ಬೆಂಗಳೂರು: ಲೋಕ ಸಮರಕ್ಕೆ ಮೂಹೂರ್ತ ಫಿಕ್ಸ್ ಆಗಿದ್ದರೂ,ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಸರ್ಕಸ್ ನಡೆಸುತ್ತಿದೆ. ಪ್ರಬಲ ಅಭ್ಯರ್ಥಿಗಳ ಕೊರತೆಯೇ ಕಾಂಗ್ರೆಸ್ ಗೆ ದೊಡ್ಡ ತಲೆನೋವಾಗಿದೆಿ ಇಂದು ದೆಹಲಿಯಲ್ಲಿ ಸಿಇಸಿ ಸಭೆ ನಡೆಯುಲಿದ್ದು,15 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮ ಮಾಡುವ ಸಾಧ್ಯತೆ ಇದೆ.
ಯೆಸ್, ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಮರ್ಥ ಅಭ್ಯರ್ಥಿಗಳ ತಲೆನೋವು ಎದುರಾಗಿದೆ.ನಾಳೆ ನಾಡಿದ್ದು ಎರಡನೇ ಪಟ್ಟಿ ಬಿಡುಗಡೆ ಮಾಡೋ ಉತ್ಸಾಹದಲ್ಲಿ ಎಐಸಿಸಿ ನಾಯಕರಿದ್ದಾರೆ.ಆದ್ರೆ ಎರಡನೇ ಪಟ್ಟಿ ಬಿಡುಗಡೆಗೆ ರಾಜ್ಯ ನಾಯಕರಿಂದ ಸರಿಯಾದ ಸಹಕಾರ ಹೈಕಮಾಂಡ್ ಗೆ ಸಿಗ್ತಿಲ್ಲ.ಕಾರಣ ರಾಜ್ಯ ನಾಯಕರಿಗೆ ಯಾರಿಗೆ ಟಿಕೆಟ್ ಕೊಡ್ಬೇಕು ಅನ್ನೋದು ಒಂದು ಕಡೆಯಾದ್ರೆ ಇನ್ನೂ ಕೆಲವು ಕಡೆ ಟಿಕೆಟ್ ನಿಮಗೆ ಕೊಡ್ತೇವೆ ತೆಗೆದುಕೊಳ್ಳಿ ಅಂತ ಬಲವಂತ ಮಾಡಿದ್ರೂ ನಾವೊಲ್ಲೆ ಅಂತ ಆಕಾಂಕ್ಷಿಗಳೇ ಹಿಂದಕ್ಕೆ ಸರಿಯುತ್ತಿದ್ದಾರೆ.ಹೀಗಾಗಿ ಪಟ್ಟಿ ಫೈನಲೈಸ್ ಮಾಡೋದೇ ತಲೆಬಿಸಿಯಾಗಿದೆಯಂತೆ..ಬೆಂಗಳೂರು ಮೂರು ಕ್ಷೇತ್ರಗಳಲ್ಲೂ ಸಮರ್ಥ ಅಭ್ಯರ್ಥಿಗಳಿಲ್ಲ..೨೦ ಕ್ಷೇತ್ರ ಗೆಲ್ಬೇಕಂದ್ರೆ ಬೆಂಗಳೂರಿನ ಮೂರು ಕ್ಷೇತ್ರಗಳು ಗೆಲ್ಲಲೇಬೇಕೆಂಬುದು ಡಿಕೆಶಿ ಲೆಕ್ಕಾಚಾರ.ಆದ್ರೆ ಅಭ್ಯರ್ಥಿಗಳು ಯಾರಿದ್ದಾರೆ ಅಂದ್ರೆ ಯಾರೂ ಕಾಣ್ತಿಲ್ಲ..ಹೀಗಾಗಿ ನಾಳೆ ಪಟ್ಟಿ ಕೊಡುವುದಾಗಿ ಹೈಕಮಾಂಡ್ ಗೆ ತಿಳಿಸಿದ್ದಾರೆ…
ಇನ್ನು ಬೆಂಗಳೂರು ಉತ್ತರದಲ್ಲಿ ಸಮರ್ಥರು ಸಿಗ್ತಿಲ್ಲ.ಪ್ರೊ.ರಾಜೀವ್ ಗೌಡ,ಕುಸುಮಾ ಹನುಮಂತರಾಯಮ್ಮ,ಮೀನಾಕ್ಷಿ ಕೃಷ್ಣಬೈರೇಗೌಡ ಹೆಸರು ಮುಂಚೂಣಿಯಲ್ಲಿವೆ.ಆದ್ರೆ ಶೋಭಾಕರಂದ್ಲಾಜೆಗೆ ಬಿಜೆಪಿ ಟಿಕೆಟ್ ಕೊಟ್ಟಿರೋದ್ರಿಂದ ಇವರಿಗಿಂತ ಸಮರ್ಥರು ಬೇಕಿದೆ.ಆದ್ರೆ ಪಕ್ಷದಲ್ಲಿ ಅಂತವರು ಕಾಣ್ತಿಲ್ಲ. ಇದ್ರ ನಡುವೆ ಬಿಜೆಪಿಯ ಮಾಜಿ ಸಿಎಂ ಸದಾನಂದಗೌಡರಿಗೂ ಡಿಕೆ ಗಾಳ ಹಾಕಿದ್ದಾರೆ.ಇದನ್ನ ಸ್ವತಃ ಸದಾನಂದಗೌಡ್ರು ಒಪ್ಪಿಕೊಂಡಿದ್ದಾರೆ.
