ಬೇಸಿಗೆ ಆರಂಭವಾಗಿದ್ದು ಜನರು ಈ ರಣ ಬಿಸಿಲಿಗೆ ಸುಸ್ತಾಗಿ ಹೋಗಿದ್ದಾರೆ. ವಾತಾವರಣದಲ್ಲಿ ಉಷ್ಣದ ತೀವ್ರತೆ ಹೆಚ್ಚಾಗಿ, ಅದು ಹಲವು ದಿನಗಳ ಕಾಲ ಹಾಗೇ ಇರುವುದನ್ನು ಶಾಖದ ತರಂಗ ಅಥವಾ ಉಷ್ಣ ತರಂಗ ಎಂದು ಕರೆಯಲಾಗುತ್ತದೆ. ಇದು ಭೂಮಿಯ ಮೇಲಿನ ಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ವಾತಾವರಣದಲ್ಲಿ ಉಷ್ಣತೆ ಜಾಸ್ತಿಯಾದಾಗ ದೇಹ ನಿರ್ಜಲೀಕರಣಗೊಳ್ಳುತ್ತದೆ.ಹಾಗಾದರೆ ಬೇಸಿಗೆಯಲ್ಲಿ ದೇಹವನ್ನು ಕೂಲ್ ಆಗಿಟ್ಟುಕೊಳ್ಳಲು ಎಂತಹ ಅಹಾರಗಳನ್ನು ಸೇವಿಸಬೇಕು ಎನನ್ಉವ ಮಾಹಿತಿ ಇಲ್ಲಿದೆ ನೋಡಿ
ಲಘು ಆಹಾರ ಸೇವಿಸಿ: ಬೇಸಿಗೆಯಲ್ಲಿ ನೀರು ಹೆಚ್ಚು ಕುಡಿಯುವುದರಿಂದ ಆಹಾರ ಸೇವಿಸುವ ಪ್ರಮಾಣ ಕಡಿಮೆ ಇರುತ್ತದೆ. ಆದರೆ ದೇಹಕ್ಕೆ ಅಗ್ಯತವಿರುವ ಪೋಷಕಾಂಶ ಸೇವಿಸಿ. ಬೇಸಿಗೆಯಲ್ಲಿ ಕುಂಬಳಕಾಯಿ, ಸೌತೆ, ಸೊಪ್ಪು ಈ ರೀತಿಯ ಆಹಾರ ಸೇವಿಸಿ.
ತಣ್ಣೀರಿನಲ್ಲಿ ಸ್ನಾನ ಮಾಡಿ: ಬೇಸಿಗೆಯಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ದೇಹವನ್ನು ತಂಪಾಗಿ ಇಡಬಹುದು. ಅಲ್ಲದೆ ಮಲಗುವ ಮುಂಚೆ ತಣ್ಣೀರಿನಲ್ಲಿ ಕೈ-ಕಾಲು ಮುಖ ತೊಳೆದು ಮಲಗಿ. ಅಲ್ಲದೆ ಐಸ್ಪ್ಯಾಕ್ ಅನ್ನು ಕುತ್ತಿಗೆ ಬಳಿ ಇಟ್ಟು ಮಲಗುವುದರಿಂದ ಸೆಕೆಗೆ ಹಿತವಾಗುವುದು.
ಹಣ್ಣುಗಳ ಜ್ಯೂಸ್ ಕುಡಿಯಿರಿ: ಬೇಸಿಗೆಯಲ್ಲಿ ಸೆಖೆ ಹೆಚ್ಚಿರುವುದರಿಂದ ದೇಹದಲ್ಲಿ ನೀರಿನ ಅಂಶದ ಕೊರತೆಯಾಗಿರುತ್ತದೆ. ಇದಕ್ಕಾಗಿ ಹಣ್ಣುಗಳ ಜ್ಯೂಸ್ ಕುಡಿಯಿರಿ. ಸೇಬು ಹಣ್ಣು, ದ್ರಾಕ್ಷಿ, ಕಲ್ಲಂಗಡಿ, ಕರ್ಬೂಜ ಹಣ್ಣುಗಳ ಜ್ಯೂಸ್ ಕುಡಿಯಿರಿ. ಇದರಿಂದ ದೇಹಕ್ಕೆ ಬೇಕಾದ ಪ್ರೋಟಿಣ್ ಅಂಶ ಮತ್ತು ಯಥೇಚ್ಛವಾದ ನೀರಿನ ಅಂಶ ದೊರಕುತ್ತದೆ. ಹೀಗಾಗಿ ಆಗಾಗ ಜ್ಯೂಸ್ ಕುಡಿಯಿರಿ.
ಮಧ್ಯಾಹ್ನದ ಬಿಸಿಲಿನಲ್ಲಿ ಓಡಾಡಬೇಡಿ: ಹೊರಗಡೆ ಹೋಗುವ ಕೆಲಸವಿದ್ದರೆ ಬೆಳಗ್ಗೆ ಅಥವಾ ಸಂಜೆ ಮಾಡುವುದು ಒಳ್ಳೆಯದು. ಮಧ್ಯಾಹ್ನ ಆದಷ್ಟು ಮನೆಯೊಳಗೆ ಅಥವಾ ತಂಪಾದ ಸ್ಥಳದಲ್ಲಿರಿ. ಇನ್ನು ಹೊರಗಡೆ ಓಡಾಡುವುದಾದರೆ ಕೊಡೆ ಹಿಡಿದು ಓಡಾಡಿರಿ, ಸನ್ಸ್ಕ್ರೀನ್ ಲೋಷನ್ ಬಳಸಿ.
ಸಡಿಲ ಬಟ್ಟೆಗಳನ್ನು ಧರಿಸಿ: ಬೇಸಿಗೆಯಲ್ಲಿ ಧರಿಸುವ ಡ್ರೆಸ್ ಕಡೆ ಕೂಡ ಗಮನ ನೀಡಬೇಕು. ತೆಳುವಾದ ಕಾಟನ್ ಅಥವಾ ಹತ್ತಿಯ ಬಟ್ಟೆಗಳು ಬೇಸಿಗೆ ಕಾಲಕ್ಕೆ ಒಳ್ಳೆಯದು. ಆದಷ್ಟು ಸಡಿಲ ಬಟ್ಟೆಗಳನ್ನು ಧರಿಸಿ. ಇದರಿಂದ ದೇಹಕ್ಕೆ ಗಾಳಿಯೂ ದೊರೆಯುತ್ತದೆ.