ಇಂದು ವಿಶ್ವ ಜಲ ದಿನ. ಸಕಲ ಜೀವರಾಶಿಗಳ ಮೂಲ ನೀರು. ನೀರಿಲ್ಲದ ಬದುಕು ಊಹೆಗೂ ನಿಲುಕದ್ದು, ಹುಟ್ಟಿನಿಂದ ಸಾಯುವವರೆಗೂ ಪ್ರತೀ ಜೀವಿಗೆ ನೀರು ಅತ್ಯಗತ್ಯ. ಸಾಯುವ ಮೊದಲೂ ಕೂಡ ಒಂದು ಹನಿ ನೀರು ಬಾಯಿಗೆ ಬೇಕು ಎನ್ನುವ ಪದ್ಧತಿ ಇದೆ. ಹೀಗಾಗಿ ನೀರನ್ನು ಜೀವಜಲ ಎಂದೇ ಕರೆಯುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾಡಿನ ನಾಶದಿಂದ ಸರಿಯಾಗಿ ಮಳೆಯಾಗದೆ ನೀರಿನ ಕೊರತೆ ಎದುರಾಗುತ್ತಿದೆ.
ಬಯಲು ಸೀಮೆಯಂತಹ ಪ್ರದೇಶಗಳಲ್ಲಿ ಬೇಸಿಗೆ ಬಂತೆಂದರೆ ಸಾಕು ಎಲ್ಲಡೆ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ ಎನ್ನುವುದು ದುರಂತಹ. ಇಂತಹ ಸಮಸ್ಯೆಗಳಿಗೊಂದು ಪರಿಹಾರ ನೀಡಬೇಕು. ಮುಂದಿನ ಪೀಳಿಗೆಗೆ ನೀರಿನ ಮಹತ್ವವನ್ನು ತಿಳಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರತೀ ವರ್ಷ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ.
ಪ್ರತೀ ವರ್ಷ ಮಾರ್ಚ್ 22 ರಂದು ಜಗತ್ತಿನಾದ್ಯಂತ ಜಲ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 1993 ರಿಂದ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ವಿಶ್ವದಲ್ಲಿ ನೀರಿನ ಕೊರತೆಯ ಬಗ್ಗೆ ಜಾಗೃತಿ ಮೂಡಿಸಲು ಆಚರಿಸುತ್ತಿದೆ.
ವಿಶ್ವ ಜಲ ದಿನದ ಇತಿಹಾಸ: ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನದ ಇತಿಹಾಸದ ಬಗ್ಗೆ ನೋಡುವುದಾದರೆ 1992ರಲ್ಲಿ ರಿಯೊ ಡಿ ಜನೈರೋದಲ್ಲಿ ನಡೆದ ವಿಶ್ವ ಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿಯ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಸಿಹಿ ನೀರಿನ ದಿನವನ್ನು ಆಚರಿಸುವ ಬಗ್ಗೆ ಶಿಫಾರಸ್ಸು ಮಾಡಲಾಯಿತು. ಆದಾದ ಬಳಿಕ ಡಿಸೆಂಬರ್ 22ರಂದು ವಿಶ್ವಸಂಸ್ಥೆ ಸಂಸತ್ತಿನಲ್ಲಿ ಈ ನಿರ್ಣಯಕ್ಕೆ ಒಪ್ಪಿಗೆ ಸಿಕ್ಕಿತು. 1993 ಮಾರ್ಚ್ 22ರಂದು ಮೊದಲ ವಿಶ್ವ ಜಲ ದಿನವೆಂದು ಘೋಷಿಸಲಾಯಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಜಲದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ವಿಶ್ವ ಜಲ ದಿನದ ಮಹತ್ವ: ಮುಖ್ಯವಾಗಿ ನೀರಿನ ಕೊರತೆಯ ಬಗ್ಗೆ ಅರಿವು ಮೂಡಿಸುವುದು ವಿಶ್ವ ಜಲ ದಿನದ ಮಹತ್ವದ ಉದ್ದೇಶವಾಗಿದೆ. ಇಂದಿನ ದಿನಗಳಲ್ಲಿ ನೀರಿನ ಸಂರಕ್ಷಣೆ ಅತೀ ಅಗತ್ಯವಾಗಿದೆ. ಭೂಮಿಯ ಮೇಲೆ ಸುಮಾರು 70 ಪ್ರತಿಶತದಷ್ಟು ನೀರು ಆವರಿಸಿದ್ದರೆ, ಸಿಹಿನೀರು ಅದರ ಶೇಕಡಾ 3 ರಷ್ಟಿದೆ, ಅದರಲ್ಲಿ ಮೂರನೇ ಎರಡರಷ್ಟು ಹೆಪ್ಪುಗಟ್ಟಿದ ಅಥವಾ ಪ್ರವೇಶಿಸಲಾಗುವುದಿಲ್ಲ ಮತ್ತು ಬಳಕೆಗೆ ಲಭ್ಯವಿಲ್ಲ.
ವರದಿಯ ಪ್ರಕಾರ ನಮಗೆ ಕುಡಿಯಲು ಶುದ್ಧ ನೀರು, ಇತರ ಗೃಹೋಪಯೋಗಿ ವಸ್ತುಗಳು ಮತ್ತು ಜಮೀನುಗಳಿಗೆ ನೀರುಣಿಸಲು ಅಗತ್ಯವಿದೆ. ಆದ್ದರಿಂದ, ಪ್ರಪಂಚದಾದ್ಯಂತ ಸುಮಾರು 1.1 ಶತಕೋಟಿ ಜನರು ಶುದ್ಧ ನೀರಿನ್ನು ಪಡೆಯುವುದಿಲ್ಲ ಮತ್ತು ಒಟ್ಟು 2.7 ಶತಕೋಟಿ ಜನರು ವರ್ಷದಲ್ಲಿ ಕನಿಷ್ಠ ಒಂದು ತಿಂಗಳ ಕಾಲ ನೀರಿನ ಕೊರತೆಯನ್ನು ಅನುಭವಿಸುತ್ತಾರೆ. ಆದ್ದರಿಂದ ನೀರಿನ ಮಿತ ಬಳಕೆ ಅಗತ್ಯವಾಗಿದೆ.