ಜ್ಞಾನ, ಹಾಗೂ ಅದಕ್ಕೆ ಬೇಕಾದ ಶ್ರಮ ಒಂದಿದ್ದರೆ ಯಾರು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದನ್ನು ನಿವೃತ್ತ ಬ್ಯಾಂಕ್ ಮ್ಯಾನೇಜರ್ ತಾಜಾ ಉದಾಹರಣೆ ಆಗಿದ್ದಾರೆ.
NEET ಅತ್ಯಂತ ಸವಾಲಿನ ಹಾಗೂ ಕ್ಲಿಷ್ಟಕರ ಪರೀಕ್ಷೆ ಎಂದೆನಿಸಿದೆ. ಸಾವಿರದಲ್ಲಿ ಒಬ್ಬರೋ ಇಬ್ಬರು ಎಂಬಂತೆ ಈ ಪರೀಕ್ಷೆಯಲ್ಲಿ ಜಯಶಾಲಿಯಾಗುವವರು ತಮ್ಮ ಸಿದ್ಧತೆ, ತಾವು ಹಾಕಿಕೊಂಡ ಯೋಜನೆ, ಪರಿಶ್ರಮಗಳಿಂದ ಇತರರಿಗೆ ದಾರಿದೀಪವಾಗುತ್ತಾರೆ.
ಸಾಧನೆ ಹಾಗೂ ಪರಿಶ್ರಮ ಇವೆರಡೂ ಇದ್ದರೆ ಯಾವುದೇ ರೀತಿಯ ಕಠಿಣ ಪರೀಕ್ಷೆಗಳನ್ನು ಸುಲಭವಾಗಿ ಗೆಲ್ಲಬಹುದೆಂಬುದಕ್ಕೆ ಜಯ ಕಿಶೋರ್ ಪ್ರಧಾನ್ ಸ್ಫೂರ್ತಿಯಾಗಿದ್ದಾರೆ
ನೀಟ್ನಲ್ಲಿ ವಿಜಯಿಶಾಲಿಯಾಗಿ ಇತರರಿಗೆ ಸ್ಫೂರ್ತಿದಾಯಕರಾಗಿರುವ ಜಯ ಕಿಶೋರ್ ಪ್ರಧಾನ್ ತಮ್ಮ 64 ನೇ ವಯಸ್ಸಿನಲ್ಲಿ ನೀಟ್ ಕ್ಲಿಯರ್ ಮಾಡಿ ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ಕನಸು ಕಂಡರೂ ಅದನ್ನು ಯಾವಾಗ ಬೇಕಾದರೂ ನನಸು ಮಾಡಬಹುದೆಂದು ತೋರಿಸಿಕೊಟ್ಟಿದ್ದಾರೆ. ತಮ್ಮ ರಾಜ್ಯದ ಉನ್ನತ ಸಂಸ್ಥೆಯಲ್ಲಿಯೇ ಎಮ್ಬಿಬಿಎಸ್ ಸೀಟ್ ಅನ್ನು ಕೂಡ ಗಿಟ್ಟಿಸಿಕೊಂಡರು. ಒಡಿಸ್ಸಾದವರಾದ ಜಯ್ ಕಿಶೋರ್ ಪ್ರಧಾನ್ ಅವರ ಯಶಸ್ಸಿನ ಪ್ರಯಾಣ ಸ್ಥಿತಿಸ್ಥಾಪಕತ್ವ ಮತ್ತು ಸಮರ್ಪಣೆಯ ಶಕ್ತಿಯನ್ನು ಬಿಂಬಿಸುತ್ತದೆ. ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನಿವೃತ್ತ ಡೆಪ್ಯುಟಿ ಮ್ಯಾನೇಜರ್ ಆಗಿ ಕಾರ್ಯಾಭಾರ ನಿರ್ವಹಿಸಿದ್ದ ಪ್ರಧಾನ್, ತಮ್ಮ ವೈದ್ಯಕೀಯ ವೃತ್ತಿಜೀವನದ ಆಕಾಂಕ್ಷೆಗಳನ್ನು ಸ್ಥಿರವಾಗಿ ಉಳಿಸಿಕೊಂಡಿದ್ದರು.
2016 ರಲ್ಲಿ ನಿವೃತ್ತರಾದ ಪ್ರಧಾನ್, ತಮ್ಮ ನಿವೃತ್ತ ಜೀವನದಲ್ಲಿ ಬದಿಗೊತ್ತಿದ್ದ ಕನಸನ್ನು ಈಡೇರಿಸಿಕೊಳ್ಳಬೇಕೆಂದು ಬಯಸಿದರು.
ಆನ್ಲೈನ್ ಕೋಚಿಂಗ್ನಲ್ಲಿ ತಮ್ಮ ತರಬೇತಿಯನ್ನು ಪಡೆಯಲು ಮುಂದಾದರು. ಸಾಧಿಸಬೇಕು ಹಾಗೂ ಗುರಿ ತಲುಪಬೇಕೆಂದು ಬಯಸುವವರು ಯಾವುದೇ ಕಠಿಣತೆಗಳನ್ನು ಮೆಟ್ಟಿನಿಂತು ಮುಂದುವರಿಯುತ್ತಾರೆ ಎಂಬುದಕ್ಕೆ ಪ್ರಧಾನ್ ಸಾಕ್ಷಿಯಾಗಿದ್ದಾರೆ.
ಆನ್ಲೈನ್ ಕೋಚಿಂಗ್ ಪಡೆಯುತ್ತಿದ್ದರೂ ಪ್ರಧಾನ್ ಅನೇಕ ಅಡೆತಡೆಗಳನ್ನು ನಿರ್ವಹಿಸಬೇಕಿತ್ತು. ಅಚಲ ನಿರ್ಣಯ ಮತ್ತು ಅಚಲ ಪರಿಶ್ರಮದ ಮೂಲಕ ಅವರು 2020 ರ NEET ಪರೀಕ್ಷೆಯಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದರು.
ಗೌರವಾನ್ವಿತ ವೀರ್ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (VIMSAR) ನಲ್ಲಿ ಅವರ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಸೀಟು ಗಿಟ್ಟಿಸಿಕೊಂಡರು.
ಅವರು ಅನುಸರಿಸಿದ ಸಂಕಷ್ಟಗಳು, ಸವಾಲುಗಳು ಸಮರ್ಪಣೆ ಮತ್ತು ಸ್ಥಿತಿಸ್ಥಾಪಕತ್ವದೊಂದಿಗೆ ಮುಂದುವರಿದಿದ್ದೂ ಸಾಧಿಸಬೇಕೆಂಬ ಬಯಕೆ ಇರುವವರಿಗೆ ದಾರಿದೀಪವಾಗಿದೆ.