ನವದೆಹಲಿ:- ಕೇಂದ್ರ ಸರ್ಕಾರವು IVF ಮೂಲಕ ಮಗು ಪಡೆಯಬಹುದು ಎಂದುಕೊಂಡಿದ್ದವರಿಗೆ ಬಿಗ್ ಶಾಕ್ ನೀಡಿದ್ದು, ವಯಸ್ಸಿನ ಮಿತಿ ನಿಗದಿಪಡಿಸಿದೆ.
ಇತ್ತೀಚೆಗೆ ದಿವಂಗತ ಗಾಯಕ ಸಿಧು ಮೂಸ್ ವಾಲಾ ಅವರ ಪೋಷಕರು ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ ನಂತರ ಕೇಂದ್ರ ಈ ನಿರ್ಧಾರಕ್ಕೆ ಬಂದಿದೆ.
ಮಗುವಿನ ಬಗ್ಗೆ ದಾಖಲೆಗಳಿಗಾಗಿ ಜಿಲ್ಲಾಡಳಿತವು ತನಗೆ ಕಿರುಕುಳ ನೀಡುತ್ತಿದೆ ಎಂದು ಗಾಯಕನ ತಂದೆ ಬಲ್ಕೌರ್ ಸಿಂಗ್ ಆರೋಪಿಸಿದ್ದಾರೆ. ಗಾಯಕ-ಮಗನನ್ನು ಗುಂಡಿಕ್ಕಿ ಕೊಂದ ಸುಮಾರು ಎರಡು ವರ್ಷಗಳ ನಂತರ, ದಂಪತಿಗೆ ಕಳೆದ ಶನಿವಾರ ಮಗು ಜನಿಸಿತು ಎನ್ನಲಾಗಿದೆ.