ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೆಲುವು ಸಿಗಲಿ ಎಂದು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಐಟಿ ತಂತ್ರಜ್ಞರು ಹೋಮ ನಡೆಸಿದ್ದಾರೆ. ಸಿಲಿಕಾನ್ ವ್ಯಾಲಿಯಲ್ಲಿರುವ ಹಿಂದೂ ದೇವಾಲಯದಲ್ಲಿ ಪೂಜೆ ಆಯೋಜಿಸಿ ಮೋದಿ ಗೆಲುವಿಗೆ ಸಾಕಷ್ಟು ಮಂದಿ ಪ್ರಾರ್ಥನೆ ಸಲ್ಲಿಸಿದರು.
‘ಇದು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಲ್ಲ. ಬದಲಿಗೆ ನಮ್ಮ ಬೇಡಿಕೆಗಳ ಈಡೇರಿಕೆಗೆ ಸಲ್ಲಿಸುತ್ತಿರುವ ಸಾಮೂಹಿಕ ಆವಾಹನೆಯಾಗಿದೆ. ಅನಿವಾಸಿ ಭಾರತೀಯರು ಹಾಗೂ ದೊಡ್ಡ ಸಂಖ್ಯೆಯಲ್ಲಿ ನೆಲೆಸಿರುವ ಭಾರತೀಯರ ಪ್ರಾರ್ಥನೆಯಾಗಿದೆ’ ಎಂದು ಆಯೋಜಕರು ಹೇಳಿದ್ದಾರೆ.
ಹವನ ಸಂದರ್ಭದಲ್ಲಿ ‘ಅಬ್ ಕೀ ಬಾರ್ 400 ಪಾರ್’ ಘೊಷಣೆಯನ್ನು OFBJP ಸದಸ್ಯರು ಕೂಗಿದರು. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನಾಯಕತ್ವದಲ್ಲಿ ಬಿಜೆಪಿಯು ಸ್ಪಷ್ಟ ಬಹುಮತದೊಂದಿಗೆ ವಿಜಯ ದಾಖಲಿಸಿದೆ ಎಂದು ಭವಿಷ್ಯ ನುಡಿದರು.
‘ಈ ಧಾರ್ಮಿಕ ಸಂಘಟನೆಯು ನಾವು ಪ್ರಜಾಪ್ರಭುತ್ವದಲ್ಲಿ ಇಟ್ಟಿರುವ ಆಳವಾದ ನಂಬಿಕೆ ಹಾಗೂ ಭಾರತದಲ್ಲಿ ಮುಂದುವರಿದಿರುವ ಆಡಳಿತಾತ್ಮಕ ಸುಧಾರಣೆ ಮತ್ತು ಪ್ರಗತಿಯ ಪ್ರತಿಫಲನವಾಗಿದೆ’ ಎಂದಿದ್ದಾರೆ.
ಈ ಬಾರಿ ಲೋಕಸಭಾ ಚುನಾವಣೆಯು ಏ. 19ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.