ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಕನ್ನಡ ಸಿನಿಮಾ ರಂಗಕ್ಕೆ ಹೊಸಬರೇನೂ ಅಲ್ಲ. ರವಿಚಂದ್ರನ್ ನಟನೆಯ ಪ್ರೀತ್ಸೋದು ತಪ್ಪಾ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ನಟಿ. ಇದೀಗ ಸಾಕಷ್ಟು ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಿದ್ದಾರೆ.
1998ರಲ್ಲಿ ಮೊದಲ ಬಾರಿಗೆ ಕನ್ನಡ ಸಿನಿಮಾ ರಂಗಕ್ಕೆ ಬಂದರು. ಆನಂತರ ಮತ್ತೆ ರವಿಮಾಮ ಜೊತೆ ಒಂದಾಗೋಣ ಬಾ ಚಿತ್ರದಲ್ಲಿ ನಟಿಸಿದರು. 2005ರಲ್ಲಿ ಉಪೇಂದ್ರ ಜೊತೆ ಆಟೋ ಶಂಕರ್ ಚಿತ್ರದಲ್ಲಿ ನಟಿಸಿದರು. ಅಲ್ಲಿಂದ ಈವರೆಗೂ ಶಿಲ್ಪಾ ಮತ್ತೆ ಕನ್ನಡದತ್ತ ಮುಖ ಮಾಡಿರಲಿಲ್ಲ. ಇದೀಗ ದೃವ ಸರ್ಜಾ ನಟನೆಯ ಪ್ರೇಮ್ ನಿರ್ದೇಶನದ ಸಿನಿಮಾದ ಮೂಲಕ ಮತ್ತೆ ಗಾಂಧಿನಗಕ್ಕೆ ಎಂಟ್ರಿಕೊಡ್ತಿದ್ದಾರೆ.
ಗುಳಿಕೆನ್ನೆ ಚೆಲುವೆ ಶಿಲ್ಪಾ ಸ್ಯಾಂಡಲ್ ವುಡ್ ಗೆ ಮತ್ತೆ ಕಮ್ ಬ್ಯಾಕ್ ಆಗುತ್ತಿದ್ದಾರೆ ಎನ್ನುವ ವರ್ತಮಾನ ‘ಕೆಡಿ’ ಅಡ್ಡಾದಿಂದ ಬಂದಿದೆ. ಧ್ರುವ ಸರ್ಜಾ ಮತ್ತು ಪ್ರೇಮ್ ಕಾಂಬಿನೇಷನ್ ನ ಈ ಸಿನಿಮಾದಲ್ಲಿ ಶಿಲ್ಪಾ ವಿಶೇಷ ಪಾತ್ರವನ್ನು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಶಿಲ್ಪಾ ಜೊತೆ ಮಾತುಕತೆ ಕೂಡ ಆಡಿದ್ದಾರಂತೆ.
ಈಗಾಗಲೇ ‘ಕೆಡಿ’ ಸಿನಿಮಾದಲ್ಲಿ ಸಂಜಯ್ ದತ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಎರಡು ಹಂತದ ಚಿತ್ರೀಕರಣಕ್ಕೂ ಅವರು ಬಂದಿದ್ದಾರೆ. ಇದೀಗ ಬಾಲಿವುಡ್ ನಿಂದ ಮತ್ತೋರ್ವ ಕಲಾವಿದರನ್ನು ಪ್ರೇಮ್ ಕರೆತರುತ್ತಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರಿಂದ, ಎಲ್ಲ ಭಾಷೆಗೂ ಸಲ್ಲುವಂತಹ ಕಲಾವಿದರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರಂತೆ ಪ್ರೇಮ್.