ಬೆಂಗಳೂರು:- ಹಂದಿಯ ಕಿಡ್ನಿಯನ್ನು ಮನುಷ್ಯನಿಗೆ ವೈದ್ಯರು ಕಸಿ ಮಾಡಿದ್ದಾರೆ. ಅಂದ ಹಾಗೆ ವೈದ್ಯಕೀಯ ಲೋಕದಲ್ಲಿ ಇದು ಮೊಟ್ಟ ಮೊದಲ ಪ್ರಕರಣ ಹಾಗೂ ಸಾಧನೆ. ಭವಿಷ್ಯದಲ್ಲಿ ಅಂಗಾಂಗಳ ಕೊರತೆಯನ್ನು ನೀಗಿಸುವಲ್ಲಿ ದೊಡ್ಡ ಉಪಕ್ರಮ.
ಅಮೆರಿಕದ ಬೋಸ್ಟನ್ನಲ್ಲಿ ಇಂಥದ್ದೊಂದು ವೈದ್ಯಕೀಯ ಸಾಧನೆ ನಡೆದಿದೆ. ಅಂತಿಮ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ 62 ವರ್ಷದ ರಿಚರ್ಡ್ ಸ್ಲೇಮನ್ ಎಂಬುವವರಿಗೆ ನಾಲ್ಕು ಗಂಟೆಗಳ ಶಸ್ತ್ರ ಚಿಕಿತ್ಸೆಯ ಬಳಿಕ ಹಂದಿಯ ಕಿಡ್ನಿ ಜೋಡಿಸಲಾಗಿದೆ ಎಂದು ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆ ಪ್ರಕಟಿಸಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ.
ನಾನು ಇದನ್ನು ಬದುಕುವ ಮಾರ್ಗವಾಗಿ ಮಾತ್ರವಲ್ಲದೆ, ಅಂಗಾಂಗ ಕಸಿ ಅಗತ್ಯವಿರುವ ಸಾವಿರಾರು ಜನರಿಗೆ ಭರವಸೆ ನೀಡುವ ಮಾರ್ಗವಾಗಿ ಅನುಭವಿಸಿದೆ ” ಎಂದು ಸ್ಲೇಮನ್ ಆಸ್ಪತ್ರೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಸಿ ಅಗತ್ಯವಿರುವ ಜನರಿಗೆ ಅಂಗಗಳ ಕೊರತೆಯನ್ನು ನಿವಾರಿಸಲು ಮೂತ್ರಪಿಂಡಗಳು, ಯಕೃತ್ತು, ಹೃದಯಗಳು ಮತ್ತು ಇತರ ಅಂಗಗಳನ್ನು ಒದಗಿಸಲು ಅನುವಂಶಿಕವಾಗಿ ಮಾರ್ಪಡಿಸಿದ ಹಂದಿಗಳನ್ನು ಬೆಳೆಸುತ್ತಿರುವ ನಡುವೆ ಈ ಕಾರ್ಯವಿಧಾನವು ಆಶಾದಾಯಕ ಬೆಳವಣಿಗೆಯಾಗಿದೆ.