ಇತ್ತೀಚಿನ ದಿನಗಳಲ್ಲಿ ಪ್ರೇಮಿಗಳಾಗಿರಬಹುದು or ಗಂಡ ಹೆಂಡತಿ ಆಗಿರಬಹುದು ತಮ್ಮ ಪ್ರೀತಿಸಿದವರಿಗಾಗಿ ಅವರ ಜೊತೆ ಒಟ್ಟಿಗೆ ಸಮಯ ಕಳೆಯಲು ಡಿನ್ನರ್ ಡೇಟ್ ಅರೆಂಜ್ ಮಾಡೋದು ಕಾಮನ್.
ಅದೇ ರೀತಿ ಇಲ್ಲಿಬರು ದಂಪತಿ ಡಿರ್ಫೆಂಟ್ ಎನ್ನುತ್ತಾ ಬೆಟ್ಟದ ಮೇಲೆ ಗಾಳಿಯಲ್ಲಿ ತೇಲಾಡುವ ರೊಮ್ಯಾಂಟಿಕ್ ಡಿನ್ನರ್ ಡೇಟ್ ಅರೇಂಜ್ ಮಾಡಿದ್ದಾರೆ.
ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಬಹುಶಃ ಇದೇ ಅವರ ಕೊನೆಯ ಡೇಟ್ ಆಗಿರಬೇಕು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ನವ ದಂಪತಿಗಳು ಅಥವಾ ಪ್ರೇಮಿಗಳು ಒಟ್ಟಿಗೆ ಹೆಚ್ಚು ಸಮಯ ಕಳೆಯಲು ಬಯಸುವುದು ಸಹಜ. ಹೀಗೆ ಸಂಗಾತಿಗಳು ತಮ್ಮ ಬಿಡುವಿಲ್ಲದ ಸಮಯದಲ್ಲೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು, ಸಂಬಂಧವನ್ನು ಬಲಪಡಿಸಬೇಕೆಂದು ಆಗಾಗ್ಗೆ ಡಿನ್ನರ್ ಡೇಟ್, ಲಾಂಗ್ ರೈಡ್, ಔಟಿಂಗ್ ಅಂತ ಹೋಗುತ್ತಿರುತ್ತಾರೆ. ಸಾಮಾನ್ಯವಾಗಿ ಡಿನ್ನರ್ ಡೇಟ್ ಗಾಗಿ 5 ಸ್ಟಾರ್ ಹೋಟೆಲ್ ಇಲ್ಲವೇ ತಮ್ಮ ನೆಚ್ಚಿನ ಫುಡ್ ಸ್ಪಾಟ್ಗಳಿಗೆ ಹೋಗುತ್ತಾರೆ. ಇಲ್ಲೊಂದು ದಂಪತಿಗಳು ನಾವು ಸ್ವಲ್ಪ ಡಿರ್ಫೆಂಟ್ ಎನ್ನುತ್ತಾ ಬೆಟ್ಟದ ಮೇಲೆ ಗಾಳಿಯಲ್ಲಿ ತೇಲಾಡುವ ಡಿನ್ನರ್ ಡೇಟ್ ಅರೇಂಜ್ ಮಾಡಿದ್ದಾರೆ. ಈ ಕಸರತ್ತನ್ನು ಕಂಡು ಇದ್ಯಾವ ಬಗೆಯ ಡಿನ್ನರ್ ಡೇಟ್ ಎಂದು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ವೈರಲ್ ವಿಡಿಯೋದಲ್ಲಿ ದಂಪತಿಗಳಿಬ್ಬರು ಬೆಟ್ಟದ ಮೇಲೆ ತೇಲಾಡುವ ಡಿನ್ನರ್ ಡೇಟ್ ಅರೇಂಜ್ ಮಾಡಿರುವುದನ್ನು ಕಾಣಬಹುದು. ಬೆಟ್ಟದ ತುತ್ತ ತುದಿಯಲ್ಲಿ ರೋಪ್ ವೇ ಒಂದರಲ್ಲಿ ಟೇಬಲ್ ಸೆಟ್ಅಪ್ ಇಟ್ಟು ನಂತರ ಟೇಬಲ್ ಮೇಲೆ ತರಹೇವಾರಿ ಫುಡ್ ಇಟ್ಟು, ದಂಪತಿಗಳನ್ನು ಕೂರಿಸಲಾಗುತ್ತದೆ. ಅಲ್ಲಿದ್ದ ಇತರರರು ಜೋರಾಗಿ ಚಪ್ಪಾಳೆ ತಟ್ಟಿ, ನಂತರ ಮೆಲ್ಲಗೆ ಆ ರೋಪ್ ಅನ್ನು ತಳ್ಳುತ್ತಾರೆ. ಹೀಗೆ ಭಯದಲ್ಲಿಯೇ ದಂಪತಿಗಳು ರೋಪ್ ವೇ ಯಲ್ಲಿ ರೊಮ್ಯಾಂಟಿಕ್ ಹಾಗೇನೇ ಭಯದ ಡಿನ್ನರ್ ಡೇಟ್ ಮಾಡಿದ್ದಾರೆ.
ಮಾರ್ಚ್ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 60.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.5 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಲವಾರು ಕಾಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಕನಿಷ್ಟ ಪಕ್ಷ ಸುರಕ್ಷತೆಯ ದೃಷ್ಟಿಯಿಂದ ಅವರಿಬ್ಬರಿಗೆ ಸೇಫ್ಟಿ ಬೆಲ್ಟ್ ಹಾಕಬೇಕಿತ್ತುʼ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಹುಶಃ ಇದು ಅವರ ಕೊನೆಯ ಡಿನ್ನರ್ ಡೇಟ್ ಆಗಿರಬೇಕುʼ ಎಂದು ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಸಂತೋಷದ ಜೊತೆಜೊತೆಗೆ ಒತ್ತಡದ ಡಿನ್ನರ್ ಡೇಟ್ʼ ಎಂದು ತಮಾಷೆ ಮಾಡಿದ್ದಾರೆ