ಬೆಂಗಳೂರು:-ಗೃಹಜ್ಯೋತಿ ಬಳಕೆದಾರರಿಗೆ ಶಾಕ್ ಎದುರಾಗಿದ್ದು, ಕರ್ನಾಟಕದಲ್ಲಿ ಕಂಡು ಕೇಳರಿಯದಂತಹ ಬಿಸಿಲಿರುವ ಕಾರಣ ಗ್ರಾಹಕರು, 200 ಯೂನಿಟ್ಗಿಂತ ಜಾಸ್ತಿ ವಿದ್ಯುತ್ ಬಳಸಿದರೆ, ಬಳಸಿದ ಅಷ್ಟು ಯೂನಿಟ್ಗಳಿಗೆ ದುಬಾರಿ ಶುಲ್ಕವನ್ನು ಭರಿಸಬೇಕಾಗಿದೆ.
ಈ ಬಗ್ಗೆ ಮಾತಾನಾಡಿದ ಬೆಸ್ಕಾಂ ಚೀಫ್ ಇಂಜಿನಿಯರ್ ಕಳೆದ ವರ್ಷದ 12 ತಿಂಗಳಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ 37,111 ಮಿಲಿಯನ್ ಯೂನಿಟ್ ವಿದ್ಯುತ್ ಅನ್ನ ಜನರು ಬಳಕೆ ಮಾಡಿದ್ರೆ ಇನ್ನೂ ಈ ವರ್ಷ ಒಂದು ತಿಂಗಳು ಬಾಕಿ ಇರುವಾಗಲೇ 40 ಸಾವಿರ 607 ಮಿಲಿಯನ್ ಯೂನಿಟ್ ಬಳಕೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ 3496 ಮಿಲಿಯನ್ ಯೂನಿಟ್ ಹೆಚ್ಚಳವಾಗಿ ವಿದ್ಯುತ್ ಬಳಕೆ ಯಾಗಿದೆ. ಈ ವರ್ಷ ಹತ್ತು ಸಾವಿರ ಮಿಲಿಯನ್ ಯೂನಿಟ್ ಹೆಚ್ಚು ಬಳಕೆ ಆಗುವ ಸಾಧ್ಯತೆಯಿದೆ ಎಂದರು.
ಇನ್ನೂ ರಾಜ್ಯದಲ್ಲಿ ಅಂದಾಜು 1.20 ಕೋಟಿ ಮಂದಿ ಗೃಹಜ್ಯೋತಿ ಫಲಾನುಭವಿಗಳಿದ್ದಾರೆ. ಎಸಿ, ಫ್ಯಾನ್, ಕೂಲರ್ ಬಳಕೆಯಿಂದಾಗಿ ಹೆಚ್ಚಿನ ವಿದ್ಯುತ್ ಬಳಸುತ್ತಿರುವ ಪರಿಣಾಮ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆಯಾಗುತ್ತಿದೆ. ಹೀಗಾಗಿ ಹೆಚ್ಚುವರಿಯಾಗಿ ಬಳಸಿದ ವಿದ್ಯುತ್ ಗೆ ಬಿಲ್ ಪಾವತಿ ಮಾಡಬೇಕಿರುವ ಅನಿವಾರ್ಯತೆಗೆ ಜನರು ಸಿಲುಕಿದ್ದಾರೆ. ಈ ಬಗ್ಗೆ ಮಾತಾನಾಡಿದ ಮನೆ ಮಾಲೀಕ ಮೋಹನ್, ಬೆಂಗಳೂರಿನಲ್ಲಿ ವಿಪರೀತವಾಗಿ ನೀರಿನ ಸಮಸ್ಯೆ ಎದುರಾಗಿದೆ ಬೋರ್ವೆಲ್ ನಿಂದ ನೀರು ಸಪ್ಲೆ ಮಾಡಿಕೊಳ್ಳಲು ಮತ್ತು ಬೇಸಿಗೆ ಕಾರಣದಿಂದಾಗಿ ಎಸಿ,ಕೂಲರ್ ,ಫ್ಯಾನ್ ಗಾಗಿ ಅತಿ ಹೆಚ್ಚಿನ ವಿದ್ಯುತ್ ಬಳಕೆಯಾಗುತ್ತದೆ ಅದಕ್ಕೆ ನಮ್ಮ ಮನೆಗೂ ಹೆಚ್ಚಿನ ವಿದ್ಯುತ್ ಬಿಲ್ ಬರ್ತಿದೆ ಎಂದರು.
ಒಟ್ನಲ್ಲಿ ಕಾಂಗ್ರೆಸ್ ಸರ್ಕಾರ ಏನೋ ಎಲೆಕ್ಷನ್ ಟೈಮ್ ನಲ್ಲಿ ಪ್ರತಿ ಮನೆಗೆ 200 ಯೂನಿಟ್ ಉಚಿತ ಎಂದು ಪ್ರಚಾರ ಮಾಡಿತ್ತು. ನಂತರ ವರ್ಷದ ಸರಾಸರಿ ಮಾತ್ರ ಉಚಿತ ಎಂದಿದ್ದು ಇದೀಗ ಬೇಸಿಗೆ ಅನ್ನೋ ಕಾರಣಕ್ಕೆ ಜನರು ಅತಿಹೆಚ್ಚಾಗಿ ವಿದ್ಯುತ್ ಬಳಕೆ ಮಾಡಲು ಮುಂದಾಗಿದೆ.