ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿಬಾಂಬ್ ಬ್ಲಾಸ್ಟ್ ಮಾಡಿ ಹತ್ತಿರ ಒಂದು ತಿಂಗಳಾಗುತ್ತಾ ಇದೆ. ಆದರೆ ಬಾಂಬರ್ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಬಾಂಬ್ ಇಟ್ಟವನು ಯಾರು ಅನ್ನೋದನ್ನ ಇದೀಗ ಎನ್ಐಎ ಪತ್ತೆ ಮಾಡಿದೆ.
ರಾಮೇಶ್ವರಂ ಕೆಫೆ ಬಾಂಬರ್ ಜಾಡು ಹಿಡಿದ ಎನ್ಐಎಗೆ (NIA) ಚೆನ್ನೈ ಲಿಂಕ್ ಸಿಕ್ಕಿದೆ. ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಶಂಕಿತ ಪರಾರಿಯಾಗಿದ್ದಾನೆ. ಸ್ಫೋಟಕ್ಕೂ ಮುನ್ನ ಶಂಕಿತ 2 ತಿಂಗಳು ತಮಿಳುನಾಡಿನಲ್ಲಿ ಉಳಿದಿದ್ದ. ಈ ವೇಳೆ ಶಂಕಿತನ ಜೊತೆಗೆ ಮತ್ತೋರ್ವ ವ್ಯಕ್ತಿ ಕೂಡ ಇದ್ದ. ಹೀಗೆ ಸ್ಫೋಟಕ್ಕೂ ಮುನ್ನ ಓಡಾಡಿದ್ದ ಶಂಕಿತನ ಜಾಡನ್ನು ಎನ್ಐಎ ಕಲೆ ಹಾಕಿದೆ. ಈ ವೇಳೆ ಶಂಕಿತ ತಮಿಳುನಾಡಿನಿಂದ ಬಂದಿರುವುದು ಪತ್ತೆಯಾಗಿದೆ.
ಶಂಕಿತ ಧರಿಸಿದ್ದ ಟೊಪಿಯ ಮೂಲವನ್ನು ಕೂಡ ಎನ್ಐಎ ಪತ್ತೆ ಹಚ್ಚಿದೆ. ಶಂಕಿತ ಧರಿಸಿದ್ದ ಟೋಪಿಯನ್ನು ತಮಿಳುನಾಡಿನ ಮಾಲ್ ಒಂದರಲ್ಲಿ ಖರೀದಿಸಿದ್ದಾನೆ. ಖರೀದಿ ವೇಳೆ ಮುಖ ಚಹರೆ ಸಮೇತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ಈಗಾಗಲೇ ಪತ್ತೆಯಾದ ಕ್ಯಾಪ್ನಲ್ಲಿ ಶಂಕಿತನ ಕೂದಲು ಕೂಡ ಸಿಕ್ಕಿದೆ. ಕೂದಲು ಆಧರಿಸಿ ಡಿಎನ್ಎ ಟೆಸ್ಟ್ ಸಹ ಒಳಪಡಿಸಿದೆ. ಒಟ್ಟಿನಲ್ಲಿ ಎನ್ಐಎ ತನಿಖೆ ವೇಳೆ ಇಬ್ಬರು ಶಿವಮೊಗ್ಗದವರೆಂಬ ಮಾಹಿತಿ ಸಿಕ್ಕಿದೆ.