ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಇಬ್ಬರು ಭಾರತೀಯ ಮೂಲದವರಿಗೆ ಹಾಗೂ ಒಬ್ಬರು ಮಹಿಳಾ ಪೊಲೀಸ್ ಅಧಿಕಾರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಪ್ರಕರಣದಲ್ಲಿ 26 ವರ್ಷದ ಖಾಲಿಸ್ತಾನ್ ಹೋರಾಟಗಾರ ಗುರ್ಪ್ರೀತ್ ಸಿಂಗ್ಗೆ 28 ತಿಂಗಳ ಜೈಲುಶಿಕ್ಷೆ ವಿಧಿಸಲಾಗಿದೆ.
ಪಶ್ಚಿಮ ಲಂಡನ್ನಲ್ಲಿ ಭಾರತೀಯ ಸಮುದಾಯ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದ ಗುರುಪ್ರೀತ್ ಸಿಂಗ್, ತನ್ನಲ್ಲಿದ್ದ `ಕಿರ್ಪಾನ್’ (ಸಿಖ್ಖರ ಧಾರ್ಮಿಕ ಸಮವಸ್ತ್ರದ ಭಾಗವಾದ ಸಣ್ಣ ಚೂರಿ)ನಿಂದ ಮೂವರಿಗೆ ಇರಿದಿದ್ದ. ಇದರಿಂದ ಗಾಯಗೊಂಡಿದ್ದ ಮೂವರು ಆತನ ವಿರುದ್ಧ ದೂರು ದಾಖಲಿಸಿದ್ದರು. ಇದೀಗ ಈ ಪ್ರಕರಣದಲ್ಲಿ ಆರೋಪಿಗೆ ಎರಡು ವರ್ಷ ನಾಲ್ಕು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.