ಇನ್ನು ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಬೀದರ್ ಗೆ ಸಾಗರ್ ಖಂಡ್ರೆ ಹಾಗೂ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹೆಸರು ಶಿಫಾರಸು ಮಾಡಲಾಗಿದೆ. ಆದ್ರೆ ಅವರಿಗೆ ಬೇಡ ಇವರಿಗೆ ಬೇಡ ಎಂಬ ಘರ್ಷಣೆ ನಡೆದಿದೆ.ಮೊನ್ನೆ ಸಿಎಂ ನಿವಾಸದಲ್ಲಿ ಸ್ವತಃ ಈಶ್ವರ್ ಖಂಡ್ರೆ ಪುತ್ರನಿಗೆ ಟಿಕೆಟ್ ನೀಡ್ಬೇಕೆಂದು ಡಿಮ್ಯಾಂಡ್ ಇಟ್ಟಿದ್ದಾರೆ..ನಾನು ಲಿಂಗಾಯತ ಸಮುದಾಯವನು ನನಗೇ ನೀಡಿ ಅಂತ ರಾಜಶೇಖರ್ ಪಾಟೀಲ್ ಬೇಡಿಕೆ ಇಟ್ಟಿದ್ದಾರೆ.ಸಿಎಂ ಮುಂದೆಯೇ ಇಬ್ಬರು ಟಿಕೆಟ್ ಗಾಗಿ ಪೈಟ್ ನಡೆಸಿದ್ದಾರೆ..ಈ ಫೈಟ್ ನೋಡಿದ ಅಲ್ಪಸಂಖ್ಯಾತ ಸಮುದಾಯ ಹೇಗಿದ್ರೂ ಬೆಂಗಳೂರು ಕೇಂದ್ರದ ಟಿಕೆಟ್ ಬೇಡ ಅಂತ ಮನ್ಸೂರ್,ನಸೀರ್ ಹೇಳ್ತಿದ್ದಾರೆ..ಹಾಗಾಗಿ ಅಲ್ಪಸಂಖ್ತಾತರಿಗೆ ಬೀದರ್ ನಲ್ಲಿ ಟಿಕೆಟ್ ಕೊಡಿ..ಅಬ್ದುಲ್ ಮನನ್ ಸೇಠ್ ಗೆ ಟಿಕೆಟ್ ನೀಡಿ ಅಂತ ಬೇಡಿಕೆ ಇಟ್ಟಿದ್ದಾರೆ.ಅಲ್ದೇ ಬಾಗಲಕೋಟೆಯ ಟಿಕೆಟ್ ಗಾಗಿ ವೀಣಾ ಕಾಶಪ್ಪನವರ್ ಬೆಂಬಲಿಗರು ಸಿಎಂ ಸಿದ್ದರಾಮಯ್ಯ ನಿವಾಸದ ಎದುರು ಶಕ್ತಿ ಪ್ರದರ್ಶನ ನಡೆಸಿದ್ರು.
ಒಟ್ನಲ್ಲಿ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಗೆ ಆಕಾಂಕ್ಷಿಗಳ ನಡುವೆ ಫೈಟ್ ಶುರುವಾಗಿದ್ರೆ,ಇನ್ನು ಕೆಲವು ಕಡೆ ಟಿಕೆಟ್ ಕೊಡ್ತೇವೆ ಅಂದ್ರೂ ಪಡೆಯೋಕೆ ಆಕಾಂಕ್ಷಿಗಳೇ ಹಿಂದೇಟಾಗ್ತಿದ್ದಾರೆ.ಹೀಗಾಗಿ ಕೆಲವು ಕಡೆ ಬದಲಾವಣೆ ಮಾಡುವ ಸಾಧ್ಯತೆಗಳಿವೆ.ಬಹುತೇಕ ನಾಡಿದ್ದು ಎರಡನೇ ಪಟ್ಟಿ ರಿಲೀಸ್ ಆಗುವ ಸಾಧ್ಯತೆ ಇದೆ.