ಬೆಂಗಳೂರು: ಇಂದಿನಿಂದ ಐಪಿಎಲ್ ಆರಂಭ ಹಿನ್ನೆಲೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಿಂಗ್ ನಡೆಯೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೌದು ಇಂದಿನಿಂದ IPL ಆರಂಭವಾಗುತ್ತಿದ್ದು ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಡಿಸಿಪಿಗಳಿಗೆ ಅಲರ್ಟ್ ಆಗಿ ಇರಲು ಬೆಂಗಳೂರು ಕಮಿಷನರ್ ದಯಾನಂದ್ ಸೂಚನೆ ನೀಡಿದ್ದಾರೆ. ನಗರದ ಹೋಟೆಲ್ ಹಾಗೂ ಲಾಡ್ಜ್ಗಳ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ದೆಹಲಿ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಮಹಿಳಾ ಆರ್ಸಿಬಿ ತಂಡ ಕಪ್ ಗೆದ್ದಿದೆ.
ಹೀಗಾಗಿ ಐಪಿಎಲ್ ಪದ್ಯಗಳ ಮೇಲಿನ ಗಮನ ಹೆಚ್ಚಾಗಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಿಂಗ್ ನಡೆಯೋ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಮಾಹಿತಿ ಬೆನ್ನಲ್ಲೇ ಎಲ್ಲಾ ಡಿಸಿಪಿಗಳಿಗೆ ಅಲರ್ಟ್ ಆಗಿ ಇರಲು ಕಮಿಷನರ್ ಸೂಚನೆ ನೀಡಿದ್ದಾರೆ. ನಗರದಾದ್ಯಂತ ಬುಕ್ಕಿಗಳ ಮೇಲೆ ತೀವ್ರ ನಿಗಾ ವಹಿಸಬೇಕು.
ಆಯಾ ಠಾಣಾ ವ್ಯಾಪ್ತಿಯಲ್ಲಿನ ಬುಕ್ಕಿಗಳ ಮೇಲೆ ನಿಗಾ ಇಡಿ. ಈ ಹಿಂದೆ ಬೆಟ್ಟಿಂಗ್ ಕೇಸ್ ಅಲ್ಲಿ ಅರೆಸ್ಟ್ ಆಗಿ ಜಾಮೀನಿನ ಮೇಲೆ ಬಂದಿರುವವರ ಮೇಲೂ ತೀವ್ರ ನಿಗಾ ಇಡಿ. ಬೆಟ್ಟಿಂಗ್ ಆಡೋಕೆ ಅಂತಾನೆ ಹೋಟೆಲ್, ಲಾಡ್ಜ್ ಗಳಲ್ಲಿ ರೂಂ ಪಡೀತಾರೆ. ಹೀಗಾಗಿ ಹೋಟೆಲ್, ಲಾಡ್ಜ್ ಗಳ ಪರಿಶೀಲನೆ ಮಾಡಬೇಕು. ಎಲ್ಲಾ ಆಯಾಮದಲ್ಲೂ ಮಾಹಿತಿ ಪಡೆಯೋದ್ರ ಜೊತೆಗೆ ಅಲರ್ಟ್ ಆಗಿ ಇರಲು ಸೂಚನೆ ನೀಡಲಾಗಿದೆ.