ಬೆಂಗಳೂರು’g ಬಿಜೆಪಿಯವರು ಭ್ರಷ್ಟಾಚಾರದ ಪಿತಾಮಹರು, ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಬಿಜೆಪಿಯವರು ಭ್ರಷ್ಟಾಚಾರದ ಪಿತಾಮಹರು. ಆಪರೇಷನ್ ಕಮಲ ಶುರುಮಾಡಿದವರು. ಒಬ್ಬೊಬ್ಬ ಎಂಎಲ್ಎಗೆ 50 ಕೋಟಿ ಆಫರ್ ಮಾಡ್ತಾರೆ. ನಾವೇ ಎಲೆಕ್ಷನ್ ಮಾಡಿಕೊಳ್ಳುತ್ತೇವೆ ಬನ್ನಿ ಅಂತಾರೆ. ಯಾವ ಹಣ ಇದು, ಬ್ಲಾಕ್ ಮನಿ ಅಲ್ವ ಇದು ಎಂದು ಸಿಎಂ ಪ್ರಶ್ನಿಸಿದರು.
ರಾಜಕೀಯ ಪಕ್ಷಗಳ ಕತ್ತು ಹಿಸುಕುವ ಕೆಲಸ ಮಾಡುತ್ತಿದ್ದಾರೆ. ಇದು ಅತ್ಯಂತ ಖಂಡನೀಯ, ಜನಾಭಿಪ್ರಾಯ, ಸಂವಿಧಾನಕ್ಕೆ ವಿರುದ್ಧವಾದ ನಡೆ. ಚುನಾವಣಾ ಸಂದರ್ಭದಲ್ಲಿ ಈ ರೀತಿ ಮಾಡಿದರೆ ಹೇಗೆ…?, ಬಿಜೆಪಿಯವ್ರಿಗೆ ಸೋಲಿನ ಭೀತಿ ಶುರುವಾಗಿದೆ, ಭೀತಿಯಿಂದ ರಾಜಕೀಯ ಪಕ್ಷಗಳ ನಿಷ್ಕ್ರೀಯಗೊಳಿಸುವ ಕೆಲಸ. ಬಿಜೆಪಿ ಖಾತೆಗೆ ಎಷ್ಟು ಹಣ ಬಂದಿದೆ, ಅವರ ಖಾತೆಯನ್ನೂ ಸೀಜ್ ಮಾಡಬೇಕಲ್ವ. ಶ್ರೀಮಂತರೆಲ್ಲಾ ವಿಪಕ್ಷಗಳಲ್ಲೇ ಇದ್ದಾರಾ, ಬಿಜೆಪಿಯಲ್ಲಿ ಯಾರೂ ಇಲ್ವ ಎಂದು ಮರುಪ್ರಶ್ನೆ ಹಾಕಿದರು.
ಜನತೆಯ ಅಭಿಪ್ರಾಯಕ್ಕೆ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಈ ರೀತಿ ಮಾಡಿದ್ರೆ ಒಪ್ಪಲು ಸಾಧ್ಯವಿಲ್ಲ. ಅವರಿಗೆ ಸೋಲುವ ಭೀತಿ ಶುರುವಾಗಿದೆ. ಸೋಲಿನ ಭೀತಿಯಿಂದ ಪಕ್ಷದ ಖಾತೆಗಳನ್ನ ಸ್ಥಗಿತಮಾಡಿದ್ದಾರೆ. ಬಿಜೆಪಿಯವರಿಗೂ ಫಂಡ್ ಬಂದಿದೆ, ಅವರ ಖಾತೆಗೆಳನ್ನ ಯಾಕೆ ಸ್ಥಗಿತ ಮಾಡಿಲ್ಲ. ಇಡಿ, ಐಟಿ ವಿರೋಧ ಪಕ್ಷಗಳ ನಾಯಕರ ಮೇಲೆ ದಾಳಿ ಮಾಡುತ್ತವೆ. ಸಂಸದೀಯ ವ್ಯವಸ್ಥೆಯನ್ನು ಬಿಜೆಪಿ ನಾಶ ಮಾಡುತ್ತಿದೆ. ಭಾವನಾತ್ಮಕ ವಿಚಾರಗಳನ್ನು ಎಷ್ಟು ದಿನ ಹೇಳಲು ಸಾಧ್ಯ? ಎಂದರು.