ಬೆಂಗಳೂರು: ಬಿಸಿಲಿನ ಝಳ ಹೆಚ್ಚಳ, ನೀರಿನ ಅಭಾವದ ಹಿನ್ನೆಲೆಯಲ್ಲಿ ಬೀನ್ಸ್, ಕ್ಯಾರೆಟ್ ತುಟ್ಟಿಯಾಗಿದೆ. ಬೇಗ ಬಾಡುವ ಸೊಪ್ಪುಗಳು, ಬಾಳೆಹಣ್ಣು ಅಗ್ಗವಾಗಿವೆ.
ಬಿಸಿಲು ಹೆಚ್ಚಾಗಿರುವುದರಿಂದ ಬಾಳೆಹಣ್ಣು ಬೇಗ ಹಣ್ಣಾಗುತ್ತದೆ. ಜತೆಗೆ ಎರಡು ದಿನ ಇಟ್ಟರೆ ಹಣ್ಣಿನ ಸಿಪ್ಪೆ ಕಪ್ಪಾಗುತ್ತದೆ. ಹೀಗಾಗಿ, ಮಾರಾಟಗಾರರು ಹಣ್ಣು ತಾಜಾ ಆಗಿದ್ದಾಗ 50-60 ರೂ.ಗೆ ಏಲಕ್ಕಿ ಬಾಳೆ ಮಾರಾಟ ಮಾಡಿದರೆ, ನಂತರ 40-50 ರೂ.ಗೆ ಕೆಜಿ. ಮಾರಾಟ ಮಾಡುತ್ತಿದ್ದಾರೆ. ಹಾಪ್ಕಾಮ್ಸ್ನಲ್ಲಿ ಏಲಕ್ಕಿ ಬಾಳೆ 52 ರೂ., ಪಚ್ಚಬಾಳೆ 32 ರೂ., ಚಂದ್ರಬಾಳೆ ದರ 68 ರೂ. ದರವಿದೆ.
ಎಷ್ಟಿದೆ ಗೊತ್ತಾ ತರಕಾರಿ, ಹಣ್ಣಿನ ಬೆಲೆ
ಕೆ.ಜಿಗೆ. ಸೇಬು ಹಣ್ಣು 120ರಿಂದ 180ರೂ
ಕಲ್ಲಂಗಡಿ ಕೆ.ಜಿಗೆ 30 ರಿಂದ 40:-50 ರೂ
ದಾಳಿಂಬೆ ಹಣ್ಣು ಕೆ.ಜಿಗೆ 100 ರಿಂದ 120ರೂ
ಕಿತ್ತಳೆ ಕೆ.ಜಿಗೆ 60 ರಿಂದ 120ರೂ
ದ್ರಾಕ್ಷಿ ಕೆ.ಜಿಗೆ 80 ರಿಂದ 120ರೂ
ಸಪೋಟ ಕೆ.ಜಿಗೆ 70 ರಿಂದ 100ರೂ
ಕಿತ್ತಳೆ ಕೆ.ಜಿಗೆ 80 ರಿಂದ 120ರೂ
ಯಾಲಕ್ಕಿ ಬಾಳೆ ಕೆ.ಜಿಗೆ 50 ರಿಂದ 70ರೂ_100
ಬಾಳೆಹಣ್ಣು ಹಣ್ಣು ಬಾಳೆ 30 ರಿಂದ 40 ರೂ_50
ಗಾತ್ರಕ್ಕೆ ಅನುಗುಣವಾಗಿ ನಿಂಬೆಹಣ್ಣಿಗೆ 8ರಿಂದ 15ರೂ
ಚಿಕ್ಕ ಗಾತ್ರದ ನಿಂಬೆಗಳ ಬೆಲೆ 5 ರಿಂದ 6 ರೂ