ಬೆಂಗಳೂರು: ರಾಜ್ಯದಲ್ಲಿ ಮಳೆ ಅಭಾವದಿಂದ ನೀರಿನ ಸಮಸ್ಯೆ ಎದುರಾಗಿದೆ.ಈ ಹಿನ್ನಲೆ ಇವತ್ತು ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಸಿಎಂ ಸಿದ್ದರಾಮಯ್ಯ ಅಧಿಕಾರಿಗೊಂದಿಗೆ ಸಭೆ ನಡೆಸಿದ್ರು..ಆ ಕುರಿತು ಒಂದು ವರದಿ ಇಲ್ಲಿದೆ ನೋಡಿ
ಈ ಭಾರಿ ಮಳೆ ಕೊರೆತೆಯಿಂದ ರಾಜ್ಯದಲ್ಲಿ ನೀರಿನ ಕೊರೆತೆ ಎದುರಾಗಿದೆ.ಹಲವು ಜಿಲ್ಲೆಗಳಲ್ಲಿ ನೀರಿನ ಆಹಾಕಾರ ಉಂಟಾಗಿದ್ದು ಟ್ಯಾಂಕರ್ ಮೂಲಕ ಸರ್ಕಾರ ಜನರಿಗೆ ನೀರು ಕೊಡುವ ಪ್ರಯತ್ನ ನಡೆಸಿದೆ.ಬಹುತೇಕ ಡ್ಯಾಮ್ ಗಳಲ್ಲಿ ನೀರು ಇಲ್ವೆ ಇಲ್ಲಾ..ಈ ಹಿನ್ನಲೆ ರಾಜ್ಯಾದ್ಯಂತ ಉಂಟಾದ ನೀರಿನ ಸಮಸ್ಯೆ ಪರಿಹರಿಸಲು ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿಕೆಶಿವಕುಮಾರ್ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಹಲವು ಸೂಚನೆಗಳನ್ನ ನೀಡಿದ್ರು..ಇದೀಗ ರಾಜ್ಯದ ರಾಜಧಾನಿಯಲ್ಲೂ ನೀರಿನ ಆಹಾಕಾರ ಉಂಟಾಗಿದ್ದು ಈ ಕುರಿತು ಇಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗೊಳೊಂದಿಗೆ ಸಭೆ ನಡೆಸಿ ಹಲವು ಸೂಚನೆಗಳನ್ನ ಅಧಿಕಾರಿಗಳಿಗೆ ನೀಡಿದ್ರು
ಇಂದು ಸಿಎಂ ಸಿದ್ದರಾಮಯ್ಯ ಬೆಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಸಚಿವರು ಅಧಿಕಾರಿಗಳ ಸಭೆ ಕರೆದಿದ್ರು..ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನಲೆ ಸಚಿವರನ್ನ ಕೈ ಬಿಟ್ಟು ಅಧಿಕಾರ ಜೊತೆ ಮಾತ್ರಾ ಸಭೆ ನಡೆಸಿದ್ದಾರೆ.ಬಿಬಿಎಂಪಿ,ಬಿ ಡಬ್ಲೂ ಎಸ್ ಎಸ್ ಬಿ,ಇಂಧನ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಸಭೆ ನಡೆಸಿದ್ರು ನಂತರ ಮಾತನಾಡಿದ ಅವರು ಬೆಂಗಳೂರಲ್ಲಿD ನೀರು ಮಾತ್ರ ಕಾವೇರಿ ನೀರಿನಿಂದ ಬರ್ತಿದೆ.. ಉಳಿದದ್ದು ಬೋರ್ ವೆಲ್ ಮೂಲಕ 14 ಸಾವಿರ ಬೋರ್ ವೆಲ್ ಇದೆ. ಅದ್ರಲ್ಲಿ 6900 ಬೋರ್ ವೆಲ್ ಡ್ರೈ ಆಗಿಬಿಟ್ಟಿವೆ. 2600 MLD ನೀರು ಬೆಂಗಳೂರಿಗೆ ಬೇಕು. ಆದ್ರೆ ಬೆಂಗಳೂರಲ್ಲಿನೀರು ಮಾತ್ರ ಬರ್ತಿದೆ..
