ಮಹಾರಾಷ್ಟ್ರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಜಾಸ್ತಿ ಕುರುಕಲು ತಿಂಡಿ ತಿನ್ನಬೇಡ ಎಂದು ತಂದೆ ಬೈದಿದ್ದಕ್ಕೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೌದು ಮೃತ ಭೂಮಿಕಾ ವಿನೋದ್ ಧನ್ವಾನಿ ನಗರದ ಸಿಂಧಿ ಕಾಲೋನಿ ಪ್ರದೇಶದಲ್ಲಿ ವಾಸವಾಗಿದ್ದರು.
ಭೂಮಿಕಾ ಬಿಬಿಎ ವಿದ್ಯಾರ್ಥಿನಿಯಾಗಿದ್ದು, ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದರು. ಜಂಕ್ ಫುಡ್ ತಿಂದಿದ್ದಕ್ಕೆ ತಂದೆ ಬೈದಿದ್ದಕ್ಕೆ ಮನನೊಂದ ಆಕೆ ಉದ್ದನೆಯ ಬಟ್ಟೆಯಿಂದ ಅಡುಗೆ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆಕೆಯ ಪೋಷಕರು ಬೆಳಗ್ಗೆ ಆಕೆಯನ್ನು ನೇಣುಬಿಗಿದ ಸ್ಥಿತಿಯಲ್ಲಿ ಕಂಡ ತಕ್ಷಣವೇ, ನಂತರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಆಕೆ ಬದುಕುಳಿಯಲಿಲ್ಲ. ಇನ್ನೂ ಈ ಘಟನೆ ಸಂಬಂಧ ಮಹಾರಾಷ್ಟ್ರದ ನಾಗ್ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.