ಬೆಂಗಳೂರು: ಇದು ನನ್ನ ಕೊನೆಯ ಅಧಿವೇಶನ ಎಂದು ಹೇಳುವ ಮೂಲಕ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಭಾವುಕರಾದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು. ಇದು ನನ್ನ ಕೊನೆಯ ಅಧಿವೇಶನ. ಕಾಂಗ್ರೆಸ್ ನಾಯಕರು ಪದೇ ಪದೇ ಪಕ್ಷ ನನ್ನನ್ನ ಕಡೆಗಣಿಸಿದೆ ಎನ್ನುತ್ತಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಎಂದು ನನ್ನ ಕಡೆಗಣಿಸಿಲ್ಲ. ಯಡಿಯೂರಪ್ಪನವರಿಗೆ ಮೋದಿ ಗೌರವ ಕೊಟ್ಟಿದ್ದಾರೆ,
ಒಳ್ಳೆಯ ಅವಕಾಶ, ಸ್ಥಾನಮಾನ ಕೊಟ್ಟಿದ್ದಾರೆ. ಅವರನ್ನ ನಾನು ಮರೆಯಲು ಸಾಧ್ಯವಿಲ್ಲ. ಪಕ್ಷದ ಅವಕಾಶದಿಂದ 4 ಬಾರಿ ಮುಖ್ಯಮಂತ್ರು ಆಗಿದ್ದೇನೆ. ಸೂರ್ಯ,ಚಂದ್ರ ಇರುವುದು ಎಷ್ಟು ಸತ್ಯವೋ, ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಇದು ನಾನು ಭವಿಷ್ಯ ಹೇಳ್ತೇನೆ ಅಂದು ಕೊಳ್ಳಬೇಡಿ, ನಾಳೆಯಿಂದ ನಾನು ರಾಜ್ಯ ಪ್ರವಾಸ ಮಾಡ್ತೇನೆ. ಇನ್ನೆರಡು ತಿಂಗಳಲ್ಲಿ ನೀವೇ ನೋಡಿ, ಯಾವ ರೀತಿ ಗಾಳಿ ಬೀಸುತ್ತೆ ಅಂತ ನಾವು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.