ಚೆನ್ನೈ: 17ನೇ ಆವೃತ್ತಿಯ ಐಪಿಎಲ್ (IPL 2024) ಟೂರ್ನಿ ಅದ್ಧೂರಿಯಾಗಿ ಚಾಲನೆಗೊಂಡಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವಿನ ಖಾತೆ ತೆರೆದಿದೆ. ನೂತನ ನಾಯಕ ರುತುರಾಜ್ ಗಾಯಕ್ವಾಡ್ ಅವರ ನೇತೃತ್ವದಲ್ಲಿ ಸಿಎಸ್ಕೆ ಗೆಲುವು ಸಾಧಿಸಿದೆ. ಆದ್ರೆ ಪಂದ್ಯದ ಬಳಿಕ ರುತುರಾಜ್ ನಾಮಕಾವಸ್ಥೆಗೆ ಮಾತ್ರ ನಾಯಕನಾದ್ರಾ ಅನ್ನೋ ಪ್ರಶ್ನೆ ಎದ್ದಿದೆ.
ಟಾಸ್ ಸೋತು ಆರ್ಸಿಬಿ ವಿರುದ್ಧ ಮೊದಲು ಸಿಎಸ್ಕೆ ಫೀಲ್ಡಿಂಗ್ ಮಾಡಿತು. ಈ ವೇಳೆ ರುತುರಾಜ್ ನಾಯಕನಾಗಿದ್ದರೂ, ಎಂ.ಎಸ್ ಧೋನಿ ಅವರ ಮೇಲೆ ಕ್ಯಾಮೆರಾ ಹೆಚ್ಚು ಫೋಕಸ್ ಆಗಿತ್ತು. ರುತುರಾಜ್ ಬೌಲರ್ಗಳೊಂದಿಗೆ ಹಾಗೂ ಫೀಲ್ಡಿಂಗ್ ಸೆಟ್ ಮಾಡುತ್ತಿದ್ದ ದೃಶ್ಯ ಕೆಲವು ವೇಳೆ ಕಂಡುಬಂದರೂ ಧೋನಿ ಫೀಲ್ಡಿಂಗ್ ಸೆಟ್ ಮಾಡುತ್ತಿದ್ದಾಗ ಮಾತ್ರ ಅವರನ್ನು ಹೆಚ್ಚಾಗಿ ತೋರಿಸಲಾಗುತ್ತಿತ್ತು.
ಈ ವೇಳೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ದಯವಿಟ್ಟು ರುತುರಾಜ್ ಅವರ ಮುಖವನ್ನು ತೋರಿಸು ಗುರು ಅವರು ತಂಡದ ನಾಯಕ, ಕ್ಯಾಮೆರಾ ಮ್ಯಾನ್ ಧೋನಿಯ ಮುಖವನ್ನ ಮಾತ್ರ ತೋರಿಸ್ತಿದ್ದಾರೆ ಅಂತಾ ಹೇಳಿದ್ದಾರೆ. ಸೆಹ್ವಾಗ್ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ.