ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಆಗಿದೆ.
ತಮಿಳುನಾಡಿಗೆ ಬಿಜೆಪಿ ಅಭ್ಯರ್ಥಿಗಳ 4ನೇ ಪಟ್ಟಿ ಇಲ್ಲಿದೆ:-
1.ತಿರುವಳ್ಳೂರ್ (SC)- ಪೊನ್. ವಿ.ಬಾಲಗಣಪತಿ
2. ಚೆನ್ನೈ ಉತ್ತರ- ಆರ್ ಸಿ ಪಾಲ್ ಕನಕರಾಜ್
3.ಪದುಚೆರಿ- ಎ ನಮಶಿವಾಯಂ
4. ತಿರುವಣ್ಣಾಮಲೈ-ಎ. ಅಶ್ವಥಾಮನ್
5. ನಾಮಕ್ಕಲ್-ಕೆ.ಪಿ. ರಾಮಲಿಂಗಂ
6. ತಿರುಪ್ಪೂರ್- ಎ.ಪಿ. ಮುರುಗಾನಂದಂ
7.ಪೊಲ್ಲಾಚಿ- ಕೆ ವಸಂತರಾಜನ್
8.ಕರೂರ್- ವಿ.ವಿ. ಸೆಂಥಿಲನಾಥನ್
9.ನಾಗಪಟ್ಟಿನಂ (SC) ಪಿ. ಕಾರ್ತಿಯಾನಿ
10.ನಾಗಪಟ್ಟಣಂ (SC)-ಎಸ್ಜಿಎಂ ರಮೇಶ್
11.ತಂಜಾವೂರು-ಎಂ. ಮುರುಗಾನಂದಂ
12.ಶಿವಗಂಗಾ-ಡಾ. ದೇವನಾಥನ್ ಯಾದವ್
13.ಮಧುರೈ- ಫ್ರೋ. ರಾಮಾ ಶ್ರೀನಿವಾಸನ್
14.ವಿರುದುನಗರ- ಶ್ರೀಮತಿ. ರಾಧಿಕಾ ಶರತ್ಕುಮಾರ್
15. ಟಂಕಸಿ(SC) ಬಿ. ಜಾನ್ ಪಾಂಡಿಯನ್
ಪುದುಚೇರಿ ಮತ್ತು ತಮಿಳುನಾಡು ಕ್ಷೇತ್ರಗಳನ್ನು ಕೇಂದ್ರೀಕರಿಸಿ ಮುಂಬರುವ ಲೋಕಸಭೆ ಚುನಾವಣೆಗೆ (Lok sabha Election) ಬಿಜೆಪಿ (BJP) ತನ್ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. 15 ಅಭ್ಯರ್ಥಿಗಳ ಪಟ್ಟಿಯಲ್ಲಿ 2017 ರಲ್ಲಿ ಬಿಜೆಪಿಗೆ ಸೇರಿದ್ದ ಎಐಎಡಿಎಂಕೆಯ ಮಾಜಿ ಪ್ರಮುಖ ಸದಸ್ಯೆ ಪಿ. ಕಾರ್ತ್ಯಾಯಿನಿ ಕಾಣಿಸಿಕೊಂಡಿದ್ದಾರೆ
ಕಾರ್ತ್ಯಾಯಿನಿ ತಮಿಳುನಾಡಿನ ಚಿದಂಬರಂ (SC) ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ನಟಿ ಹಾಗೂ ರಾಜಕಾರಣಿ ರಾಧಿಕಾ ಶರತ್ಕುಮಾರ್ ತಮಿಳುನಾಡಿನ ವಿರುಧನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ರಾಧಿಕಾ ಶರತ್ಕುಮಾರ್ (Raadhika Sarathkumar) ನಟ ಆರ್ ಶರತ್ ಕುಮಾರ್ ಅವರ ಪತ್ನಿ. ರಾಧಿಕಾ ಅವರು ಮಾರ್ಚ್ 12 ರಂದು ತಮ್ಮ ಅಖಿಲ ಭಾರತೀಯ ಸಮತುವ ಮಕ್ಕಳ ಕಚ್ಚಿ (ಎಐಎಸ್ಎಂಕೆ) ಅನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು.
ಬಿಜೆಪಿ ಪುದುಚೇರಿಯಿಂದ ಎ.ನಮಸ್ಶಿವಾಯಂ ಅವರನ್ನು ಕಣಕ್ಕಿಳಿಸಿದೆ. ವಿ.ಬಾಲಗಣಪತಿ ತಮಿಳುನಾಡಿನ ತಿರುವಳ್ಳೂರಿನಿಂದ (ಎಸ್ಸಿ), ಆರ್.ಸಿ.ಪಾಲ್ ಕಂಗರಾಜ್ ಚೆನ್ನೈ ಉತ್ತರದಿಂದ, ರಾಮ ಶ್ರೀನಿವಾಸನ್ ಮಧುರೈ ಮತ್ತು ಎಂ.ಮುರುಗನಾದಂ ತಂಜಾವೂರಿನಿಂದ ಸ್ಪರ್ಧಿಸಲಿದ್ದಾರೆ.
ತೆಲಂಗಾಣ ಮಾಜಿ ರಾಜ್ಯಪಾಲರು ಮತ್ತು ಪಕ್ಷದ ನಾಯಕಿ ತಮಿಳುಸಾಯಿ ಸೌಂದರಾಜನ್ ಚೆನ್ನೈ ದಕ್ಷಿಣದಿಂದ ಮತ್ತು ಕೊಯಮತ್ತೂರಿನ ಅಣ್ಣಾಮಲೈ ಸೇರಿದಂತೆ ತಮಿಳುನಾಡಿಗೆ ಒಂಬತ್ತು ಹೆಸರುಗಳನ್ನು ಹೊಂದಿರುವ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ ಒಂದು ದಿನದ ನಂತರ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಂದಿದೆ.