ಆನೇಕಲ್:- ರಾಜಧಾನಿ ಬೆಂಗಳೂರು ಹೊರ ವಲಯದ ಆನೇಕಲ್ ನಲ್ಲಿ
ಪುಡಿ ರೌಡಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದೆ.
ರೌಡಿ ಪೆರೇಡ್ ಮಾಡಿದ್ರು ಡೋಂಟ್ ಕೇರ್ ಎಂದಿರುವ ಪುಂಡರು, ಕ್ಷುಲ್ಲಕ ಕಾರಣಕ್ಕೆ ಮಾರಕಸ್ತ್ರಗಳಿಂದ ಇರಿದು ಅಟ್ಟಹಾಸ ಮೆರೆದಿದ್ದಾರೆ. ಆನೇಕಲ್ ತಾಲೂಕಿನ ಸೂರ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೀಲಲಿಗೆಯಲ್ಲಿ ಘಟನೆ ಜರುಗಿದೆ.
ಕಿತ್ತಗಾನ ಹಳ್ಳಿ ಮೂಲದ ಸುನೀಲ್ ಹಾಗೂ ಕಾರ್ತಿಕ್ ಎಂಬುವವರಿಗೆ ಚಾಕು ಇರಿಯಲಾಗಿದ್ದು, ಕಿಶೋರ್,ಶ್ರೀದರ್,ವಾಲೆಮಂಜ,ಹೇಮಂತ್,ಮನೋಜ್,ತುಕಡಿ@ವೆಂಕಟರಾಜು ಎಂಬುವವರಿಂದ ಹಲ್ಲೆ ನಡೆದಿದೆ.
ಇತ್ತೀಚೆಗೆ ಜೈಲಿನಿಂದ ಕಿಶೋರ್ ಬಿಡುಗಡೆ ಆಗಿದ್ದ. ಅಂಕಿತ ಎಂಬ ಯುವಕ ರಸ್ತೆಗೆ ಅಡ್ಡಲಾಗಿದ್ದ ಲಾರಿಗೆ ಜಾಗ ಬಿಡುವಂತೆ ಹೇಳಿದ್ದ.ಇದೇ ಸಂದರ್ಭದಲ್ಲಿ ಟಿಟಿ ವಾಹನದಲ್ಲಿ ಶ್ರೀಧರ್ ಬಂದಿದ್ದ. ಟಿಟಿಯಲ್ಲಿ ಬಂದ ಶ್ರೀದರ್ ಏಕಾಏಕಿ ಅಂಕಿತ ಮೇಲೆ ಹಲ್ಲೆ ಮಾಡಿದ್ದಾರೆ. ಮೂರು ಜನರ ಮೇಲೆ 12 ಜನ ಅಟ್ಯಾಕ್ ಮಾಡಿದ್ದಾರೆ. ಘಟನೆ ಸಂಬಂಧ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.