ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಎಲ್ಲರೂ ಆಚರಿಸಲಾಗುತ್ತದೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ. ಯಾವುದೇ ಹಬ್ಬವೂ ತನ್ನದೇ ಆದ ಆಚಾರ ಸಂಪ್ರದಾಯಗಳನ್ನು ಹೊಂದಿರುತ್ತದೆ. ಅದೇ ರೀತಿ ಹೋಳಿ ಬಣ್ಣಗಳ ಹಬ್ಬವಾಗಿದ್ದು, ದೂರದ ಊರಿನವರು ತಮ್ಮ ತಾಯ್ನಾಡಿಗೆ ಬಂದು ಈ ಹಬ್ಬವನ್ನು ಆಚರಿಸುತ್ತಾರೆ.
ಹೋಳಿ, ಬಣ್ಣಗಳ ಹಬ್ಬವು ಅನೇಕ ಕಥೆಗಳೊಂದಿಗೆ ಸಂಬಂಧ ಹೊಂದಿದೆ. ಅದರ ಹಿಂದೆ ಒಂದು ದೊಡ್ಡ ಇತಿಹಾಸವಿದೆ. ಹೋಳಿಯು ಜನಪ್ರಿಯ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಇದು ಮುಖ್ಯವಾಗಿ ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಸೂಚಿಸುತ್ತದೆ. ಇದು ಪ್ರೀತಿ ಮತ್ತು ಬಣ್ಣಗಳ ಹಬ್ಬವೂ ಹೌದು.
ಈ ಹಬ್ಬವನ್ನು ವಸಂತ ಮಾಸದಲ್ಲಿ ಆಚರಿಸಲಾಗುತ್ತದೆ. ಚಳಿಗಾಲದ ಕೊನೆಯನ್ನು ವಸಂತದ ಆಗಮನವನ್ನು ಸಾರುವ ಹಬ್ಬವಾಗಿದೆ. ಜನರು ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ. ಹೋಳಿ ಹಬ್ಬವನ್ನು ದಿನದಂದು ಮಕ್ಕಳಿಂದ ದೊಡ್ಡವರ ತನಕ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ಹಬ್ಬದ ಆಚರಣೆಯಲ್ಲಿ ದಿನ ಕಾಮನ ಸುಂದರ ಪ್ರತಿಮೆ ಮಾಡಿ ಶೃಂಗರಿಸಿ ಊರಿನ ಕಾಮನ ಕಟ್ಟೆಯ ಮೇಲೆ ಚಪ್ಪರ ಕಟ್ಟಿ ಇಡುತ್ತಾರೆ. ಕಾಮನ ಮುಂದೆ ಮಂಗಳ ವಾದ್ಯಗಳನ್ನು ಊದುತ್ತಾರೆ ಅದಲ್ಲದೆ ಪರಸ್ಪರ ಬೈಗುಳ, ಬಣ್ಣದ ನೀರು, ಸಗಣಿಯ ಗಂಜಲಗಳನ್ನು ಎರಚುತ್ತಾರೆ.
ಈ ಹಬ್ಬವನ್ನು ಭಾರತದಲ್ಲಿ ವಸಂತ ಋತುವಿನಲ್ಲಿ ಆಚರಿಸಲಾಗುತ್ತದೆ. ಇದು ಸುಗ್ಗಿಯ ಕಾಲವೂ ಹೌದು. ಗ್ರೆಗೋರಿಯನ್ ಕ್ಯಾಲೆಂಡರ್ನ ಮಾರ್ಚ್ ತಿಂಗಳಲ್ಲಿ ಬರುವ ಹಿಂದೂ ಕ್ಯಾಲೆಂಡರ್ ಪ್ರಕಾರ ಪೂರ್ಣಿಮೆಯ (ಹುಣ್ಣಿಮೆಯ ದಿನ) ದಿನ ಸಂಜೆ ಇದನ್ನು ಆಚರಿಸಲಾಗುತ್ತದೆ. ಪುರಾತನ ಭಾರತೀಯ ಪುರಾಣ ಮತ್ತು ಸಂಸ್ಕೃತಿಯು ಅದರ ಅಡಿಪಾಯವಾಗಿ ಕಾರ್ಯ ನಿರ್ವಹಿಸುತ್ತದೆ.
ಹೋಳಿ, ಬಣ್ಣಗಳ ಹಬ್ಬವು ಅನೇಕ ಕಥೆಗಳೊಂದಿಗೆ ಸಂಬಂಧ ಹೊಂದಿದೆ. ಅದರ ಹಿಂದೆ ಒಂದು ದೊಡ್ಡ ಇತಿಹಾಸವಿದೆ. ಹೋಳಿಯು ಜನಪ್ರಿಯ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಇದು ಮುಖ್ಯವಾಗಿ ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಸೂಚಿಸುತ್ತದೆ. ಇದು ಪ್ರೀತಿ ಮತ್ತು ಬಣ್ಣಗಳ ಹಬ್ಬವೂ ಹೌದು.
ಪ್ರಹ್ಲಾದ ಮತ್ತು ಹೋಲಿಕಾ ಕಥೆಯು ಹೋಳಿಗೆ ಸಂಬಂಧಿಸಿದ ಅತ್ಯಂತ ಪ್ರಸಿದ್ಧ ದಂತಕಥೆಗಳಲ್ಲಿ ಒಂದಾಗಿದೆ. ಪ್ರಹ್ಲಾದನ ತಂದೆಯಾದ ರಾಜ ಹಿರಣ್ಯಕಶಿಪು ಒಬ್ಬ ನಿರಂಕುಶಾಧಿಕಾರಿಯಾಗಿದ್ದು, ಅವನು ತನ್ನನ್ನು ದೇವರಂತೆ ಪೂಜಿಸಬೇಕೆಂದು ಒತ್ತಾಯಿಸಿದನು. ಆದರೆ, ಪ್ರಹ್ಲಾದನು ವಿಷ್ಣುವಿನ ಅನುಯಾಯಿಯಾಗಿದ್ದನು. ಹಿರಣ್ಯಕಶಿಪುವಿನ ಸಹೋದರಿ ಹೋಲಿಕಾ ತನ್ನ ಸಹೋದರನನ್ನು ಪೂಜಿಸಲು ನಿರಾಕರಿಸಿದ ಮತ್ತು ಭಗವಾನ್ ವಿಷ್ಣುವಿಗೆ ನಿಷ್ಠರಾಗಿದ್ದ ಪ್ರಹ್ಲಾದನನ್ನು ಜೀವಂತವಾಗಿ ಸುಡಲು ಪ್ರಯತ್ನಿಸಿದಳು. ಆದರೆ, ವಿಷ್ಣುವಿನ ರಕ್ಷಣೆಯಿಂದ ಪ್ರಹ್ಲಾದನು ಪ್ರಾಣಾಪಾಯದಿಂದ ಪಾರಾಗುತ್ತಾನೆ ಮತ್ತು ಹೋಲಿಕಾ ಸುಟ್ಟುಹೋಗುತ್ತಾಳೆ. ಹೋಳಿ ಸಮಯದಲ್ಲಿ ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಆಚರಿಸಲು ಮತ್ತು ಹೋಲಿಕಾ ದಹನವನ್ನು ಪ್ರತಿನಿಧಿಸಲು ದೀಪಗಳನ್ನು ಬೆಳಗಿಸಲಾಗುತ್ತದೆ.