ಲಂಡನ್: ಬಲವಂತದ ವಿವಾಹವನ್ನು ತಡೆಯಲು ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ಮದುವೆಯ ಕನಿಷ್ಠ ವಯಸ್ಸನ್ನು 18 ವರ್ಷಕ್ಕೆ ಏರಿಕೆ ಮಾಡಿ ಹೊಸ ಕಾನೂನನ್ನು ಜಾರಿಗೊಳಿಸಲಾಗಿದೆ.
ಈವರೆಗೆ 16 ಅಥವಾ 17 ವರ್ಷದ ಯುವಕ- ಯುವತಿಯರು ಮದುವೆಗೆ ಅರ್ಹರಲ್ಲ ಎನ್ನುವ ಯಾವುದೇ ಕಾನೂನು ಇಲ್ಲದ ಕಾರಣ ಪೋಷಕರ ಒಪ್ಪಿಗೆಯ ಮೇರೆಗೆ ಮದುವೆಯಾಗಬಹುದಿತ್ತು.
ವಿಶೇಷವಾಗಿ ದಕ್ಷಿಣ ಏಷ್ಯಾ ಮತ್ತು ಆಫ್ರಿಕನ್ ಜನಾಂಗಗಳು ಈ ರೀತಿಯ ಬಲವಂತದ ಮದುವೆಗೆ ಒಳಗಾಗುತ್ತಿದ್ದರು. ಇದೀಗ ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ಮದುವೆಯ ಕನಿಷ್ಠ ವಯಸ್ಸನ್ನು 18 ವರ್ಷಕ್ಕೆ ಏರಿಕೆ ಮಾಡಲಾಗಿದೆ.