ಖಿನ್ನತೆ ಹೋಗಲಾಡಿಸುವಲ್ಲಿ ಯೋಗ ಪರಿಣಾಮಕಾರಿ. ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಮಾನಸಿಕ ಆರೋಗ್ಯ ಮಾತ್ರವಲ್ಲ, ದೈಹಿಕ ಆರೋಗ್ಯ ಹಾಳಾಗುವುದು. ಈ ಆಸನಗಳನ್ನು ಮಾಡಿದರೆ ಮಾನಸಿಕ ಒತ್ತಡ ದೂರವಾಗುವುದು, ದೇಹವು ಶಕ್ತಿಯನ್ನು ಪಡೆಯುವುದು. ಯೋಗ, ಜಾಗಿಂಗ್ ಅಥವಾ ಸೈಕೋಥೆರಪಿ ಮತ್ತು ಔಷಧಗಳ ಮೂಲಕ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಖಿನ್ನತೆ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.
ಸೈಕೋಥೆರಪಿ ಮತ್ತು ಔಷಧಗಳ ಜೊತೆಗೆ ವ್ಯಾಯಾಮಗಳನ್ನು ಶಿಫಾರಸು ಮಾಡಲಾಗುತ್ತದೆ. ಆದರೆ, ಚಿಕಿತ್ಸೆಯ ಮಾರ್ಗಸೂಚಿಗಳು ಮತ್ತು ಹಿಂದಿನ ಪುರಾವೆಗಳ ವಿಮರ್ಶೆಗಳು ಖಿನ್ನತೆ ನಿರ್ವಹಣೆಗೆ ವ್ಯಾಯಾಮ ಉತ್ತಮ ಎಂಬುದನ್ನು ಹೇಗೆ ಶಿಫಾರಸು ಮಾಡಬೇಕು ಎಂದು ಒಪ್ಪುವುದಿಲ್ಲ.
ಈ ಅಧ್ಯಯನಕ್ಕಾಗಿ 218 ಪ್ರಯೋಗಗಳನ್ನು ನಡೆಸಿದ್ದು, ಖಿನ್ನತೆ ಹೊಂದಿರುವ 14,170 ಮಂದಿ ಅಧ್ಯಯನದಲ್ಲಿ ಭಾಗಿಯಾಗಿದ್ದಾರೆ. ಈ ಅಧ್ಯಯನವನ್ನು ಬಿಎಂಜೆಯಲ್ಲಿ ಪ್ರಕಟಿಸಲಾಗಿದೆ. ಅಧ್ಯಯನವೂ ಚಟುವಟಿಕೆಗಳ ಮೂಲಕ ಹೆಚ್ಚು ಸಕ್ರಿಯವಾಗಿರುವುದರಿಂದ ಪ್ರಯೋಜನವನ್ನು ಪಡೆಯಬಹುದು ಎಂಬುದನ್ನು ಸೂಚಿಸಿದೆ.
ಸ್ಪೇನ್, ಡೆನ್ಮಾರ್ಕ್, ಆಸ್ಟ್ರೇಲಿಯಾ ಮತ್ತು ಫಿನ್ಲ್ಯಾಂಡ್ನಲ್ಲಿ ಖಿನ್ನತೆ ಚಿಕಿತ್ಸೆಗೆ ಸೈಕೋಥೆರಪಿ ಮತ್ತು ಔಷಧಗಳ ಜೊತೆಗೆ ವ್ಯಾಯಾಮವನ್ನು ಪರಿಗಣಿಸುವಂತೆ ತಿಳಿಸಲಾಗಿದೆ. ನಿಯಂತ್ರಿತ ಗುಂಪಿಗೆ ಹೋಲಿಸಿದಾಗ ನೃತ್ಯ, ವಾಕಿಂಗ್, ಯೋಗ, ಏರೋಬಿಕ್ನಂತಹ ಚಟುವಟಿಕೆಗಳನ್ನು ಹೊಂದಿರುವ ಖಿನ್ನತೆಯ ಗುಂಪಿನಲ್ಲಿ ಸುಧಾರಣೆ ಕಂಡು ಬಂದಿದೆ. ಫಿಸಿಯೋಥೆರಪಿ ಜೊತೆಗೆ ವ್ಯಾಯಾಮವನ್ನು ಏರೋಬಿಕ್ ಮತ್ತು ಎಸ್ಎಸ್ಆರ್ಐನೊಂದಿಗೆ ಸಂಯೋಜಿಸಿದಾಗ ವ್ಯಾಯಾಮವು ಹೆಚ್ಚುವರಿ ಪ್ರಯೋಜನವನ್ನು ನೀಡುತ್ತದೆ.
ವಾಕಿಂಗ್ ಅಥವಾ ಜಾಗಿಂಗ್ ಪುರುಷ ಮತ್ತು ಮಹಿಳೆಯರಲ್ಲಿ ಪರಿಣಾಮಕಾರಿಯಾಗಿದ್ದು, ಮಹಿಳೆಯರಲ್ಲಿ ಶಕ್ತಿ ತರಬೇತಿ ಪರಿಣಾಮಕಾರಿಯಾಗಿದ್ದು, ಯೋಗವೂ ಪುರುಷರಲ್ಲಿ ಪರಿಣಾಮಕಾರಿಯಾಗಿದೆ. ವಯಸ್ಸಾದವರಲ್ಲಿ ಯೋಗವೂ ಪರಿಣಾಮಕಾರಿಯಾಗಿದ್ದು, ಯುವ ಜನತೆಯಲ್ಲಿ ಶಕ್ತಿ ತರಬೇತಿ ಪರಿಣಾಮಕಾರಿಯಾಗಿದೆ.
ವಾಕಿಂಗ್ ಮತ್ತು ಯೋಗದಂತಹ ಹಗುರ ದೈಹಿಕ ಚಟುವಟಿಕೆಗಳು ಪ್ರಯೋಗಿಕವಾಗಿ ಪರಿಣಾಮಕಾರಿಯಾಗಿದ್ದು, ತೀವ್ರತರಹದ ರನ್ನಿಂಗ್ ಮತ್ತು ಮಧ್ಯಂತರ ತರಬೇತಿಗಳು ಹೆಚ್ಚಿನ ಪ್ರಯೋಜನ ನೀಡುತ್ತದೆ. ಆರೋಗ್ಯ ಪರಿಸ್ಥಿತಿಗಳು ಮತ್ತು ಖಿನ್ನತೆಯ ವಿವಿಧ ಹಂತಗಳಿರುವ ಜನರಿಗೆ ವ್ಯಾಯಾಮವು ಸಮಾನವಾಗಿ ಪರಿಣಾಮಕಾರಿ ಆಗಿದೆ.