ಮಹಿಳೆಯರ ಸ್ವಾವಲಂಬನೆ ಹಾಗೂ ಅವರ ಸಾಮರ್ಥ್ಯವನ್ನು ನಿರೂಪಿಸಲು ಒತ್ತು ನೀಡುವ ಸಲುವಾಗಿ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ರೂಪಿಸುತ್ತವೆ. ಹೆಣ್ಣುಮಕ್ಕಳ ಸ್ವಾವಲಂಬನೆಗೆ ಒತ್ತು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಉದ್ಯೋಗಿನಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆ ಉದ್ದೇಶವು ಮಹಿಳೆಯರಿಗೆ ಸ್ವಂತ ಉದ್ಯಮಕ್ಕೆ ಬೆಂಬಲ ನೀಡುವುದು. ಸರ್ಕಾರ ರೂಪಿಸುವ ಇಂತಹ ಹಲವು ಯೋಜನೆಗಳು ಹೆಣ್ಣುಮಕ್ಕಳನ್ನು ಬಡತನದಿಂದ ನಿರ್ಮೂಲನೆ ಮಾಡಿ, ಗಳಿಕೆಗೆ ನೆರವಾಗುವುದಾಗಿದೆ.
ಉದ್ಯೋಗಿನಿ ಯೋಜನೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಕಾರ್ಯನಿರ್ವಹಿಸುವ ರಾಜ್ಯದ ಮಹಿಳಾ ಅಭಿವೃದ್ಧಿ ನಿಗಮ 2023-24ನೇ ಸಾಲಿನ ನಿಗಮದ ವಿವಿಧ ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮಹಿಳೆಯರಿಗೆ ತಮ್ಮ ವ್ಯವಹಾರಗಳಲ್ಲಿ ಸಹಾಯ ಮಾಡುವ ಯೋಜನೆಯನ್ನು ಪ್ರಾರಂಭಿಸಿದೆ.
ಇದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಗಳಿಂದ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳ ಮೂಲಕ ವ್ಯಾಪಾರ ಚಟುವಟಿಕೆಗಳ/ ಸಣ್ಣ ಉದ್ದಿಮೆಗಳನ್ನ ಕೈಗೊಳ್ಳಲು ಸಾಲದ ಮೇಲೆ ಸಹಾಯಧನವನ್ನು ಒದಗಿಸುತ್ತದೆ. ಬ್ಯಾಂಕ್ ಗಳು, ಜಿಲ್ಲಾ ಸಹಕಾರಿ ಬ್ಯಾಂಕ್ ಗಳು ಮತ್ತು ಪ್ರದೇಶಿಕ ಗ್ರಾಮೀಣ ಬ್ಯಾಂಕ್ ಗಳು ನಂತಹ ಹಣಕಾಸು ಸಂಸ್ಥೆಯ ಮೂಲಕ ಸಾಲವನ್ನು ತೆಗೆದುಕೊಳ್ಳಬಹುದು.
ಉದ್ಯೋಗಿನಿ ಯೋಜನೆ ವೈಶಿಷ್ಟತೆಗಳು :
ಈ ಯೋಜನೆಯಲ್ಲಿ ಪರಿಶಿಷ್ಟ ಜಾತಿ ( SC ) ಮತ್ತು ಪರಿಶಿಷ್ಟ ಪಂಗಡದ ( ST ) ಫಲಾನುಭವಿಗಳಿಗೆ ಮತ್ತು ಸಾಮಾನ್ಯ ವರ್ಗದವರಿಗೆ ಬೇರೆ ಬೇರೆ ರೀತಿಯ ಸಹಾಯಧನ ಇದೆ. ಅವುಗಳೆಂದರೆ :
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ:
ಆದಾಯ ಮಿತಿ : 2.00 ಲಕ್ಷ ರೂಪಾಯಿಗಳು
ಘಟಕ ವೆಚ್ಚ : ಕನಿಷ್ಟ ರೂ 1.00 ಲಕ್ಷದಿಂದ ಗರಿಷ್ಟ ರೂ. 3.00 ರೂಪಾಯಿಗಳು
ಸಹಾಯಧನ ಶೇ. 50 ರಷ್ಟು
ಸಾಮಾನ್ಯ ವರ್ಗದ ( OBC ) ಫಲಾನುಭವಿಗಳಿಗೆ :
ಆದಾಯ ಮಿತಿ : 1.50 ಲಕ್ಷ ರೂಪಾಯಿಗಳು
ಘಟಕ ವೆಚ್ಚ : ಗರಿಷ್ಟ ರೂ. 3.00 ಲಕ್ಷ ರೂಪಾಯಿಗಳು
ಸಹಾಯಧನ: ಶೇ.30 ರಷ್ಟು
ಉದ್ಯೋಗಿನಿ ಯೋಜನೆಯಡಿ ಸಾಲಗಳಿಗೆ ಅರ್ಹತೆಯ ಮಾನದಂಡ:
ಸಾಮಾನ್ಯ ಮತ್ತು ವಿಶೇಷ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಕುಟುಂಬದ ಆದಾಯ ರೂ.1,50,000/- ಗಿಂತ ಕಡಿಮೆಯಿರಬೇಕು.
ವಯಸ್ಸಿನ ಮಿತಿ 18 ರಿಂದ 55 ವರ್ಷಗಳ ಮೀರಿರಬಾರದು. ಅರ್ಜಿದಾರರು ಉತ್ತಮ ಕ್ರೆಡಿಟ್ ಸ್ಕೋರ್ ಮತ್ತು ಮರುಪಾವತಿ ಸಾಮರ್ಥ್ಯವನ್ನು ಹೊಂದಿರುವರಾಗಿರ್ಬೇಕು