ಬೆಂಗಳೂರು: ರಾಜ ರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಸಂದರ್ಭದಲ್ಲಿ ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜಿಸಬೇಕು. ಇಲ್ಲಾಂದ್ರೆ ಕೆಜೆ ಹಳ್ಳಿ ಡಿಜಿ ಹಳ್ಳಿ ರೀತಿ ಆರ್ ಆರ್ ನಗರ ಆಗಲಿದೆ ಎಂದು ಮಾಜಿ ಸಚಿವ ಮುನಿರತ್ನ ಆತಂಕ ವ್ಯಕ್ತಪಡಿಸಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿದ ಅವರು, ಪ್ಯಾರಾ ಮಿಲಿಟರಿ ಫೋರ್ಸ್ ಬರಲಿಲ್ಲ ಅಂದ್ರೆ ಎಷ್ಟು ಹೆಣಗಳು ಬಿಳುತ್ತೋ ಗೊತ್ತಿಲ್ಲ. ಕ್ಷೇತ್ರದಲ್ಲಿ ಏನಾದರೂ ಆದ್ರೆ ಅದಕ್ಕೆ ಚುನಾವಣಾ ಆಯೋಗವೇ ಕಾರಣವಾಗುತ್ತೆ ಎಂದು ಎಚ್ಚರಿಸಿದರು.
ಬಿಜೆಪಿ ಜೆಡಿಎಸ್ ಕಾರ್ಯಕರ್ತರನ್ನು ಖರೀದಿ ಮಾಡಲು ಕಾಂಗ್ರೆಸ್ ಹೊರಟಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಒಬ್ಬೊಬ್ಬ ಕಾರ್ಯಕರ್ತರಿಗೆ 20 ರಿಂದ 25 ಲಕ್ಷ ಕೊಟ್ಟು ಖರೀದಿ ಮಾಡ್ತಿದ್ದಾರೆ. ದುಡ್ಡು ಶಲ್ಯಾ ಹಾಕಿ ಮನೆ ಕೊಟ್ಟಿಕೊಡ್ತೀವಿ, ಮಗನಿಗೆ ಕೆಲಸ ಕೊಡ್ತೀವಿ ನಮ್ಮ ಜೊತೆ ಬಾ ಎಂದು ಆಮಿಷ ಒಡಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ, ಸೀರೆ ಕುಕ್ಕರ್ ಗಳನ್ನು ನಮ್ಮ ಕ್ಷೇತ್ರದಲ್ಲಿ ತಂದಿಟ್ಟಿದ್ದಾರೆ. ಕಾಂಗ್ರೆಸ್ ನವರು ಹೇಳಿದಂತೆ ಚುನಾವಣಾ ಆಯೋಗ ನಡೆದುಕೊಳ್ಳುತ್ತಿದೆ. ಪೊಲೀಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಎಂದು ಪತ್ರ ಬರೆದು ಇನ್ನೂ ಆಗಿಲ್ಲ. ಈ ಬಗ್ಗೆ ಚುನಾವಣಾ ಆಯೋಗಕ್ಕೂ ಪತ್ರ ಬರೆದಿದ್ದೇನೆ.ಆದ್ರೂ ಯಾವುದೇ ವರ್ಗಾವಣೆ ಮಾಡುತ್ತಿಲ್ಲ. ಕಾಂಗ್ರೆಸ್ನವರು ಗಿಫ್ಟ್ಗಳನ್ನು ಸಂಗ್ರಹಿಸಿ ಇಟ್ಟ ಕಡೆ ದಾಳಿ ಕೂಡಾ ನಡೆಯುತ್ತಿಲ್ಲ ಎಂದು ಆರೋಪಿಸಿದರು.