ಅತಿಕ್ಕಿಂತ ಹೆಚ್ಚು ನೀರು ಪಂಪ್ ಮಾಡೋಕೆ ಆಗಲ್ಲ ಅದ್ರ ಕ್ಯಾಪಿಸಿಟಿ ಇಷ್ಟೇ ಇರೋದು.. ಕಳೆದ ಬಾರಿಯು ಇಷ್ಟೇ ಆಗಿದ್ದು. 110 ಹಳ್ಳಿಗಳಿಗೆ ಈ ಹಿಂದೆ ನಾನು ಇದ್ದಾಗ ನೀರು ಕೊಡಬೇಕು ಎಂದು ತೀರ್ಮಾನ ಮಾಡಿದ್ದೆ. ಆದ್ರೆ ಹಿಂದಿನ ಸರ್ಕಾರದ ಕೋವಿಡ್ ಅಂತ ಹೇಳಿ ಮಾಡಲಿಲ್ಲ.. ಅದು ಜೂನ್ ನಲ್ಲಿ ಆ ಕಾಮಗಾರಿ ಮುಗಿಯುತ್ತೆ. ಕಾವೇರಿ ಮತ್ತು ಕಬಿನಿಯಲ್ಲಿ ಬೆಂಗಳೂರುಗೆ ಎಷ್ಟು ಬೇಕು ಅಷ್ಟು ಇಟ್ಟುಕೊಂಡಿದ್ದೇವೆ. ಜೂನ್ ನಿಂದ ಮಾನ್ಸೂನ್ ಆರಂಭವಾಗಲಿದೆ. ಇನ್ನೂ ಕಾವೇರಿಯಲ್ಲಿC ನೀರಿದೆ.. ಕಬಬಿನಿಯಲ್ಲಿನೀರಿದೆ ಎಂದು ಮಾಹಿತಿ ನೀಡಿದ್ರು….
ಇನ್ನೂ ಕುಡಿಯುವ ನೀರಿನ ಸಮಸ್ಯೆಗೆ ಹಲವು ಕ್ರಮಗಳನ್ನ ಕೈಗೊಳ್ಳುವ ಕುರಿತು ಮಾತನಾಡಿ ಕಂಟ್ರೋಲ್ ರೂಂ ಹೆಚ್ಚು ಮಾಡಿ ಎಂದು ಸೂಚಿಸಿದ್ದೇನೆ. ಅಲ್ದೇ ಟ್ಯಾಂಕರ್ ಹೆಚ್ಚಳ ಮಾಡಬೇಕು. ಎಲ್ಲಿ ಸಮಸ್ಯೆ ಇರುತ್ತೆ ಅಲ್ಲಿ ಮೊದಲು ಕ್ರಮ ಕೈಗೊಳ್ಳಬೇಕು. ನೀರು ದುರ್ಬಳಕೆಗೆ ಕ್ರಮ ಕೈಗ್ಳಬೇಕು ಎಂದು ಸೂಚಿದ್ದೇನೆ. ಕೆಸಿ ವ್ಯಾಲಿಯಿಂದ ಬೆಂಗಳೂರು ಕೆರೆ ಭರ್ತಿ ಮಾಡಿಸಲು ಸಣ್ಣ ನೀರಾವರಿ ಗೆ ಸೂಚಿಸಿದ್ದೇನೆ. 14 ಕೆರೆ ಭರ್ತಿ ಮಾಡಲು ಹೇಳಿದ್ದೇನೆ. ಇದ್ರಿಂದ ಅಂತರ್ಜಾಲ ವೃದ್ದಿಯಾಗಲಿದೆ.. ಇದಕ್ಕೆ ಹಣದ ಕೊರತೆ ಇಲ್ಲ. ಕುಡಿಯುವ ನೀರಿಗೆ ಯಾವುದೇ ಹಣದ ಸಮಸ್ಯೆ ಇಲ್ಲ. ಹಣದಿಂದ ತೊಂದರೆ ಆಯ್ತು ಅಂತ ಆಗಬಾರದು. ಸಂಬಂಧ ಪಟ್ಟ ಇಲಾಖೆಯವರು ಪ್ರತಿದಿನ ಸಭೆ ಮಾಡಬೇಕು. ಪ್ರತಿ ವಾರಕ್ಕೊಮ್ಮೆ ಪ್ಲಾನ್ ಗಳನ್ನಮಾಡಬೇಕು ಎಂದು ಖಡಕ್ ಸೂಚನೆ ನೀಡಿದ್ದೇನೆ ಎಂದು ಹೇಳಿದ್ರು….
ಒಟ್ಟಾರೆ ಸಿಲಿಕಾನ್ ಸಿಟಿಯಲ್ಲಿಯೇ ನೀರಿನ ಸಮಸ್ಯೆ ಎದುರಾಗಿದೆ. ಬೋರ್ ವೆಲ್ ಅವಲಂಬಿತರು ಕಾವೇರಿ ನೀರಿಗೆ ಅವಲಂಬಿತವಾಗಿದ್ದು ಇದು ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ.ಸರ್ಕಾರ ನೀರಿನ ಸಮಸ್ಯೆ ಪರಿಹರಿಸಲು ಹರಸಾಹಸ ಪಡೆಯುತ್ತಿದ್ದು..ಯಾವ ರೀತಿ ಕ್ರಮಗೊಳ್ಳುತ್ತೋ ಕಾದು ನೋಡಬೇಕಿದೆ..