ಹಣ ನಿಮಗೆ ಜಗತ್ತಿನ ಎಲ್ಲಾ ಸಂತೋಷ ತಂದುಕೊಡುವುದು ಎನ್ನುವ ಮಾತನ್ನು ನಾವು ಕೇಳಿದ್ದೇವೆ. ಆದರೆ ಖಂಡಿತವಾಗಿಯೂ ಸರಿಯಲ್ಲ. ಎಷ್ಟೇ ಹಣವಿದ್ದರೂ ಅದರಿಂದ ಮಾನಸಿಕ ನೆಮ್ಮದಿ ಖರೀದಿ ಮಾಡಲು ಸಾಧ್ಯವಿಲ್ಲ. ವಾರ್ಟನ್ ಸುಮಾರು 11 ಸಾವಿರ ಮಂದಿ ಪದವೀಧರರನ್ನು ಸಂಶೋಧನೆಗೆ ಒಳಪಡಿಸಿದೆ ಮತ್ತು ಈ ವೇಳೆ ಅವರ ಸಂತೋಷದ ಮಟ್ಟವನ್ನು ಕೂಡ ಅಳೆಯಲಾಗಿದೆ. ಆದರೆ ಸಂಶೋಧನೆಯಿಂದ ತಿಳಿದುಬಂದ ವಿಚಾರವೆಂದರೆ ಹಣವು ಸಂತೋಷವನ್ನು ತಂದುಕೊಡುವುದಿಲ್ಲ ಎನ್ನುವುದು.
ಇಂದು ಮಾರ್ಚ್ 20. ಈ ದಿನವನ್ನು ಅಂತಾರಾಷ್ಟ್ರೀಯ ಸಂತೋಷದ ದಿನ ಅಥವಾ ಇಂಟರ್ನ್ಯಾಷನಲ್ ಡೇ ಆಫ್ ಹ್ಯಾಪಿನೆಸ್ ಎಂದು ಆಚರಿಸುತ್ತಾರೆ. ಜುಲೈ 12, 2012ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತಾರಾಷ್ಟ್ರೀಯ ಖುಷಿಯ ದಿನವನ್ನು ಆಚರಿಸುವ ಬಗ್ಗೆ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ನಿರ್ಣಯವನ್ನು ಮೊದಲು ಭೂತಾನ್ ಪ್ರಾರಂಭಿಸಿತು. ರಾಷ್ಟ್ರೀಯ ಆದಾಯಕ್ಕಿಂತ ರಾಷ್ಟ್ರೀಯ ಸಂತೋಷ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಸಾರಿ ಹೇಳಿತು.
ಮಾರ್ಚ್ 20. ಈ ದಿನವನ್ನು ಅಂತಾರಾಷ್ಟ್ರೀಯ ಸಂತೋಷದ ದಿನ ಅಥವಾ ಇಂಟರ್ನ್ಯಾಷನಲ್ ಡೇ ಆಫ್ ಹ್ಯಾಪಿನೆಸ್ ಎಂದು ಆಚರಿಸಲು ಕಾರಣ ಸಹ ಇದೆ. ಯಾವಾಗಲೂ ಖುಷಿಯಾಗಿರುವುದರಿಂದ ಇರುವ ಪ್ರಯೋಜನಗಳನ್ನು ಜನರಿಗೆ ತಿಳಿಸುವುದೇ ಈ ದಿನವನ್ನು ಆಚರಿಸುವ ಪ್ರಮುಖ ಉದ್ದೇಶವಾಗಿದೆ. ಸಂತೋಷದ ಮೌಲ್ಯ ಮತ್ತು ಅದು ವ್ಯಕ್ತಿಯ ಯೋಗಕ್ಷೇಮದ ಮೇಲೆ ಬೀರುವ ಒಟ್ಟಾರೆ ಪ್ರಭಾವದ ಬಗ್ಗೆ ಈ ದಿನ ಜಾಗೃತಿ ಮೂಡಿಸಲಾಗುತ್ತದೆ.
2013ರಲ್ಲಿ, ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಮೊದಲ ಅಂತರರಾಷ್ಟ್ರೀಯ ಸಂತೋಷದ ದಿನವನ್ನು ಆಚರಿಸಿತು. 2015ರಲ್ಲಿ, ವಿಶ್ವಸಂಸ್ಥೆಯು 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ರಚಿಸಿತು, ಬಡತನ, ಅಸಮಾನತೆ ಮತ್ತು ಪರಿಸರವನ್ನು ರಕ್ಷಿಸುವ ಗುರಿಯೊಂದಿಗೆ ಸಂತೋಷ ಮತ್ತು ಯೋಗಕ್ಷೇಮಕ್ಕೆ ಕಾರಣವಾಗುವ ಮೂರು ನಿರ್ಣಾಯಕ ಅಂಶಗಳು ಎಂದು ಘೋಷಿಸಿತು.
ಸಂತಸದ ದಿನವನ್ನು ಆಚರಿಸುವುದು ಹೇಗೆ?
ನಿಮಗೆ ಸಂತೋಷವನ್ನುಂಟು ಮಾಡುವ ಯಾವುದೇ ಕೆಲಸಗಳನ್ನು ಮಾಡಿ. ನಿಮ್ಮ ಸಂತೋಷ ಮತ್ತು ತೃಪ್ತಿಯ ಯಾವುದೇ ಭಾವನೆಗಳನ್ನು ಪ್ರತಿಬಿಂಬಿಸಲು ಸಮಯ ತೆಗೆದುಕೊಳ್ಳಿ. ಇದು ಇತರರಿಗೆ ಸಂತೋಷವನ್ನು ಹರಡುವ ದಿನವಾಗಿದೆ. ಜನರು ಸಾಮಾಜಿಕ ಪ್ರಾಣಿಗಳು, ಆದ್ದರಿಂದ ಸಾಮಾಜಿಕವಾಗಿರಲು ಮತ್ತು ಇತರರೊಂದಿಗೆ ಸಮಯ ಕಳೆಯಲು ವೇದಿಕೆ ಕಲ್ಪಿಸಿ.
ಈ ವರ್ಷದ ವಿಷಯವೆಂದರೆ ಎಲ್ಲರಿಗೂ, ಎಂದೆಂದಿಗೂ ಸಂತೋಷ ಎಂಬುದಾಗಿದೆ. ಇದು ಪ್ರಪಂಚದಾದ್ಯಂತದ ಜನರಿಗೆ ಸಂತೋಷದ ಮಹತ್ವವನ್ನು ಸೂಚಿಸುತ್ತದೆ. ಜನರ ದೈನಂದಿನ ಜೀವನದಲ್ಲಿ ಸಂತೋಷದ ಮಹತ್ವವನ್ನು ಎತ್ತಿ ಹಿಡಿಯಲು ಪ್ರತಿ ವರ್ಷ ಮಾರ್ಚ್ 20 ರಂದು ಈ ದಿನವನ್ನು ಅಂತಾರಾಷ್ಟ್ರೀಯ ಸಂತೋಷ ದಿನ ಅಥವಾ ಇಂಟರ್ನ್ಯಾಷನಲ್ ಡೇ ಆಫ್ ಹ್ಯಾಪಿನೆಸ್ ಎಂದು ಆಚರಿಸುತ್ತಾರೆ.