ನವದೆಹಲಿ: ಒಂದೇ ದಿನ ತಜಕಿಸ್ತಾನ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಭಾರತದ ಮಣಿಪುರದಲ್ಲೂ ಭೂಮಿ ಕಂಪಿಸಿರುವ ಕುರಿತು ವರದಿಯಾಗಿದೆ.
ಇಂದು(ಮಂಗಳವಾರ ಮುಂಜಾನೆ ತಜಕಿಸ್ತಾನದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದರೆ, ಅಫ್ಘಾನಿಸ್ತಾನದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ.
ಈ ನಡುವೆ ಭಾರತದ ಮಣಿಪುರದ ನೋನಿಯಲ್ಲಿ ನಸುಕಿನ ಜಾವ 2.46ರ ಸುಮಾರಿಗೆ 3.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎನ್ಸಿಎಸ್ ತಿಳಿಸಿದೆ. ಭೂಕಂಪದಿಂದಾದ ಹಾನಿಯ ಬಗ್ಗೆ ಯಾವುದೇ ವರದಿಯಾಗಿಲ್ಲ.