ್ರ ಎಂದು ಹೇಳಿದರು.
ಮಾಜಿ ಸಿಎಂ ಡಿ.ವಿ. ಸದಾನಂದಗೌಡರಿಗೆ ಕಾಂಗ್ರೆಸ್ ಸಂಪರ್ಕ ಮಾಡಿದೆ ಎನ್ನುವ ವಿಚಾರ ನನಗೆ ಗೊತ್ತಿಲ್ಲ. ನಾವು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 20 ಸ್ಥಾನ ಗೆಲ್ತೀವಿ. ನಾವು ನುಡಿದಂತೆ ನಡೆದಿದ್ದೇವೆ. ಅದೇ ವಿಶ್ವಾಸವಿದೆ ಎಂದು ತಿಳಿಸಿದರು.