ಬೆಂಗಳೂರು: ರಾಜ್ಯದಲ್ಲಿ ಜಲಕ್ಷಾಮ ಹೆಚ್ಚಾಗ್ತಾನೆ ಇದೆ. ಕುಡಿಯಲು ಜನರಿಗೆ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.. ಇನ್ನೂ ಕೆರೆಕುಂಟೆಗಳು ಒಣಗ್ತಿದ್ದು, ಜನಾವಾರುಗಳಿಗೂ ನೀರು ಇಲ್ಲದಂತಹ ಸ್ಥಿತಿ ಸೃಷ್ಟಿಯಾಗಿದೆ..ಸಿಲಿಕಾನ್ ಸಿಟಿಯಲ್ಲೂ ಇದೇ ಪರಿಸ್ಥಿತಿ ಇದೆ.. ನೀರನ್ನ ಉಳಿಸೋದಕ್ಕೆ ಜಲಮಂಡಳಿ ಹೊಸದೊಂದ ಪ್ಲಾನ್ ಮಾಡಿಕೊಂಡಿದ್ದು ನಲ್ಲಿಗಳಿಗೆ ಏರಿಯೇಟರ್ ಹಾಕೋದಕ್ಕೆ ಆದೇಶಿಸಿದೆ..
ಯೆಸ್ ಬೆಂಗಳೂರಿನಲ್ಲಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಡ್ಡಾಯ ಮಾಡಿ ಜಲಮಂಡಳಿ ಆದೇಶ ಮಾಡಿದ್ದು, ಏರಿಯೇಟರ್ ಅಳವಡಿಕೆಗೆ ಜಲ ಮಂಡಳಿಯಿಂದ ಮಾರ್ಚ್ 31ರ ಗಡವು ಸಹ ನೀಡಿದೆ.. ಇದನ್ನ ನಲ್ಲಿಗೆ ಹಾಕೋದ್ರಿಂದ ಶೇ ೬೦ ರಿಂದ ೮೫ ರಷ್ಟು ನೀರು ಉಳಿತಾಯ ಆಗಲಿದೆ ಅನ್ನೋದು ಜಲಮಂಡಳಿಯ ಲೆಕ್ಕಚಾರವಾಗಿದೆ... ದೊಡ್ಡ ದೊಡ್ಡ ಕಟ್ಟಡಗಳು, ವಾಣಿಜ್ಯ ಸಂಸ್ಥೆಗಳು, ರೆಸ್ಟೊರೆಂಟ್ಗಳು, ಐಷಾರಾಮಿ ಹೋಟೆಲ್ಗಳು, ಕೈಗಾರಿಕೆಗಳು ಮತ್ತು ಇತರ ಸಾರ್ವಜನಿಕ ಪ್ರದೇಶಗಳು ಸೇರಿದಂತೆ ಎಲ್ಲಕಡೆ ನಲ್ಲಿಗೆ ಏರಿಯೇಟರ್ ಹಾಕುವಂತೆ ಜಲಮಂಡಳಿ ಖಡ್ಡಾಯವಾಗಿ ತಿಳಿಸಿದೆ..
ಏರಿಯೇಟರ್ ಹೇಗೆ ನೀರಿನ ಪ್ರಮಾಣವನ್ನ ಕಡಿಮೆ ಮಾಡುತ್ತೆ ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡುತ್ತೆ..ನೀರನ್ನು ಸಂರಕ್ಷಿಸುವ ಉದ್ದೇಶದಿಂದ ಏರಿಯೇಟರ್ ಅಳವಡಿಕೆ ಸೂಚಿಸಲಾಗಿದೆ.. ಏರಿಯೇಟರ್ ಎನ್ನುವುದು ನಲ್ಲಿಗೆ ಅಳವಡಿಸುವ ಸಾಧನವಾಗಿದ್ದು ಇದು ನೀರಿನ ಹರಿವನ್ನು ನಿಯಂತ್ರಿಸುತ್ತದೆ…. ನರ್ಮಲ್ ಟ್ಯಪ್ನಲ್ಲಿ ಬರೋ ನೀರಿನ ಪ್ರಮಾಣಕ್ಕೂ,
ಏರಿಯೇಟರ್ ಹಾಕಿರೋ ಟ್ಯಪ್ ನಲ್ಲಿ ಬರೋ ನೀರಿನ ಪ್ರಮಾಣಕ್ಕೂ ಸಾಕಷ್ಟು ವ್ಯತ್ಯಾಸ ಇದ್ದು, ನೀರಿನ ಹರಿವು ಕಡಿಮೆಯಾಗಿ ನೀರು ಉಳಿಯುತ್ತೆ ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ. ಜಲಮಂಡಳಿ ಮಾರ್ಚ್ ೩೧ ರೊಳಗೆ ದೊಡ್ಡ ದೊಡ್ಡ ಕಟ್ಟಡಗಳು, ಹೋಟಲ್ ರೆಸ್ಟೋರೆಂಟ್, ಅಪಾರ್ಟ್ಮೆಂಟ್, ಸಾರ್ವಜನಿಕ ಸ್ಥಳಗಳ ನಲ್ಲಿಗಳಿಗೆ ಈ ಸೂಚನೆ ನೀಡಿದೆ.. ಉಳಿದವರು ಕೂಡ ತಮ್ಮ ತಮ್ಮ ಮನೆಗಳ ನಲ್ಲಿಗೆ ಏರಿಯೇಟರ್ ಹಾಕಿಸಿದ್ರೇ ಅನಗತ್ಯವಾಗಿ ಪೊಲಾಗುವ ನೀರು ಉಳಿಯುತ್ತೆ..