ವಿಶ್ವದ ಶ್ರೀಮಂತ ಟೂರ್ನಿ ಎಂದೇ ಗುರುತಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿಗೆ ನಡೆದ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಮಿಚೆಲ್ ಸ್ಟಾರ್ಕ್ ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಡ್ ಆದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ದುಬಾರಿ ಬೆಲೆಗೆ ಹರಾಜಾದ ಟಾಪ್-5 ಆಟಗಾರರು ಯಾರು?
* ಮಿಚೆಲ್ ಸ್ಟಾರ್ಕ್ – 24.75 ಕೋಟಿ ರೂ. (ಕೋಲ್ಕತ್ತಾ ನೈಟ್ರೈಡರ್ಸ್)
* ಪ್ಯಾಟ್ ಕಮ್ಮಿನ್ಸ್ – 20.50 ಕೋಟಿ ರೂ. (ಸನ್ ರೈಸರ್ಸ್ ಹೈದರಾಬಾದ್)
* ಡೇರಿಲ್ ಮಿಚೆಲ್ – 14 ಕೋಟಿ ರೂ. (ಚೆನ್ನೈ ಸೂಪರ್ ಕಿಂಗ್ಸ್)
* ಅಕ್ಷರ್ ಪಟೇಲ್ – 11.75 ಕೋಟಿ ರೂ. (ಪಂಜಾಬ್ ಕಿಂಗ್ಸ್)
* ಅಲ್ಝಾರಿ ಜೋಸೆಫ್ – 11.50 ಕೋಟಿ ರೂ. (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಟ್ರೇಂಡ್ ವಿಂಡೋ ನಿಯಮದ ಮೂಲಕ ಖರೀದಿಸಿದ ದುಬಾರಿ ಆಟಗಾರರು:
* ಕ್ಯಾಮರೂನ್ ಗ್ರೀನ್ – 17.5 ಕೋಟಿ ರೂ. (ಮುಂಬೈ ಇಂಡಿಯನ್ಸ್ನಿಂದ ಆರ್ಸಿಬಿಗೆ)
* ಹಾರ್ದಿಕ್ ಪಾಂಡ್ಯ – 15 ಕೋಟಿ ರೂ. (ಗುಜರಾತ್ ಟೈಟಾನ್ಸ್ನಿಂದ ಮುಂಬೈ ಇಂಡಿಯನ್ಸ್ಗೆ);
ಸ್ಟಾರ್ಕ್ ದುಬಾರಿಯಾಗಿದ್ದು ಏಕೆ?
ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಲ್ರೌಂಡರ್ ಪ್ರದರ್ಶನ ತೋರಿದ್ದ ಮಿಚೆಲ್ ಸ್ಟಾರ್ಕ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.